ಚಿನ್ನ ಗೆಲ್ಲುವ ವಿಶ್ವಾಸದಲ್ಲಿ ಕುಂದಾಪುರದ ಗುರುರಾಜ್‌


Team Udayavani, Apr 4, 2018, 7:00 AM IST

7.jpg

ಕುಂದಾಪುರ: ಮಗ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ  ಚಿನ್ನದ ಪದಕ ಗೆಲ್ಲಲು ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ನೇರ ನೋಡಲು ನಮ್ಮಿಂದ ಸಾಧ್ಯವಿಲ್ಲ. ಟಿವಿಯಲ್ಲಿ ನೋಡೋಣ ಎಂದರೆ ಈವರೆಗೆ ಹಾಳಾಗಿತ್ತು. ಈಗಷ್ಟೇ ಟಿವಿ ರಿಪೇರಿ ಮಾಡಿಸಿ ತಂದಿದ್ದೇನೆ. ಟಿವಿಯಲ್ಲೇ ಆತನ ಆಟವನ್ನು ನೋಡುತ್ತ ಇಲ್ಲಿಂದಲೇ ಶುಭ ಹಾರೈಸುತ್ತೇವೆ ಎಂದು “ಉದಯವಾಣಿ’ ಜತೆ ಹೇಳಿದವರು, 21 ನೇ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾಗವಹಿಸುವ ಕುಂದಾಪುರ ತಾಲೂಕಿನ ಚಿತ್ತೂರಿನ ವೇಟ್‌ಲಿಫ್ಟರ್‌ ಗುರುರಾಜ್‌ ಪೂಜಾರಿ ಅವರ ತಂದೆ ಮಹಾಬಲ ಅವರು.

ಮನೆಯಲ್ಲಿ ಕಿತ್ತು ತಿನ್ನುವ ಬಡತನವನ್ನು ಲೆಕ್ಕಿಸದೆ ಅವರು ಮಗನ ಸಾಧನೆಗೆ ಹೆಗಲಾಗಿದ್ದರು. ಈಗ ಮಗ ಅಂತಾರಾಷೀóಯ ಸಾಧಕ. ವಂಡ್ಸೆ ಸಮೀಪದ ಚಿತ್ತೂರಿನ ನಿವಾಸಿ, ವೃತ್ತಿಯಲ್ಲಿ ಪಿಕಪ್‌ ಚಾಲಕರಾಗಿರುವ ಮಹಾಬಲ ಪೂಜಾರಿ – ಪದ್ದು ಪೂಜಾರಿ ದಂಪತಿಯ 6 ಪುತ್ರರಲ್ಲಿ 5ನೆಯವರಾಗಿರುವ ಗುರುರಾಜ್‌ ಬಡತನದಿಂದ ಅರಳಿ ಬಂದ ಪ್ರತಿಭೆ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಅಲ್ಲಿನ ಕೋಚ್‌ ರಾಜೇಂದ್ರ ಪ್ರಸಾದ್‌ ಗರಡಿಯಲ್ಲಿ ಪಳಗಿದ ಇವರು ಅಂತಾರಾಷ್ಟ್ರೀಯ ಮಟ್ಟದ ವೇಟ್‌ ಲಿಫ್ಟಿಂಗ್‌ನಲ್ಲಿ ಅನೇಕ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಗುರು ಸಾಧನೆಗೆ ಇತ್ತೀಚೆಗೆ ರಾಜ್ಯ ಸರಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 

ವಿಶ್ವ ಮಟ್ಟದ ಸಾಧನೆಗಳು
56 ಕೆಜಿ ವಿಭಾಗದಲ್ಲಿ 2016 ರಲ್ಲಿ ಮಲೇಷ್ಯಾದಲ್ಲಿ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕ, 2017 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕ, 2016ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಇವರು, ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ 2015, 2016 ರಲ್ಲಿ ಚಿನ್ನ, 2014ರಲ್ಲಿ ಬೆಳ್ಳಿ ಪದಕ, ಅಖೀಲ ಭಾರತೀಯ ಟೂರ್ನಿಯಲ್ಲಿ 2014 ಹಾಗೂ 2015ರಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಗುರುರಾಜ್‌ ಅವರದು. 

ಚಿಕ್ಕಂದಿನಲ್ಲಿ ರಿಕ್ಷಾ ಓಡಿಸಿ ತಂದೆ ನಮ್ಮನ್ನೆಲ್ಲ ಓದಿಸಿ, ವಿದ್ಯಾವಂತರನ್ನಾಗಿಸಿ, ನಮಗೊಂದು ಬದುಕು ನೀಡಿದ್ದಾರೆ. ತಂದೆ, ತಾಯಿ ಹಾಗೂ ಮನೆಯವರ ಸಹಕಾರದಿಂದಲೇ ನಾನು ವಿಶ್ವ ಮಟ್ಟದ ಸಾಧನೆ ಮಾಡುವಂತಾಗಿದೆ ಎಂದು ಗೋಲ್ಡ್‌ಕೋಸ್ಟ್‌ನಿಂದ “ಉದಯವಾಣಿ’ಗೆ ಪ್ರತಿಕ್ರಿಯಿಸಿದರು ಗುರುರಾಜ್‌. ವೇಟ್‌ ಲಿಫ್ಟಿಂಗ್‌ ಸ್ಪರ್ಧೆಗಳು ಎ. 5ರಿಂದ ಆರಂಭವಾಗಲಿದ್ದು, ಒಟ್ಟು 16 ಮಂದಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಗುರುರಾಜ್‌ ಪದಕ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ. 

ಗೆಲ್ಲುವ ವಿಶ್ವಾಸವಿದೆ
ಗೋಲ್ಡ್‌ ಕೋಸ್ಟ್‌ನಲ್ಲಿ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಗೆ ಎಲ್ಲ ರೀತಿಯ ಪೂರ್ವಾಭ್ಯಾಸ ನಡೆಯುತ್ತಿದೆ. ಮೊದಲು ಚಳಿ ಹೆಚ್ಚಿತ್ತು. ಭಾರತದಂತೆಯೇ ಈಗ ಸೆಕೆಯ ವಾತಾವರಣವಿದೆ. ಆಹಾರ ಕೂಡ ಈಗ ಹೊಂದಿಕೆಯಾಗುತ್ತಿದೆ. ಈ ಬಾರಿ ಪದಕ ಗೆಲ್ಲುವ ವಿಶ್ವಾಸವಿದೆ. ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ.
– ಗುರುರಾಜ್‌, ವೇಟ್‌ ಲಿಫ್ಟರ್‌

ಗೆದ್ದು ಬಾ ಮಗ
ಚಿಕ್ಕಂದಿನಿಂದಲೂ ತುಂಬಾ ಹಠಮಾರಿ. ಎಲ್ಲದರಲ್ಲೂ ಅವನೇ ಫಸ್ಟ್‌ ಬರಬೇಕು ಎನ್ನುವ ಹಂಬಲ ಅವನದು. ವೇಟ್‌ ಲಿಫ್ಟಿಂಗ್‌ ಮಾತ್ರವಲ್ಲದೆ ಕುಸ್ತಿ, ಕಬಡ್ಡಿಯಲ್ಲೂ ಅನೇಕ ಪ್ರಶಸ್ತಿ ಗೆದ್ದಿದ್ದಾನೆ. ಈ ಬಾರಿಯೂ ಪದಕ ಗೆದ್ದು ತರಲಿ ಎಂದಷ್ಟೇ ಆಶೀರ್ವದಿಸುತ್ತೇನೆ. ಅವನಿಗೆ ಮನೆಯವರೆಲ್ಲರ ಬೆಂಬಲ, ಸಹಕಾರ ಯಾವಾಗಲೂ ಇರುತ್ತದೆ. 
– ಮಹಾಬಲ ಪೂಜಾರಿ, (ಗುರುರಾಜ್‌ ತಂದೆ)

ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

14-uv-fusion

UV Fusion: ಕೈ ಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

13-uv-fusion

UV Fusion: ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಬೆಳೆಸೋಣ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

12-uv-fusion

UV FUsion: ಇತರರನ್ನು ಗೌರವಿಸೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.