Inzamam-ul-Haq: ನಮಾಜ್ ವೇಳೆ ಹರ್ಭಜನ್ ಮೌಲಾನರ ಮಾತು ಕೇಳುತ್ತಿದ್ದರು; ಇಂಜಮಾಮ್
ವಿವಾದಾತ್ಮಕ ಹೇಳಿಕೆಗೆ ಗರಂ ಆದ ಹರ್ಭಜನ್
Team Udayavani, Nov 15, 2023, 12:42 PM IST
ಮುಂಬಯಿ: ಭಾರತದ ಮಾಜಿ ಸ್ಟಾರ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ಕಪ್ತಾನ ಇಂಜಮಾಮ್ ಉಲ್ ಹಲ್ ಹಕ್ ನೀಡಿರುವ ಹೇಳಿಕೆಯೊಂದು ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಜಮಾಮ್ ಹೇಳಿದ್ದೇನು?: ಭಾರತ ಪಾಕಿಸ್ತಾನ ಸರಣಿಯ ವೇಳೆ ಭಾರತೀಯ ಮುಸ್ಲಿಂ ಆಟಗಾರರಿಗೆ ನಾವು ನಮ್ಮೊಂದಿಗೆ ನಮಾಜ್ ಮಾಡಿ ಎಂದು ಹೇಳುತ್ತಿದ್ದಿವಿ. ಮೌಲಾನ ತಾರಿಕ್ ಜಮೀಲ್ ನಮ್ಮ ಬಳಿ ಪ್ರತಿನಿತ್ಯ ಬರುತ್ತಿದ್ದರು. ಈ ವೇಳೆ ಅವರು ನಮಾಜ್ ಮಾಡಿಸಿ, ಇಸ್ಲಾಂ ಬಗ್ಗೆ ಮಾತನಾಡುತ್ತಿದ್ದರು. ಎರಡು – ಮೂರು ದಿನಗಳಲ್ಲಿ ಇರ್ಫಾನ್, ಪಠಾಣ್ , ಜಹೀರ್ ಖಾನ್ ಅವರು ನಮಾಜ್ ಮಾಡುವುದರ ಜೊತೆ ಮೌಲಾನ ಅವರ ಮಾತುಗಳನ್ನು ಕೇಳುತ್ತಿದ್ದರು. ಇದರ ಜೊತೆ ಎರಡೂ – ಮೂರು ಭಾರತೀಯ ಆಟಗಾರರು ಕೂಡ ಬರುತ್ತಿದ್ದರು. ಹರ್ಭಜನ್ ಸಿಂಗ್ ಅವರು ತಾರಿಕ್ ಜಮೀಲ್ ಅವರ ಮಾತು ಕೇಳಿ ನಾನು ಈ ಮನುಷ್ಯನ(ಜಮೀಲ್) ಅವರ ಮಾತುಗಳನ್ನು ಕೇಳಬೇಕೆಂದು ನನ್ನ ಮನಸ್ಸು ಹೇಳುತ್ತದೆ. ಆದರೆ ನಿನ್ನನ್ನು ನೋಡಿ ನಾನು ನಿಲ್ಲುತ್ತೇನೆ. ನಿನ್ನ ಜೀವನ ಆ ರೀತಿಯಿಲ್ಲ ಎಂದು ನನ್ನ ಬಳಿ ಆತ ಹೇಳಿದ್ದ” ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಈ ರೀತಿ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹರ್ಭಜನ್ ಗರಂ ಆಗಿದ್ದಾರೆ.
ʼಇಂಡಿಯಾ ಟುಡೇʼ ಜೊತೆ ಮಾತನಾಡಿದ ಅವರು,”ಯಾರಾದರೂ ಇಂಜಮಾಮ್ ಉಲ್ ಹಕ್ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಬೇಕು ಎಂದು ನಾನು ಹೇಳಬಯಸುತ್ತೇನೆ. ಅವರ ಮಾನಸಿಕ ಸ್ಥಿತಿ ಸರಿಯಿಲ್ಲ, ದಯವಿಟ್ಟು ಅವನನ್ನು ವೈದ್ಯರ ಬಳಿಗೆ ಕರೆದೊಯ್ಯಿರಿ. ನಾನು ಸಿಖ್ ಮತ್ತು ನಾನು ತುಂಬಾ ಸಂತೋಷವಾಗಿದ್ದೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಮುಂದೆ ಹೀಗೆ ನಾಟಕೀಯವಾಗಿ ಹೇಗೆ ಹೇಳಿಕೆ ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ಬಹುಶಃ ಅವರು ಕುಡಿದಿದ್ದಾರೋ ಅಥವಾ ಧೂಮಪಾನ ಮಾಡಿದ್ದಾರೋ ಇರಬೇಕು. ಅವರು ನಶೆಯಲ್ಲಿ ಏನೇ ಹೇಳಿರಲಿ ಮರುದಿನ ಮುಂಜಾನೆ ಅವರಿಗೆ ನೆನಪೇ ಇರಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಮಾಧ್ಯಮಗಳ ಮುಂದೆ ಅವರು ಮಾಡುತ್ತಿರುವ ಈ ಎಲ್ಲಾ ನಾಟಕ, ಅವರು ಈ ಎಲ್ಲಾ ಹೇಳಿಕೆಗಳನ್ನು ಹೇಗೆ ನೀಡಲು ನಿರ್ಧರಿಸಿದ್ದಾರೆಂದು ನನಗೆ ತಿಳಿದಿಲ್ಲ, ಅವನು ಎಷ್ಟು ಕುಡಿದಿದ್ದಾನೆ ಅಥವಾ ಏನು ಧೂಮಪಾನ ಮಾಡುತ್ತಿದ್ದಾನೆ ಎಂದು ನನಗೆ ತಿಳಿದಿಲ್ಲ ಮತ್ತು ಅದರಲ್ಲಿ ಅವನು ಏನು ಹೇಳುತ್ತಾನೆ ಎಂಬುದು ನನಗೆ ಖಚಿತವಾಗಿದೆ. ಕುಡಿದ ಅಮಲಿನಲ್ಲಿ, ಮರುದಿನ ಬೆಳಿಗ್ಗೆ ಅವನಿಗೆ ಯಾವುದೂ ನೆನಪಿಲ್ಲ ಎಂದಿದ್ದಾರೆ.
ಇತ್ತೀಚೆಗಷ್ಟೇ ಇಂಜಮಾಮ್ ಪಿಸಿಬಿ ಮುಖ್ಯ ಆಯ್ಕೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದರು.
Inzamam ul Haq revealed how Harbhajan Singh was close to converting to Islam after meeting Maulana Tariq Jameel, who used to come over and read Namaz with the Pakistan Cricket Team. https://t.co/EfuLLH68Fu pic.twitter.com/eQAXvrP7cI
— Sensei Kraken Zero (@YearOfTheKraken) November 14, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.