ಹರ್ಯಾಣಕ್ಕೆ ಬೆದರಿದ ಗುಜರಾತ್
Team Udayavani, Aug 28, 2019, 11:32 PM IST
ಹೊಸದಿಲ್ಲಿ: ಬುಧವಾರದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡ 41-25 ಅಂಕಗಳ ಅಂತರದಿಂದ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವನ್ನು ಸೋಲಿಸಿದೆ.
ಎಲ್ಲ ವಿಭಾಗಗಳಲ್ಲೂ ಅದ್ಭುತವಾಗಿ ಆಡಿದ ಹರ್ಯಾಣ ಎದುರಾಳಿಯನ್ನು ಸಂಪೂರ್ಣವಾಗಿ ಮಟ್ಟಹಾಕಿತು. ಹರ್ಯಾಣ ಈಗ 11 ಪಂದ್ಯಗಳಲ್ಲಿ 7 ಜಯ, 4 ಸೋಲಿನೊಂದಿಗೆ 36 ಅಂಕ ಗಳಿಸಿದೆ. ಸದ್ಯ ಅದು 3ನೇ ಸ್ಥಾನದಲ್ಲಿದೆ. ಇನ್ನೊಂದು ಕಡೆ ಗುಜರಾತ್ 11 ಪಂದ್ಯಗಳಲ್ಲಿ 7 ಸೋಲು, 4 ಗೆಲುವಿನೊಂದಿಗೆ 9ನೇ ಸ್ಥಾನ ಪಡೆದಿದೆ.
ಹರ್ಯಾಣ ಪರ ಕರ್ನಾಟಕದ ಪ್ರಶಾಂತ್ ಕುಮಾರ್ ರೈ 12 ಬಾರಿ ದಾಳಿ ನಡೆಸಿ 8 ಅಂಕ ಗಳಿಸಿದರು. ಎದುರಾಳಿ ಕೋಟೆಯೊಳಗೆ ನುಗ್ಗಿಹೋಗಿ ಅದ್ಭುತ ಯಶಸ್ಸು ಪಡೆದರು. ಇವರಿಗೆ ರಕ್ಷಣೆಯಲ್ಲಿ ರವಿಕುಮಾರ್ ಅಮೋಘ ನೆರವು ನೀಡಿದರು.
ಇನ್ನೊಂದು ಕಡೆ ಗುಜರಾತ್ ಎಲ್ಲ ವಿಭಾಗಗಳಲ್ಲಿ ಪೂರ್ಣವೈಫಲ್ಯ ಅನುಭವಿಸಿತು. ಹಿಂದಿನ ಆವೃತ್ತಿಯಲ್ಲಿ ತೋರಿಸಿದ ಚಾಕಚಕ್ಯತೆ ಈ ಬಾರಿ ಕಾಣಿಸಿಲ್ಲ. ಆ ತಂಡದ ಪರ ಅಬೊಲ್ ಫಜಲ್ 6 ಬಾರಿ ದಾಳಿ ನಡೆಸಿ 4 ಅಂಕ, ರಕ್ಷಣೆಯಲ್ಲಿ ಮೋರೆ 2 ಅಂಕ ಗಳಿಸಿದರು.
ಮುಂಬಾಗೆ ಡೆಲ್ಲಿ ಏಟು
ಬುಧವಾರದ ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ 40-24 ಅಂಕಗಳ ಅಂತರದಿಂದ ಯು ಮುಂಬಾ ತಂಡವನ್ನು ಸೋಲಿಸಿತು. ಈ ಪಂದ್ಯವೂ ಬಹುತೇಕ ಏಕಪಕ್ಷೀಯವಾಗಿಯೇ ಸಾಗಿತು. ಡೆಲ್ಲಿ ಯಾವುದೇ ಹಂತದಲ್ಲಿ ಮುಂಬಾಗೆ ಚೇತರಿಸಿಕೊಳ್ಳಲು ಬಿಡಲಿಲ್ಲ. ಡೆಲ್ಲಿ ತಂಡದ ದಾಳಿಯಲ್ಲಿ ನವೀನ್ ಕುಮಾರ್ ಯಶಸ್ವಿಯಾದರು. 21 ಯತ್ನಗಳಲ್ಲಿ 11 ಅಂಕ ಗಳಿಸಿದರು. ರಕ್ಷಣೆಯಲ್ಲಿ ರವೀಂದರ್ ಪಹಲ್ ಅದ್ಭುತವಾಗಿ ಆಡಿ 8 ಅಂಕ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.