ಹಾರ್ದಿಕ್ ಪಾಂಡ್ಯಗೆ ವಂಚಿಸಿದ ಮುಂಬೈನ “ದುಬಾರಿ ಶಾಲೆ’
Team Udayavani, Oct 28, 2017, 6:15 AM IST
ಕಾನ್ಪುರ: ಭಾರತ ಕ್ರಿಕೆಟ್ ತಂಡದ ನೂತನ ತಾರೆ ಹಾರ್ದಿಕ್ ಪಾಂಡ್ಯ ಓದಿದ್ದೆಷ್ಟು ಗೊತ್ತಾ? ಕೇವಲ 9ನೆ ತರಗತಿ! ಇದಕ್ಕೆ ಕಾರಣವೂ ಕುತೂಹಲಕಾರಿಯಾಗಿದೆ. ವಾಸ್ತವವಾಗಿ ಮುಂಬೈನ ಪ್ರತಿಷ್ಠಿತ ಶಾಲೆಯೊಂದು ಹಾರ್ದಿಕ್‌ರನ್ನು ಉಚಿತವಾಗಿ ಶಿಕ್ಷಣ ನೀಡುತ್ತೇವೆ, ನೀವು ಬರೀ ಕ್ರಿಕೆಟ್ ಆಡಿಕೊಂಡಿದ್ದರೆ ಸಾಕು ಎಂದು ಶಾಲೆಗೆ ಸೇರಿಸಿಕೊಂಡಿತ್ತಂತೆ. ಆದರೆ ಮುಂದೆ ಮಾತಿಗೆ ತಕ್ಕಂತೆ ನಡೆದುಕೊಳ್ಳದೇ ಶುಲ್ಕ ಕಟ್ಟಿ ಎಂದು ಶಾಲಾ ಮಂಡಳಿ ಒತ್ತಾಯಿಸಿದೆ. ಇದರಿಂದ ಬೇಸತ್ತ ಹಾರ್ದಿಕ್ ಶಾಲೆ ತೊರೆದು ಬರೀ ಕ್ರಿಕೆಟ್ ಆಡುವುದಕ್ಕೆ ಗಮನ ಕೊಟ್ಟರಂತೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ.ಆದರೆ ತಮಗೆ ಅನ್ಯಾಯ ಮಾಡಿದ ಶಾಲೆಯ ಹೆಸರನ್ನು ಹಾರ್ದಿಕ್ ಹೇಳಿಕೊಂಡಿಲ್ಲ. ಯಾರಿಗೂ ಉಚಿತ ಪ್ರಚಾರ ಕೊಡಬಾರದು, ಅದಕ್ಕಾಗಿ ಅದರ ಹೆಸರು ಹೇಳಲ್ಲ ಎನ್ನುವುದು ಹಾರ್ದಿಕ್ ಕಾರಣ!
ಹಾರ್ದಿಕ್ ಹೇಳಿದ್ದೇನು?: ಅದು ದುಬಾರಿ ಶಾಲೆ. ಅವರು ಒತ್ತಾಯ ಮಾಡಿ ನೀವು ಕ್ರಿಕೆಟ್ ಆಡಿದರೆ ಸಾಕು. ನಿಮ್ಮನ್ನು ಉತ್ತೀರ್ಣಗೊಳಿಸುವುದು ನಮ್ಮ ಜವಾಬ್ದಾರಿ, ಹಾಗೆಯೇ ಶುಲ್ಕವೂ ಕೊಡಬೇಕಿಲ್ಲ ಎಂದು ಒತ್ತಾಯಿಸಿದರು. ಆ ಕಾರಣದಿಂದ ಶಾಲೆಗೆ ಸೇರಲು ಒಪ್ಪಿಕೊಂಡೆ. ಒಂದು ವರ್ಷ ನಮ್ಮ ತಂಡ ಮೊದಲ ಸುತ್ತಲ್ಲೇ ಸೋತು ಹೋಯಿತು. ಅಲ್ಲಿಂದ ಶಾಲಾ ಮಂಡಳಿಯ ವರ್ತನೆಯೇ ಬದಲಾಯಿತು. ನೀವು ಶುಲ್ಕ ಕಟ್ಟಬೇಕು ಎಂದು ಒತ್ತಾಯಿಸಿದರು. ಒಂದು ವರ್ಷ ಕಾದು ನೋಡಿದೆವು. ಆಗಲೂ ಅವರ ಅಭಿಪ್ರಾಯ ಬದಲಾಗಲಿಲ್ಲ. ಆಗ ಶಾಲೆಯನ್ನೇ ತೊರೆದೆ ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.