ತೆಂಡೂಲ್ಕರ್ ಗೆ ಇಲ್ಲವೇ ಹಾಲ್ ಆಫ್ ಫೇಮ್ ಗೌರವ ?
Team Udayavani, Nov 4, 2018, 12:43 PM IST
ಕ್ರಿಕೆಟ್ ಲೋಕದ ದಂತಕಥೆ, ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಗೆ ಯಾಕೆ ಹಾಲ್ ಆಫ್ ಫೇಮ್ ಗೌರವ ಸಿಕ್ಕಿಲ್ಲ ? ದಾಖಲೆಗಳ ಲೆಕ್ಕದಲ್ಲಿ ಸಚಿನ್ ಗಿಂತ ಕಡಿಮೆ ಸಾಧನೆ ಮಾಡಿರುವ ರಾಹುಲ್ ದ್ರಾವಿಡ್ ಗೆ ಹೇಗೆ ಸಚಿನ್ ಗಿಂತ ಮೊದಲು ಈ ಗೌರವ ಸಿಕ್ಕಿತು? ಇಂತಹ ಪ್ರಶ್ನೆಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಅದರಲ್ಲೂ ಸಚಿನ್ ತೆಂಡುಲ್ಕರ್ ಅಭಿಮಾನಿಗಳಲ್ಲಿ ಹುಟ್ಟಲು ಕಾರಣ ಕಳೆದ ನವೆಂಬರ್ 1 ರಂದು ‘ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಗೆ ಸಂದ ‘ಹಾಲ್ ಆಫ್ ಫೇಮ್’ ಗೌರವ. ದ್ರಾವಿಡ್ ಈ ಗೌರವಕ್ಕೆ ಪಾತ್ರವಾದ ಕೇವಲ 5 ನೇ ಕ್ರಿಕೆಟಿಗ. ಈ ಹಿಂದೆ ಸುನೀಲ್ ಗಾವಸ್ಕರ್, ಕಪಿಲ್ ದೇವ್, ಬಿಷನ್ ಸಿಂಗ್ ಬೇಡಿ ಮತ್ತು ಅನಿಲ್ ಕುಂಬ್ಳೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನಾರಾಗಿದ್ದರು.
ಸಚಿನ್ ಗೆ ಯಾಕೆ ಇಲ್ಲ?
ವಿಶ್ವ ಕ್ರಿಕೆಟ್ ನಶ್ರೇಷ್ಠ ಕ್ರಿಕೆಟಿಗ ಮುಂಬೈಕರ್ ಸಚಿನ್ ತೆಂಡೂಲ್ಕರ್ ಗೆ ಇದುವರೆಗೂ ಈ ಪ್ರಶಸ್ತಿ ಗೌರವ ಸಿಕ್ಕಿಲ್ಲ. ಇದೇ ಈಗ ಸಂಚಲನ ಉಂಟು ಮಾಡಿರುವ ಪ್ರಶ್ನೆ.
ಐಸಿಸಿ ಕೊಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಆಯ್ಕೆಯಾಗಬೇಕಾದರೆ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಕನಿಷ್ಠ ಐದು ವರ್ಷ ಆಗಿರಬೇಕು. ಈ ನಡುವೆ ಆ ಆಟಗಾರ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿರಬಾರದು. ಹಾಗಾದಲ್ಲಿ ಮಾತ್ರ ಆಟಗಾರರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಇನ್ನೂ ಐದು ವರ್ಷ ಪೂರ್ತಿಯಾಗಿಲ್ಲ. 2013 ನವೆಂಬರ್ 14ರಂದು ವೆಸ್ಟ್ ಇಂಡೀಸ್ ವಿರುದ್ದ ಸಚಿನ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಇದೇ ಕಾರಣದಿಂದ ಕ್ರಿಕೆಟ್ ದೇವರಿಗೆ ಹಾಲ್ ಆಫ್ ಫೇಮ್ ಗೌರವ ಸಿಕ್ಕಿಲ್ಲ. ಭವಿಷ್ಯದಲ್ಲಿ ಈ ಗೌರವಕ್ಕೆ ತೆಂಡುಲ್ಕರ್ ಖಂಡಿತ ಭಾಜನರಾಗುತ್ತಾರೆ ಎಂಬ ಭರವಸೆ ಅಭಿಮಾನಿಗಳದು.
ರಾಹುಲ್ ದ್ರಾವಿಡ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಳ್ವೆಯ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ದ 2012ರ ಮಾರ್ಚ್ 9 ರಂದು ಆಡಿದ್ದರು. ಅಂದರೆ ನಿವೃತ್ತಿಯಾಗಿ ಆರು ವರ್ಷಗಳಾಗಿವೆ. ಇದೇ ಕಾರಣಕ್ಕೆ ದ್ರಾವಿಡ್ ಸಚಿನ್ ಗಿಂತ ಮೊದಲು ಈ ಗೌರವಕ್ಕೆ ಪಾತ್ರಾಗಿದ್ದಾರೆ.
ರಾಹುಲ್ ದ್ರಾವಿಡ್ ಒಟ್ಟು164 ಟೆಸ್ಟ್ ಪಂದ್ಯ ಆಡಿದ್ದು 36 ಶತಕ ಮತ್ತು 63 ಅರ್ಧ ಶತಕ ಸೇರಿದಂತೆ 13288 ರನ್ ಗಳಿಸಿದ್ದಾರೆ. 344 ಏಕದಿನ ಪಂದ್ಯಗಳಲ್ಲಿ 10889 ರನ್ ಇವರ ಖಾತೆಯಲ್ಲಿದೆ. 12 ಶತಕ ಮತ್ತು 83 ಅರ್ಧಶತಕಗಳು ಏಕದಿನ ಪಂದ್ಯಗಳಲ್ಲಿ ರಾಹುಲ್ ದ್ರಾವಿಡ್ ಬಾರಿಸಿದ್ದಾರೆ. ಸದ್ಯ ದ್ರಾವಿಡ್ ಭಾರತ ಎ ತಂಡ ಮತ್ತು ಅಂಡರ್ 19 ತಂಡಕ್ಕೆ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.