ಪ್ರೊ ಕಬಡ್ಡಿ: ಮತ್ತೆ ಸೋತ ಗುಜರಾತ್
Team Udayavani, Sep 4, 2017, 8:55 AM IST
ಕೋಲ್ಕತಾ: ಗೆಲುವಿನ ಹಳಿ ತಪ್ಪಿರುವ ಕನ್ನಡಿಗ ಸುಕೇಶ್ ಹೆಗ್ಡೆ ನೇತೃತ್ವದ ಗುಜರಾತ್ ಫಾರ್ಚೂನ್‌ಜೈಂಟ್ಸ್ ಮತ್ತೂಮ್ಮೆ ಮುಗ್ಗರಿಸಿದೆ. ಜೈಪುರ ಪಿಂಕ್ ಪ್ಯಾಂಥರ್ಸ್‌ನ ರಣತಂತ್ರಗಳನ್ನು ಬೇಧಿಸುವಲ್ಲಿ ಫಾರ್ಚೂನ್ ಸೋತಿತು. 25-31 ಅಂಕಗಳಿಂದ ಕಹಿ ಅನುಭವಿಸಿತು. ಇದು ಗುಜರಾತ್‌ಗೆ ಕೋಲ್ಕತಾದಲ್ಲಿ ಎದುರಾದ 2ನೇ ಸೋಲು.
ತಮಿಳ್ ತಲೈವಾಸ್ ವಿರುದ್ಧ ನಡೆದ ರವಿವಾರದ 2ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 29-25 ಅಂತರದಿಂದ ವಿಜಯ ಸಾಧಿಸಿತು. ಮೊದಲ 20 ನಿಮಿಷದಲ್ಲಿ 9 ಅಂಕಗಳಿಂದ ಹಿನ್ನಡೆ ಕಂಡ ತಲೈವಾಸ್, 38ನೇ ನಿಮಿಷದಲ್ಲಿ ಅಂಕ ಸಮಬಲದತ್ತ ಮುನ್ನುಗ್ಗಿತ್ತು. ಆದರೆ, ವಾರಿಯರ್ಸ್‌ನ ಮಣಿಂದರ್ ಸಿಂಗ್ ಅವರ ಕೊನೆಯ ಹಂತದಲ್ಲಿನ ಸೂಪರ್ ರೈಡ್‌ನ 3 ಅಂಕಗಳು, ತಲೈವಾಗೆ ಬಿಸಿ ತಟ್ಟಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ ಆಗಿದ್ದರೂ ಗುಜರಾತ್ ಪಾಲಿಗೆ ಇಲ್ಲಿನ ಸುಭಾಶ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಅದೃಷ್ಟ ಕುದುರುತ್ತಿಲ್ಲ. ಪ್ಯಾಂಥರ್ಸ್ ನಾಯಕ ಜಸ್ವೀರ್ ಸಿಂಗ್‌ರ ಪರಿಣಾಮಕಾರಿ ದಾಳಿಗೆ ಗುಜರಾತ್ ಬಳಿ ಪ್ರತಿ ತಂತ್ರಗಳೇ ಇರಲಿಲ್ಲ.
ಆರಂಭದಲ್ಲೇ ಹಿನ್ನಡೆ: ಗುಜರಾತ್‌ನ ತ್ರಿವಳಿ ಸ್ಟಾರ್ ರೈಡರ್‌ಗಳನ್ನು ಅಕ್ಷರಶಃ ಪೆವಿಲಿಯನ್‌ನಲ್ಲಿ ಪ್ಯಾಂಥರ್ಸ್ ಕೂರಿಸಿತು. ಆರಂಭದಿಂದಲೇ ಮುನ್ನಡೆ ಸಾಧಿಸಿತು. ಸುಕೇಶ್, ಸಚಿನ್, ರೋಹಿತ್ ಕೋರ್ಟ್ ಒಳಗೆ ಇದ್ದಿದ್ದೇ ಕಡಿಮೆ. 19ನೇ ನಿಮಿಷದಲ್ಲಿ ಪ್ಯಾಂಥರ್ಸ್‌ನ ಜಸ್ವೀರ್ ಸಿಂಗ್ “ಮಾಡು ಮಡಿ’ಯ ಮುನ್ನುಗ್ಗುವಿಕೆಯಲ್ಲಿ 2 ಸೂಪರ್ ರೈಡಿಂಗ್ ಪಾಯಿಂಟ್ ಕಲೆಹಾಕಿ, ಗುಜರಾತ್‌ನ ಮನೆ ಖಾಲಿ ಮಾಡಿಸಿದರು.
ಲೆಕ್ಕಾಚಾರ ಉಲ್ಟಾ: ಸಾಮಾನ್ಯವಾಗಿ ಕಬಡ್ಡಿಯಲ್ಲಿ ಜಾದೂ ನಡೆಯುವುದು ದ್ವಿತೀಯಾರ್ಧದಲ್ಲಿ. ಆದರೆ, ಗುಜರಾತ್‌ನ ಪೇಲವ ದಾಳಿ, ಅಭದ್ರ ರಕ್ಷಣಾದಳಕ್ಕೆ ಪ್ಯಾಂಥರ್ಸ್‌ನ ಓವರ್‌ಟೇಕ್ ಮಾಡುವ ಸಾಮರ್ಥ್ಯವೇ ಕುಂದಿತ್ತು. ಅತ್ತ ಮೇಲಿಂದ ಮೇಲೆ ‘ಮಾಡು ಮಡಿ’ ಅಂಕಗಳನ್ನು ಮುಡಿಗೇರಿಸಿಕೊಂಡ ಜೈಪುರ ಭರ್ಜರಿ ಅಂತರವನ್ನೇ ಕಾಯ್ದುಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್
Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.