![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 10, 2024, 7:20 AM IST
ಅಹ್ಮದಾಬಾದ್: ಒಂದೆಡೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಇನ್ನೊಂದೆಡೆ ಕೊನೆಯ ಸ್ಥಾನಕ್ಕೆ ಕುಸಿದಿರುವ ಗುಜರಾತ್ ಟೈಟಾನ್ಸ್. ಈ ತಂಡಗಳು ಶುಕ್ರವಾರ ರಾತ್ರಿ ಅಹ್ಮದಾಬಾದ್‌ನಲ್ಲಿ 2ನೇ ಸುತ್ತಿನ ಮಖಾ ಮುಖೀಗೆ ಇಳಿಯಲಿವೆ. ಗುಜ ರಾತ್ ನಿರ್ಗಮನದ ಬಾಗಿ ಲಲ್ಲಿದ್ದರೆ, ಚೆನ್ನೈ ಪ್ಲೇ ಆಫ್ ಜಪ ಮಾಡುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ 11ರಲ್ಲಿ 6 ಪಂದ್ಯ ಗೆದ್ದರೂ ಇನ್ನೂ ಪ್ಲೇ ಆಫ್ ಪ್ರವೇಶವನ್ನು ಅಧಿಕೃತಗೊಳಿಸಿಲ್ಲ. ಗುಜರಾತನ್ನು ಮಣಿಸಿದರೆ ಅಂಕಪಟ್ಟಿ ಯಲ್ಲಿ ಹೈದರಾಬಾದನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರುವ ಅವಕಾಶ ಇದೆ. ಹೀಗಾಗಿ ಈ ಪಂದ್ಯವನ್ನು ಕಳೆದು ಕೊಳ್ಳಲು ಚೆನ್ನೈ ಯಾವ ಕಾರಣಕ್ಕೂ ಬಯಸದು.
ಗುಜರಾತ್ ಕೂಡ 11 ಪಂದ್ಯ ವಾಡಿದ್ದು, ಗೆದ್ದದ್ದು ನಾಲ್ಕನ್ನು ಮಾತ್ರ. ಉಳಿದ ಮೂರೂ ಪಂದ್ಯ ಗೆದ್ದರೆ ಶುಭಮನ್ ಗಿಲ್ ಪಡೆಯ ಅಂಕ 14ಕ್ಕೆ ಏರುತ್ತದೆ. ಆದರೆ ಇದು ಮುಂದಿನ ಸುತ್ತಿಗೇರಲು ಯಾತಕ್ಕೂ ಸಾಲದು. ಒಂದು ವೇಳೆ ಚೆನ್ನೈ ವಿರುದ್ಧ ಮತ್ತೆ ಸೋತರೆ ಗುಜರಾತ್ ತಂಡದ ಈ ಸಲದ ಆಟ ತವರಿನಂಗಳದಲ್ಲೇ ಸಮಾಪ್ತಿಯಾಗಲಿದೆ.
ಗುಜರಾತ್ ಕಳಪೆ ಆಟ:
ಮೊದಲ ಪ್ರವೇಶದಲ್ಲೇ ಚಾಂಪಿ ಯನ್ ಆಗಿ, ಕಳೆದ ವರ್ಷ ಮತ್ತೆ ಫೈನಲ್ ತನಕ ಲಗ್ಗೆ ಹಾಕಿದ್ದ ಗುಜರಾತ್ ಈ ಬಾರಿ ತೀರಾ ಕಳಪೆ ಪ್ರದರ್ಶನ ನೀಡುತ್ತ ಬಂದಿದೆ. ಟೂರ್ನಿ ನಿರ್ಣಾ ಯಕ ಹಂತ ತಲುಪಿರುವ ಸಂದರ್ಭ ದಲ್ಲೇ, ಕಳೆದ 5 ಪಂದ್ಯಗಳಲ್ಲಿ ಒಂದ ನ್ನಷ್ಟೇ ಗೆದ್ದಿರುವುದು ಗುಜರಾತ್‌ಗೆ ಎದು ರಾದ ಭಾರೀ ಹಿನ್ನಡೆ. ಒಂಥರ ಸಾಮೂಹಿಕ ವೈಫಲ್ಯ ಎನ್ನಲಡ್ಡಿಯಿಲ್ಲ.
ಪ್ರಧಾನ ವೇಗಿ ಮೊಹಮ್ಮದ್ ಶಮಿ ಗಾಯಾಳಾಗಿ ಕೂಟದಿಂದ ಹೊರ ಬಿದ್ದದ್ದು ಗುಜರಾತ್ ವೈಫಲ್ಯಕ್ಕೆ ಮುಖ್ಯ ಕಾರಣ. ಇದರಿಂದ ತಂಡದ ಬೌಲಿಂಗ್ ಫೈರ್ ಪವರ್ ಗೋಚರಿಸುತ್ತಿಲ್ಲ. ಮೋಹಿತ್ ಶರ್ಮ, ಜೋಶ್ ಲಿಟ್ಲ ಅವರಿಂದ ಪವರ್ ಪ್ಲೇಯಲ್ಲಿ ಧಾರಾಳ ರನ್ ಸೋರಿ ಹೋಗುತ್ತಿದೆ.
ಶುಭಮನ್ ಗಿಲ್ ಅವರಿಗೆ ನಾಯಕತ್ವ ಖಂಡಿತವಾಗಿಯೂ ಹೊರೆಯಾಗಿದೆ. ಇದು ಅವರ ಬ್ಯಾಟಿಂಗ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ 5 ಪಂದ್ಯಗಳಲ್ಲಿ ಗಿಲ್ ಅವರ ಗರಿಷ್ಠ ಗಳಿಕೆ 35 ರನ್ ಎಂಬುದು ಇದಕ್ಕೆ ಸಾಕ್ಷಿ!
ತಂಡದ ಪ್ರಮುಖ ಬ್ಯಾಟರ್‌ಗಳಾದ ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಶಾರುಕ್ ಖಾನ್ ಕೂಡ ರನ್ ಬರಗಾಲದಲ್ಲಿದ್ದಾರೆ.
ಸೀಮಿತ ಸಂಪನ್ಮೂಲದ ಚೆನ್ನೈ:
ಚೆನ್ನೈ ಕೂಡ ಒಂದು ಪರಿಪೂರ್ಣ ತಂಡವಾಗಿ ಉಳಿದಿಲ್ಲ. ಮುಖ್ಯವಾಗಿ ತಂಡದ ಬೌಲಿಂಗ್ ವಿಭಾಗದ ಶಕ್ತಿ ಗುಂದಿದೆ. ದೀಪಕ್ ಚಹರ್, ಮತೀಶ ಪತಿರಣ ಗಾಯಾಳಾಗಿ ಕೂಟದಿಂದಲೇ ಬೇರ್ಪಟ್ಟಿದ್ದಾರೆ. ಮುಸ್ತಫಿಜುರ್ ರೆಹಮಾನ್ ಮರಳಿ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ. ರವೀಂದ್ರ ಜಡೇಜ, ತುಷಾರ್ ದೇಶಪಾಂಡೆ ಅವರ ಸ್ಪಿನ್ ಮ್ಯಾಜಿಕ್ ನಡೆಯುತ್ತಿಲ್ಲ. ಸ್ಯಾಂಟ್ನರ್, ಮೊಯಿನ್ ಅಲಿ ಈವರೆಗೆ ಘಾತಕವಾಗೇನೂ ಪರಿಣಮಿಸಿಲ್ಲ. ಆದರೂ ಪಂಜಾಬ್ ವಿರುದ್ಧ ಧರ್ಮಶಾಲಾದಲ್ಲಿ 167 ರನ್ ಉಳಿಸಿಕೊಂಡ ಹೆಗ್ಗಳಿಕೆ ಚೆನ್ನೈ ತಂಡದ್ದು. ಅರ್ಥಾತ್, ಸೀಮಿತ ಸಂಪನ್ಮೂಲವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಂಡು ಯಶಸ್ಸು ಕಾಣಬಹುದು ಎಂಬ ಸಂಗತಿ ಚೆನ್ನೈಗೆ ಚೆನ್ನಾಗಿ ತಿಳಿದಿದೆ.
ಮುಖ್ಯವಾಗಿ ನಾಯಕ ಋತುರಾಜ್ ಗಾಯಕ್ವಾಡ್ ಸ್ವತಃ ಮುಂಚೂಣಿಯಲ್ಲಿ ನಿಂತು ತಂಡಕ್ಕೆ ಉಪಯುಕ್ತ ಮಾರ್ಗದರ್ಶನ ಒದಗಿಸುತ್ತಲೇ ಇದ್ದಾರೆ. ಹೀಗಾಗಿ ಈ ಸೀಸನ್‌ನಲ್ಲಿ ಚೆನ್ನೈ ಮತ್ತೂಮ್ಮೆ ಗುಜರಾತ್ ವಿರುದ್ಧ ಗೆದ್ದು ಬಂದರೆ ಅಚ್ಚರಿಯೇನಿಲ್ಲ.
ಮೊದಲ ಸುತ್ತಿನಲ್ಲಿ…
ಮಾ. 26ರಂದು ಚೆನ್ನೈಯಲ್ಲಿ ಆಡಲಾದ ಮೊದಲ ಸುತ್ತಿನ ಪಂದ್ಯ ದಲ್ಲಿ ಸಿಎಸ್‌ಕೆ 63 ರನ್ನು ಗಳ ಭಾರೀ ಅಂತರದಿಂದ ಜಯ ಸಾಧಿಸಿತ್ತು. ಇದು ರನ್ ಅಂತರದಲ್ಲಿ ಗುಜರಾತ್ ಅನುಭವಿಸಿದ ದೊಡ್ಡ ಸೋಲಾಗಿತ್ತು.
ಚೆನ್ನೈ 6 ವಿಕೆಟಿಗೆ 206 ರನ್ ಬಾರಿ ಸಿದರೆ, ಗುಜರಾತ್ 8 ವಿಕೆಟಿಗೆ 143 ರನ್ ಮಾಡಿ ಶರಣಾ ಗಿತ್ತು. ಸಿಎಸ್‌ಕೆ ಪರ ಶಿವಂ ದುಬೆ 51, ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ತಲಾ 46 ರನ್ ಮಾಡಿದ್ದರು. ಬಳಿಕ ದೀಪಕ್ ಚಹರ್, ಮುಸ್ತಫಿಜುರ್ ರೆಹಮಾನ್ ಮತ್ತು ತುಷಾರ್ ದೇಶ ಪಾಂಡೆ ಸೇರಿಕೊಂಡು ಘಾತಕ ಬೌಲಿಂಗ್ ದಾಳಿ ನಡೆಸಿದ ಪರಿ ಣಾಮ ಗಿಲ್ ಪಡೆಗೆ ಎದ್ದು ನಿಲ್ಲಲಾಗಲಿಲ್ಲ. 37 ರನ್ ಮಾಡಿದ ಸಾಯಿ ಸುದರ್ಶನ್ ಅವರದೇ ಹೆಚ್ಚಿನ ಗಳಿಕೆ ಆಗಿತ್ತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.