ಭಜ್ಜಿ ಎಂದು ನಾಮಕರಣ ಮಾಡಿದವರು ನಯನ್ ಮೊಂಗಿಯ!
Team Udayavani, Dec 25, 2021, 7:05 AM IST
ಹೊಸದಿಲ್ಲಿ: ಹರ್ಭಜನ್ ಸಿಂಗ್ ಅವರನ್ನು “ಭಜ್ಜಿ’ ಎಂದು ಮೊದಲ ಸಲ ಕರೆದವರು ಕೀಪರ್ ನಯನ್ ಮೊಂಗಿಯ. ಅವರಿಗೆ ಹರ್ಭಜನ್ ಸಿಂಗ್ ಹೆಸರನ್ನು ಕರೆಯಲು ಕಷ್ಟವಾಗುತ್ತಿದ್ದುದೇ ಇದಕ್ಕೆ ಕಾರಣ! ಬಳಿಕ ಹರ್ಭಜನ್ ಇದರ ಪೇಟೆಂಟ್ ಕೂಡ ಪಡೆದರು. ಅವರ ಸ್ಪೋರ್ಟ್ಸ್ ಲೈಫ್ಸ್ಟೈಲ್ ಬ್ರ್ಯಾಂಡ್ ಉತ್ಪನ್ನ “ಭಜ್ಜಿ’ ಹೆಸರಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಭಜ್ಜಿ ಅವರ ಮೊದಲ ಕೋಚ್ ಚರಣ್‌ಜೀತ್ ಸಿಂಗ್. ಇವರಿಂದ ಹರ್ಭಜನ್ ಬ್ಯಾಟಿಂಗ್ ತರಬೇತಿ ಪಡೆದಿದ್ದರು. ಇವರ ಅಕಾಲಿಕ ನಿಧನದ ಬಳಿಕ ನೂತನ ಕೋಚ್ ದೇವಿಂದರ್ ಅರೋರಾ ಅವರ ಸೂಚನೆ ಮೇರೆಗೆ ಹರ್ಭಜನ್ ಸ್ಪಿನ್ನರ್ ಆಗಿ ರೂಪುಗೊಂಡರು.
ಜುಲೈ ಮೂರರಂದು ಹುಟ್ಟಿದ ಕಾರಣ “3′ ಹರ್ಭಜನ್ ಅವರ ಲಕ್ಕಿ ನಂಬರ್ ಆಗಿದೆ. ಇವರ ಜೆರ್ಸಿ ನಂಬರ್ ಕೂಡ 3.
2003ರಲ್ಲಿ ಅರ್ಜುನ ಪ್ರಶಸ್ತಿ, 2009ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಹರ್ಭಜನ್ ಭಾಜನರಾಗಿದ್ದರು.
2002ರಲ್ಲಿ ಅಂದಿನ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಹರ್ಭಜನ್‌ಗೆ
ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ನೀಡಿದ್ದರು. ಆದರೆ 2001ರಲ್ಲಿ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಪ್ರದರ್ಶಿಸಿದ ಐತಿಹಾಸಿಕ ಸಾಧನೆಯಿಂದ ಪ್ರೇರಿತರಾಗಿ ಕ್ರಿಕೆಟ್‌ನಲ್ಲೇ ಮುಂದುವರಿಯಲು ಬಯಸಿದ್ದರಿಂದ ಆ ಹುದ್ದೆ ನಿರಾಕರಿಸಿದ್ದರು.
ಇದನ್ನೂ ಓದಿ:ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಟರ್ಬನೇಟರ್ ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್ ಟೆಸ್ಟ್ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧಿಸಿದ ಭಾರತದ ಮೊದಲ ಬೌಲರ್. ಅದು ಆಸ್ಟ್ರೇಲಿಯ ಎದುರಿನ 2001ರ “ಫಾಲೋಆನ್ ಟೆಸ್ಟ್’ ಆಗಿತ್ತು. ಭಜ್ಜಿ ಕ್ರಮವಾಗಿ 123ಕ್ಕೆ 7 ಹಾಗೂ 73ಕ್ಕೆ 6 ವಿಕೆಟ್ ಕೆಡವಿದ್ದರು. ಮೊದಲ ಸರದಿಯಲ್ಲಿ ಪಾಂಟಿಂಗ್, ಗಿಲ್‌ಕ್ರಿಸ್ಟ್ ಮತ್ತು ವಾರ್ನ್ ಅವರನ್ನು ಸತತ 3 ಎಸೆತಗಳಲ್ಲಿ ಕೆಡವಿದ್ದರು.
ಹರ್ಭಜನ್ 8ನೇ ಕ್ರಮಾಂಕದಲ್ಲಿ ಆಡಲಿಳಿದು ಸತತ 2 ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ. ಇದನ್ನು ನ್ಯೂಜಿಲ್ಯಾಂಡ್ ವಿರುದ್ಧ ಸಾಧಿಸಿದ್ದರು.
ಬೆಳ್ಳಿಪರದೆಗೂ ಬಂದ ಭಜ್ಜಿ, “ಮುಜ್‌ಸೆ ಶಾದಿ ಕರೋಗಿ’ (2004), “ಭಜ್ಜಿ ಇನ್ ಪ್ರಾಬ್ಲೆಮ್’ (2013), “ಸೆಕೆಂಡ್ ಹ್ಯಾಂಡ್ ಹಸ್ಬೆಂಡ್’ (2015) ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಹರ್ಭಜನ್ ಸಿಂಗ್ 2 ವಿವಾದಗಳ ಮೂಲಕವೂ ಸುದ್ದಿಯಾಗಿದ್ದರು. ಇದರಲ್ಲಿ ಪ್ರಮುಖವಾದದ್ದು “ಮಂಕಿಗೇಟ್’ ಪ್ರಕರಣ. ಆ್ಯಂಡ್ರೂ ಸೈಮಂಡ್ಸ್‌ಗೆ
ಮಂಕಿ ಎಂದು ಹೀಯಾಳಿಸಿದ್ದು ದೊಡ್ಡ ಮಟ್ಟದ ವಿವಾದವಾಗಿತ್ತು. ಇನ್ನೊಂದು ಪ್ರಕರಣವೆಂದರೆ, ಅಂಗಳದಲ್ಲೇ ಶ್ರೀಶಾಂತ್ ಕೆನ್ನೆಗೆ ಬಿಗಿದದ್ದು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.