ಗಪ್ಟಿಲ್ ಅಜೇಯ ಶತಕ ನ್ಯೂಜಿಲ್ಯಾಂಡಿಗೆ ಸುಲಭ ಗೆಲುವು
Team Udayavani, Feb 14, 2019, 12:30 AM IST
ನೇಪಿಯರ್: ಭಾರತದೆದುರು ಫಾರ್ಮ್ನಲ್ಲಿಲ್ಲದ ಆರಂಭಕಾರ ಮಾರ್ಟಿನ್ ಗಪ್ಟಿಲ್, ಬಾಂಗ್ಲಾದೇಶ ವಿರುದ್ಧ ಅಜೇಯ ಶತಕ ಬಾರಿಸಿ ನ್ಯೂಜಿಲ್ಯಾಂಡಿನ ಗೆಲುವಿನ ಹೀರೋ ಆಗಿ ಮೂಡಿಬಂದಿದ್ದಾರೆ. ಬುಧವಾರ ನೇಪಿಯರ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 48.5 ಓವರ್‌ಗಳಲ್ಲಿ 232ಕ್ಕೆ ಆಲೌಟಾದರೆ, ನ್ಯೂಜಿಲ್ಯಾಂಡ್ 44.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 233 ರನ್ ಬಾರಿಸಿತು. ಆಗ ಮಾರ್ಟಿನ್ ಗಪ್ಟಿಲ್ 117 ರನ್, ರಾಸ್ ಟಯ್ಲರ್ 45 ರನ್ ಮಾಡಿ ಅಜೇಯರಾಗಿದ್ದರು. ಇದು ಬಾಂಗ್ಲಾದೇಶದ 5ನೇ ನ್ಯೂಜಿಲ್ಯಾಂಡ್ ಪ್ರವಾಸವಾಗಿದ್ದು, ಇಲ್ಲಿಯ ವರೆಗೆ ಬಾಂಗ್ಲಾ ಇಲ್ಲಿ ಯಾವ ಮಾದರಿಯ ಪಂದ್ಯವನ್ನೂ ಗೆದ್ದಿಲ್ಲ.
103 ರನ್ ಜತೆಯಾಟ
ಆಕ್ರಮಣಕಾರಿ ಆಟಕ್ಕಿಳಿದ ಗಪ್ಟಿಲ್ 116 ಎಸೆತಗಳಿಂದ 117 ರನ್ ಬಾರಿಸಿ ಮಿಂಚಿದರು. ಇದು ಅವರ 15ನೇ ಶತಕ. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, 4 ಸಿಕ್ಸರ್ ಸೇರಿತ್ತು. ಮತ್ತೋರ್ವ ಆರಂಭಕಾರ ಹೆನ್ರಿ ನಿಕೋಲ್ಸ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 53 ರನ್ ಹೊಡೆದರು (80 ಎಸೆತ, 5 ಬೌಂಡರಿ). ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 22.3 ಓವರ್‌ಗಳಿಂದ 103 ರನ್ ಒಟ್ಟುಗೂಡಿತು.
ಬಾಂಗ್ಲಾದೇಶ ಸರದಿಯನ್ನು ಆಧರಿಸಿದವರು ಮೊಹಮ್ಮದ್ ಮಿಥುನ್ ಮತ್ತು ಮೊಹಮ್ಮದ್ ಸೈಫುದ್ದೀನ್. ಇವರಿಂದ 8ನೇ ವಿಕೆಟಿಗೆ 84 ರನ್ ಒಟ್ಟುಗೂಡಿತು. 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಮಿಥುನ್ ಅವರದು ಸರ್ವಾಧಿಕ 62 ರನ್ ಕೊಡುಗೆ (90 ಎಸೆತ, 5 ಬೌಂಡರಿ). ಮೊಹಮ್ಮದ್ ಸೈಫುಲ್ 58 ಎಸೆತಗಳಿಂದ 41 ರನ್ ಮಾಡಿದರು.ನ್ಯೂಜಿಲ್ಯಾಂಡ್ ಸಾಂ ಕ ಬೌಲಿಂಗ್ ಮೂಲಕ ಬಾಂಗ್ಲಾಕ್ಕೆ ಕಡಿವಾಣ ಹಾಕಿತು. ಸರಣಿಯ 2ನೇ ಪಂದ್ಯ ಶನಿವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-48.5 ಓವರ್‌ಗಳಲ್ಲಿ 232 (ಮಿಥುನ್ 62, ಸೈಫುದ್ದೀನ್ 41, ಸರ್ಕಾರ್ 30, ಬೌಲ್ಟ್ 40ಕ್ಕೆ 3, ಸ್ಯಾಂಟ್ನರ್ 45ಕ್ಕೆ 3, ಫರ್ಗ್ಯುಸನ್ 44ಕ್ಕೆ 2, ಹೆನ್ರಿ 48ಕ್ಕೆ 2). ನ್ಯೂಜಿಲ್ಯಾಂಡ್-44.3 ಓವರ್‌ಗಳಲ್ಲಿ 2 ವಿಕೆಟಿಗೆ 233 (ಗಪ್ಟಿಲ್ ಔಟಾಗದೆ 117, ನಿಕೋಲ್ಸ್ 53, ಟಯ್ಲರ್ ಔಟಾಗದೆ 45). ಪಂದ್ಯಶ್ರೇಷ್ಠ: ಮಾರ್ಟಿನ್ ಗಪ್ಟಿಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.