ಟೆಸ್ಟ್: ಕಿವೀಸ್ ವಿರುದ್ಧ ವಿಂಡೀಸಿಗೆ ಹಿನ್ನಡೆ ಭೀತಿ
Team Udayavani, Dec 11, 2017, 7:30 AM IST
ಹ್ಯಾಮಿಲ್ಟನ್: ಹ್ಯಾಮಿಲ್ಟನ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರೀ ಹಿನ್ನಡೆಯ ಭೀತಿಗೆ ಸಿಲುಕಿದೆ. ದ್ವಿತೀಯ ದಿನದಾಟದಲ್ಲಿ ನ್ಯೂಜಿಲೆಂಡಿನ ಬೌಲರ್‌ಗಳು ಸಂಪೂರ್ಣ ಹಿಡಿತ ಸಾಧಿಸಿದ್ದಾರೆ.
ಮೊದಲ ದಿನ 7ಕ್ಕೆ 286 ರನ್ ಮಾಡಿದ ನ್ಯೂಜಿಲೆಂಡ್, ಬ್ಯಾಟಿಂಗ್ ಮುಂದುವರಿಸಿ 373ರ ತನಕ ಬೆಳೆಯಿತು. ಜವಾಬಿತ್ತ ವೆಸ್ಟ್ ಇಂಡೀಸ್ 215 ರನ್ನಿಗೆ 8 ವಿಕೆಟ್ ಉರುಳಿಸಿಕೊಂಡು ತೀವ್ರ ಸಂಕಟಕ್ಕೆ ಸಿಲುಕಿದೆ. ಇನ್ನೂ 158 ರನ್ನುಗಳ ಹಿನ್ನಡೆಯಲ್ಲಿದೆ. ನ್ಯೂಜಿಲೆಂಡಿನ ಬೌಲರ್‌ಗಳಾದ ಸೌದಿ, ಬೌಲ್ಟ್, ಗ್ರ್ಯಾಂಡ್‌ಹೋಮ್ ಮತ್ತು ವ್ಯಾಗ್ನರ್ ತಲಾ 2 ವಿಕೆಟ್ ಕಿತ್ತು ಕೆರಿಬಿಯನ್ನರ ಸಂಕಟವನ್ನು ಬಿಗಡಾಯಿಸುವಂತೆ ಮಾಡಿದರು. ಆರಂಭಕಾರ ಕ್ರೆಗ್ ಬ್ರಾತ್‌ವೇಟ್ ಕಪ್ತಾನನ ಆಟದ ಮೂಲಕ 66 ರನ್ ಬಾರಿಸಿದ್ದು ವಿಂಡೀಸ್ ಸರದಿಯ ಗಮನಾರ್ಹ ಸಾಧನೆ. ಕೀಪರ್ ಡೌರಿಚ್ 35, ಹೆಟ್‌ಮೈರ್ 28 ರನ್ ಮಾಡಿದರು. ರೀಫರ್ 22 ರನ್ ಗಳಿಸಿ ಆಡುತ್ತಿದ್ದಾರೆ.
ಬೌಲರ್‌ಗಳಾದ ಸೌಥಿ (31) ಮತ್ತು ಬೌಲ್ಟ್ (ಔಟಾಗದೆ 37) ಸೇರಿಕೊಂಡು ನ್ಯೂಜಿಲ್ಯಾಂಡ್ ಇನ್ನಿಂಗ್ಸ್ ಬೆಳೆಸಿದರು. ಇವರಿಂದ ಅಂತಿಮ ವಿಕೆಟಿಗೆ 61 ರನ್ ಹರಿದು ಬಂತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-373 (ರಾವಲ್ 84, ಗ್ರ್ಯಾಂಡ್‌ಹೋಮ್ 58, ವಿಲಿಯಮ್ಸನ್ 43, ಗ್ಯಾಬ್ರಿಯಲ್ 119ಕ್ಕೆ 4, ರೋಶ್ 58ಕ್ಕೆ 3, ಕಮಿನ್ಸ್ 57ಕ್ಕೆ 2). ವೆಸ್ಟ್ ಇಂಡೀಸ್-8 ವಿಕೆಟಿಗೆ 215 (ಬ್ರಾತ್‌ವೇಟ್ 66, ಡೌರಿಚ್ 35, ಹೆಟ್‌ಮೈರ್ 28, ಸೌಥಿ 34ಕ್ಕೆ 2, ಗ್ರ್ಯಾಂಡ್‌ಹೋಮ್ 40ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹೊಸ ಸೇರ್ಪಡೆ
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.