Gukesh Dommaraju; ಬಾಲ್ಯದಲ್ಲೇ ಚಿಗುರಿತ್ತು ‘ವಿಶ್ವ ಚಾಂಪಿಯನ್’ ಕನಸು
Team Udayavani, Dec 13, 2024, 6:29 AM IST
ಆಂಧ್ರಪ್ರದೇಶ ತೆಲುಗು ಮೂಲದ ಕುಟುಂಬದವರಾದ ಗುಕೇಶ್ ಜನಿಸಿದ್ದು 29 ಮೇ 2006 ಚೆನ್ನೈಯಲ್ಲಿ. ಶಸ್ತ್ರಚಿಕಿತ್ಸಕ ಡಾ.ರಜಿನಿಕಾಂತ್ ಮತ್ತು ಮೈಕ್ರೋಬಯಾಲಾಜಿಸ್ಟ್ ಡಾ.ಪದ್ಮಾ ಅವರ ಪುತ್ರ ಗುಕೇಶ್‌ಗೆ ಎಳವೆಯಲ್ಲಿಯೇ ಚೆಸ್ ಬಗ್ಗೆ ಆಸಕ್ತಿ. 9ನೇ ವಯಸ್ಸಿನಿಂದಲೂ ಏಷ್ಯನ್ ಸ್ಕೂಲ್ ಚೆಸ್‌ನಂತಹ ಕೂಟಗಳಲ್ಲಿ ಪಾಲ್ಗೊಳ್ಳತೊಡಗಿದ ಗುಕೇಶ್, 2019ರಲ್ಲಿ 12 ವರ್ಷ 7 ತಿಂಗಳು ಪ್ರಾಯದವರಾಗಿದ್ದ ಗ್ರ್ಯಾಂಡ್ ಮಾಸ್ಟರ್ ಆಗಿ ಗುರುತಿಸಿಕೊಂಡರು. ಅಂದೇ ಗುಕೇಶ್ ತಾನೊಂದು ದಿನ ವಿಶ್ವ ಚಾಂಪಿಯನ್ ಆಗುವ ಕನಸು ಕಂಡಿದ್ದರಲ್ಲದೆ, ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು ಕೂಡ.
2022ರಲ್ಲಿ ಚೆನ್ನೈಯಲ್ಲಿ ನಡೆದಿದ್ದ ಚೆಸ್ ಒಲಿಂಪಿಯಾಡ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದು ಮಿಂಚಿದ್ದರು. ಈ ವರ್ಷ, ಅಂದರೆ 2024ರಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದಿದ್ದ ಗುಕೇಶ್, ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ತನ್ನಾಸೆಯನ್ನೂ ಈಗ ನೆರವೇರಿಸಿಕೊಂಡಿದ್ದಾರೆ. ಅಂದಹಾಗೆ, ಪ್ರಸ್ತುತ 2783 ಫಿಡೇ ರೇಟಿಂಗ್‌ನೊಂದಿಗೆ 5ನೇ ರ್‍ಯಾಂಕಿಂಗ್‌ನಲ್ಲಿರುವ ಗುಕೇಶ್, ಕಳೆದ ಅಕ್ಟೋಬರ್‌ನಲ್ಲಿ 2794 ಫಿಡೇ ರೇಟಿಂಗ್‌ನೊಂದಿಗೆ ಜೀವನ ಶ್ರೇಷ್ಠ ಸಾಧನೆ ಮೆರೆದಿದ್ದರು.
12 ವರ್ಷದಲ್ಲೇ ಗ್ರ್ಯಾಂಡ್ ಮಾಸ್ಟರ್: ವಿಶ್ವದ 2ನೇ ಕಿರಿಯ
2019ರಲ್ಲಿ 12 ವರ್ಷ 7 ತಿಂಗಳು ಪ್ರಾಯದವರಾಗಿದ್ದ ಗುಕೇಶ್, ವಿಶ್ವದ 2ನೇ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದರು. 12 ವರ್ಷ, 4 ತಿಂಗಳು ಪ್ರಾಯದವರಾಗಿದ್ದಾಗ ಗ್ರ್ಯಾಂಡ್‌ಮಾಸ್ಟರ್ ಎನಿಸಿದ್ದ ಅಮೆರಿಕದ ಅಭಿಮನ್ಯು ಮಿಶ್ರಾ ವಿಶ್ವದ ಕಿರಿಯ ಗ್ರ್ಯಾಂಡ್‌ಮಾಸ್ಟರ್ ದಾಖಲೆ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಣಿಪಾಲ್ ಕಾರ್ಡಿಯಾಲಜಿ ಅಪ್ಡೇಟ್ 2024 ಸಮ್ಮೇಳನ: 15ನೇ ವರ್ಷದ ಕ್ರಿಸ್ಟಲ್ ಜುಬಿಲಿ ಆಚರಣೆ
Tamil Nadu: ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 7 ಮಂದಿ ಸಾ*ವು, ಹಲವರ ರಕ್ಷಣೆ
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ
Mangaluru: ಭೌತಿಕ ಅಂಕಪಟ್ಟಿ ಸಿಗದೆ ಕಂಗಾಲು! ಡಿಜಿಟಲ್ ಅಂಕಪಟ್ಟಿಯಲ್ಲಿ ನೂರಾರು ಅಪಸವ್ಯಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.