ಗುಜರಾತ್‌ಗೆ ಮೊದಲ ರಣಜಿ ಕಿರೀಟ

Team Udayavani, Jan 15, 2017, 9:10 AM IST

NT-9.jpg

ಇಂದೋರ್‌: ಗುಜರಾತ್‌ ಮೊದಲ ಬಾರಿಗೆ ದೇಶಿ ಕ್ರಿಕೆಟಿನ ಸಾಮ್ರಾಟನಾಗಿ ಮೆರೆದಿದೆ. ರಣಜಿ ಟ್ರೋಫಿ ಗೆದ್ದು ಹೊಸ ಇತಿಹಾಸ ಬರೆದಿದೆ. ಪ್ರಶಸ್ತಿ ಕಾಳಗದಲ್ಲಿ ಹಾಲಿ ಹಾಗೂ 41 ಬಾರಿಯ ಚಾಂಪಿಯನ್‌ ಮುಂಬಯಿಯನ್ನು 5 ವಿಕೆಟ್‌ಗಳಿಂದ ಅಧಿಕಾರಯುತವಾಗಿ ಮಣಿಸಿ ತನ್ನ ತಾಕತ್ತು ಏನೆಂಬುದನ್ನು ತೋರಿದೆ. 

ಇಂದೋರ್‌ನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ನಡೆದ 2016-17ನೇ ಋತುವಿನ ರಣಜಿ ಫೈನಲ್‌ನಲ್ಲಿ 312 ರನ್ನುಗಳ ಗೆಲುವಿನ ಗುರಿ ಪಡೆದ ಗುಜರಾತ್‌, ಅಂತಿಮ ದಿನವಾದ ಶನಿವಾರ 5 ವಿಕೆಟಿಗೆ 313 ರನ್‌ ಮಾಡಿ ಜಯಭೇರಿ ಮೊಳಗಿ ಸಿತು. ಇದರೊಂದಿಗೆ ಗುಜರಾತ್‌ ರಣಜಿ ಚಾಂಪಿಯನ್‌ ಎನಿಸಿಕೊಂಡ 17ನೇ ತಂಡವಾಗಿ ಮೂಡಿಬಂತು. ನಾಯಕ ಪಾರ್ಥಿವ್‌ ಪಟೇಲ್‌ 143 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 

ಗುಜರಾತ್‌ ಆಡಿದ ಕೇವಲ 2ನೇ ರಣಜಿ ಫೈನಲ್‌ ಇದೆಂಬುದು ಉಲ್ಲೇಖನೀಯ. ಅದು ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆದದ್ದು 66 ವರ್ಷಗಳಷ್ಟು ಹಿಂದೆ, 1950-51ರ ಸರಣಿಯಲ್ಲಿ. ಕಾಕತಾಳೀಯವೆಂದರೆ ಅಂದು ಇದೇ ಇಂದೋರ್‌ ಸ್ಟೇಡಿಯಂನಲ್ಲೇ ಗುಜ ರಾತ್‌ ಫೈನಲ್‌ ಆಡಿತ್ತು. ಆದರೆ ಎದುರಾಳಿ ಹೋಳ್ಕರ್‌ ವಿರುದ್ಧ 189 ರನ್ನುಗಳ ಸೋಲಿಗೆ ತುತ್ತಾಗಿತ್ತು.

ಪಾರ್ಥಿವ್‌ ಪಟೇಲಗಿರಿ !
ಈ ಪಂದ್ಯ ಡ್ರಾಗೊಂಡರೂ ಗುಜರಾತ್‌ ಚಾಂಪಿ ಯನ್‌ ಆಗಿ ಮೂಡಿಬರುತ್ತಿತ್ತು. ಕಾರಣ, ಮೊದಲ ಇನ್ನಿಂಗ್ಸ್‌ನಲ್ಲಿ ಲಭಿಸಿದ ಭರ್ತಿ 100 ರನ್ನುಗಳ ಮುನ್ನಡೆ. ಆದರೆ ನಾಯಕ ಪಾರ್ಥಿವ್‌ ಪಟೇಲ್‌ ಕಪ್ತಾನನ ಆಟದ ಪ್ರಚಂಡ ಪ್ರದರ್ಶನ ನೀಡಿ ತಂಡಕ್ಕೆ ಸ್ಪಷ್ಟ ಗೆಲುವನ್ನು ತಂದಿತ್ತರು. 

4ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಪಾರ್ಥಿವ್‌ ಎಂದಿನ ಆಕ್ರಮಣಕಾರಿ ಆಟಕ್ಕೆ ಮುಂದಾಗಿ 196 ಎಸೆತಗಳಿಂದ 143 ರನ್‌ ಬಾರಿಸಿ ದರು. ಚೆಂಡನ್ನು 24 ಸಲ ಬೌಂಡರಿಗೆ ಅಟ್ಟಿದರು. ಪಟೇಲ್‌ ಔಟಾಗಿ ಹೋಗುವಾಗ ಗುಜರಾತ್‌ ಜಯಕ್ಕೆ ಕೇವಲ 13 ರನ್‌ ಅಗತ್ಯವಿತ್ತು. 

ಪಾರ್ಥಿವ್‌ ಪಟೇಲ್‌ ಮುಂಬಯಿ ವಿರುದ್ಧ ಬಾರಿಸಿದ 5ನೇ ಶತಕ ಇದಾಗಿದೆ. ಬೇರೆ ಯಾವ ತಂಡದ ವಿರುದ್ಧವೂ ಅವರು ಎರಡಕ್ಕಿಂತ ಹೆಚ್ಚು ಶತಕ ಬಾರಿಸಿಲ್ಲ. ಒಟ್ಟಾರೆಯಾಗಿ ಇದು ಪಾರ್ಥಿವ್‌ ಬಾರಿಸಿದ 25ನೇ ಪ್ರಥಮ ದರ್ಜೆ ಶತಕ
ವೆಂಬುದು ಉಲ್ಲೇಖನೀಯ.

ಪಾರ್ಥಿವ್‌ ಪಟೇಲ್‌ ಮೊದಲ ಸರದಿಯಲ್ಲೂ ಕ್ರೀಸ್‌ ಆಕ್ರಮಿಸಿಕೊಂಡು 90 ರನ್‌ ಕೊಡುಗೆ ಸಲ್ಲಿಸಿದ್ದನ್ನು ಮರೆಯುವಂತಿಲ್ಲ. ಒಟ್ಟು 6 ಕ್ಯಾಚ್‌, 2  ರನೌಟ್‌ ಮೂಲಕವೂ ಪಾರ್ಥಿವ್‌ ಪಟೇಲ್‌ ತಮ್ಮ ಕೈಚಳಕ ತೋರಿಸಿದ್ದರು. ವಿಜಯ್‌ ಹಜಾರೆಯಲ್ಲೂ ಮಿಂಚು
2015ರ ವಿಜಯ್‌ ಹಜಾರೆ ಟ್ರೋಫಿ ಏಕದಿನ ಫೈನಲ್‌ನಲ್ಲೂ ಶತಕ ಬಾರಿಸಿದ ಪಾರ್ಥಿವ್‌ ಪಟೇಲ್‌, ಗುಜರಾತ್‌ಗೆ ಮೊದಲ ಸಲ ಈ ಪ್ರಶಸ್ತಿ ತಂದಿತ್ತ ನಾಯಕನಾಗಿ ಮೆರೆದಿದ್ದರು. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್‌ 139 ರನ್ನುಗಳ ಅಂತರದಿಂದ ದಿಲ್ಲಿಯನ್ನು ಉರುಳಿಸಿತ್ತು. ಪಾರ್ಥಿವ್‌ ಕೊಡುಗೆ 105 ರನ್‌. ಇದೀಗ ರಣಜಿ ಟ್ರೋಫಿಯಲ್ಲೂ ಪಾರ್ಥಿವ್‌ ಅವರಿಂದ ಇತಿಹಾಸ ಪುನರಾವರ್ತನೆಗೊಂಡಿದೆ. ಇತ್ತೀಚೆಗೆ ಟೀಮ್‌ ಇಂಡಿಯಾಕ್ಕೆ ಮರಳಿ ಪ್ರವೇಶ ಪಡೆದ ಪಾರ್ಥಿವ್‌ ಪಾಲಿಗೆ ಇದು “ಕ್ರಿಕೆಟಿನ ಸುವರ್ಣ ಕಾಲ’ ಎನ್ನಲಡ್ಡಿಯಿಲ್ಲ! ಗುಜರಾತ್‌ ವಿಕೆಟ್‌ ನಷ್ಟವಿಲ್ಲದೆ 47 ರನ್‌ ಗಳಿಸಿದಲ್ಲಿಂದ ಅಂತಿಮ ದಿನದಾಟ ಮುಂದು ವರಿಸಿತ್ತು. ಆರಂಭಿಕರಾದ ಪ್ರಿಯಾಂಕ್‌ ಪಾಂಚಾಲ್‌ (34), ಸಮಿತ್‌ ಗೋಹೆಲ್‌ (21), ವನ್‌ಡೌನ್‌ ಆಟಗಾರ ಭಾರ್ಗವ್‌ ಮಿರಾಯ್‌ (2) 89 ರನ್‌ ಆಗುವಷ್ಟರಲ್ಲಿ ನಿರ್ಗಮಿಸಿದಾಗ ಗುಜರಾತ್‌ ಆತಂಕಕ್ಕೆ ಸಿಲುಕಿತ್ತು. ಆದರೆ ಪಾರ್ಥಿವ್‌ ಪಟೇಲ್‌ ಪಟ್ಟು ಸಡಿಲಿಸಲಿಲ್ಲ. ಅವರಿಗೆ ಮನ್‌ಪ್ರೀತ್‌ ಜುನೇಜ (54) ಉತ್ತಮ ಬೆಂಬಲ ನೀಡಿದರು. ಇವರಿಂದ 4ನೇ ವಿಕೆಟಿಗೆ 116 ರನ್‌ ಒಟ್ಟುಗೂಡಿತು. ಬಳಿಕ ರುಜುಲ್‌ ಭಟ್‌ (ಔಟಾಗದೆ 27) ಜವಾಬ್ದಾರಿ ಹೊತ್ತುಕೊಂಡರು. ಪಟೇಲ್‌-ಭಟ್‌ ಜತೆಯಾಟದಲ್ಲಿ 94 ರನ್‌ ಸಂಗ್ರಹಗೊಂಡಿತು. 

ರಣಜಿ ಫೈನಲ್‌  ಚೇಸಿಂಗ್‌ ದಾಖಲೆ
ಗುಜರಾತ್‌ 312 ರನ್‌ ಬೆನ್ನಟ್ಟಿ ಗೆದ್ದದ್ದು ರಣಜಿ ಇತಿಹಾಸದ ನೂತನ ಚೇಸಿಂಗ್‌ ದಾಖಲೆ ಎನಿಸಿಕೊಂಡಿದೆ. ಇದಕ್ಕೂ ಹಿಂದಿನ ದಾಖಲೆ 310 ರನ್‌ ಆಗಿತ್ತು. 1937-38ರಷ್ಟು ಹಿಂದೆ ನವಾ ನಗರ್‌ ತಂಡದ ವಿರುದ್ಧ ಹೈದರಾಬಾದ್‌ ಈ ಸಾಧನೆ ಮಾಡಿತ್ತು. ಮುಂಬಯಿಯಲ್ಲಿ ನಡೆದ ಈ ಪಂದ್ಯದಲ್ಲಿ ಹೈದರಾಬಾದ್‌ ತಂಡದ ಗೆಲುವಿನ ಅಂತರ ಕೇವಲ ಒಂದು ವಿಕೆಟ್‌ ಎಂಬುದನ್ನು ಮರೆಯುವಂತಿಲ್ಲ.
 
ಸಂಕ್ಷಿಪ್ತ ಸ್ಕೋರ್‌ 
ಮುಂಬಯಿ-228 ಮತ್ತು 411. ಗುಜರಾತ್‌-328 ಮತ್ತು 5 ವಿಕೆಟಿಗೆ 313 (ಪಾರ್ಥಿವ್‌ ಪಟೇಲ್‌ 143, ಮನ್‌ಪ್ರೀತ್‌ ಜುನೇಜ 54, ಪ್ರಿಯಾಂಕ್‌ ಪಾಂಚಾಲ್‌ 34, ರುಜುಲ್‌ ಭಟ್‌ ಔಟಾಗದೆ 27, ಸಮಿತ್‌ ಗೋಹೆಲ್‌ 21, ಬಲ್ವಿಂದರ್‌ ಸಂಧು 101ಕ್ಕೆ 2). 

ಪಂದ್ಯಶ್ರೇಷ್ಠ: ಪಾರ್ಥಿವ್‌ ಪಟೇಲ್‌.

ಟಾಪ್ ನ್ಯೂಸ್

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

Agarwal

Vijay Hazare Trophy; ಮಯಾಂಕ್‌ ಅಗರ್ವಾಲ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.