ಟಿ-20 ವಿಶ್ವಕಪ್ ನಿಂದ ಬುಮ್ರಾ ಔಟ್: ಮೊದಲ ಬಾರಿ ಮೌನ ಮುರಿದ ವೇಗಿ
Team Udayavani, Oct 4, 2022, 12:26 PM IST
ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಈ ಬಾರಿಯ ಟಿ-20 ವಿಶ್ವಕಪ್ ನಿಂದ ಹೊರ ಬಿದ್ದಿದ್ದಾರೆ. ಸೋಮವಾರ ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿತು. ಬುಮ್ರಾ ಟೂರ್ನಿಯಿಂದ ಹೊರಬಿದ್ದ ಬಳಿಕ ಮೊದಲ ಬಾರಿ ಮೌನ ಮುರಿದಿದ್ದಾರೆ.
ಜಸ್ ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಗೆ ಆಯ್ಕೆ ಆಗಿದ್ದರು. ಆದರೆ ಬೆನ್ನುನೋವಿನಿಂದ ಅವರು ಸರಣಿಯಿಂದ ಹೊರಗುಳಿದಿದ್ದರು. ಬಿಸಿಸಿಐ ವೈದ್ಯಕೀಯ ತಂಡ, ಈ ಬಗ್ಗೆ ಚರ್ಚಿಸಿ, ಅಂತಿಮವಾಗಿ ಬುಮ್ರಾರನ್ನು ಹೊರಗಿಡುವ ನಿರ್ಧಾರ ಕೈಗೊಂಡಿತು.
ಬುಮ್ರಾ ಅವರು ಟಿ-20 ವಿಶ್ವಕಪ್ ನಿಂದ ಹೊರ ಹೋದ ಬಳಿಕ ಮೊದಲ ಬಾರಿ ಮೌನ ಮುರಿದು, ಟ್ವೀಟ್ ಮೂಲಕ ತನ್ನ ಮಾತನ್ನು ವ್ಯಕ್ತಪಡಿಸಿದ್ದಾರೆ. “ನಾನು ಈ ವರ್ಷದ ಟಿ-20 ವಿಶ್ವಕಪ್ ತಂಡದ ಭಾಗವಾಗಿರುವುದಿಲ್ಲ ಎನ್ನುವುದಕ್ಕೆ ನನಗೆ ತುಂಬಾ ಬೇಸರವಿದೆ. ಆದರೆ ನನ್ನ ಪ್ರೀತಿ ಪಾತ್ರರಿಂದ ಸಿಗುತ್ತಿರುವ ಕಾಳಜಿ, ಸಹಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನಾನು ಚೇತರಿಸಿದ ಬಳಿಕ ಆಸ್ಟೇಲಿಯಾದಲ್ಲಿ ಆಡುವ ನನ್ನ ತಂಡಕ್ಕೆ ನಾನು ಚಿಯರ್ ಅಪ್ ಮಾಡುತ್ತೇನೆ ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.
ಮಹಮ್ಮದ್ ಶಮಿ,ದೀಪಕ್ ಚಹರ್ ಮೀಸಲು ಆಟಗಾರರಾಗಿದ್ದಾರೆ. ಇವರು ಬಿಟ್ಟರೆ ಮೊಹಮ್ಮದ್ ಸಿರಾಜ್ ಕೂಡ ಜಸ್ ಪ್ರೀತ್ ಅವರ ಜಾಗಕ್ಕೆ ಬದಲಿ ಆಟಗಾರನಾಗಿ ಆಯ್ಕೆ ಆಗುವ ಸಾಧ್ಯತೆಯಿದೆ.
I am gutted that I won’t be a part of the T20 World Cup this time, but thankful for the wishes, care and support I’ve received from my loved ones. As I recover, I’ll be cheering on the team through their campaign in Australia ?? pic.twitter.com/XjHJrilW0d
— Jasprit Bumrah (@Jaspritbumrah93) October 4, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.