IPL : ಕ್ಯಾಪ್ಟನ್ ಮಾಡಿದರೆ ಮಾತ್ರ ಮುಂಬೈಗೆ ಬರುತ್ತೇನೆ ಎಂದಿದ್ದ ಹಾರ್ದಿಕ್; ವರದಿ
Team Udayavani, Dec 16, 2023, 5:34 PM IST
ಮುಂಬಯಿ: ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದು, ನೂರಾರು ಮುಂಬೈ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಐದು ಬಾರಿ ಐಪಿಎಲ್ ಪಟ್ಟವನ್ನು ಗೆದ್ದುಕೊಟ್ಟ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಿದ್ದುಮುಂಬೈ ಫ್ಯಾನ್ಸ್ ಗಳಿಗೆ ಸೇರಿದಂತೆ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿಯಾಗಿದೆ.
2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯಾ ಕಳೆದ ತಿಂಗಳು ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು.
ಮುಂಬೈ ಇಂಡಿಯನ್ಸ್‌ನ ಗ್ಲೋಬಲ್ ಹೆಡ್ ಮಹೇಲಾ ಜಯವರ್ಧನೆ ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2024 ರ ಋತುವಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಿದೆ ಎಂದು ಶುಕ್ರವಾರ(ಡಿ.15 ರಂದು) ಹೇಳಿದ್ದರು.
ಇದೀಗ ಮುಂಬೈಗೆ ಬರುವ ಮುನ್ನ ಹಾರ್ದಿಕ್ ಒಂದು ಕಂಡಿಷನ್ ಹಾಕಿಯೇ ತಂಡಕ್ಕೆ ಬಂದಿದ್ದರು ಎಂದು ʼಇಂಡಿಯನ್ ಎಕ್ಸ್ ಪ್ರೆಸ್ʼ ವರದಿ ಮಾಡಿದೆ.
ಗುಜರಾತ್ ತಂಡವನ್ನು ಕಳೆದ ಎರಡು ವರ್ಷದಿಂದ ಲೀಡ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯಾ ಅವರನ್ನು ಮತ್ತೆ ಮುಂಬೈಗೆ ಕರೆ ತರುವ ಮಾತುಕತೆಯನ್ನು ನಡೆಸಿದಾಗ, ಹಾರ್ದಿಕ್ ಪಾಂಡ್ಯಾ ಒಂದು ಕಂಡಿಷನ್ ಬಗ್ಗೆ ಮುಂಬೈಗೆ ತಿಳಿಸಿದ್ದರು.
ತನ್ನನ್ನು ತಂಡದ ಕ್ಯಾಪ್ಟನ್ ಆಗಿ ನೇಮಿಸಿದರೆ ಮಾತ್ರ ತಂಡಕ್ಕೆ ಮರಳುತ್ತೇನೆ ಎಂದು ಹಾರ್ದಿಕ್ ಮುಂಬೈ ಮ್ಯಾನೇಜ್ಮೆಂಟ್ ಗೆ ಹೇಳಿದ್ದರು. ಅದರಂತೆ ಈ ಷರತ್ತಿಗೆ ಒಪ್ಪಿಗೆ ನೀಡಿ, ಈ ವಿಚಾರವನ್ನು ರೋಹಿತ್ ಅವರ ಗಮನಕ್ಕೆ ತಂದಿತ್ತು. ಆ ಬಳಿಕ ರೋಹಿತ್ ಶರ್ಮಾ ಕೂಡ ಹಾರ್ದಿಕ್ ಅವರ ನಾಯಕತ್ವದಲ್ಲಿ ಆಡುವುದಾಗಿ ಹೇಳಿದರು ಎಂದು ವರದಿ ತಿಳಿಸಿದೆ.
ಇನ್ನು ಇತ್ತ ಹಾರ್ದಿಕ್ ಪಾಂಡ್ಯಾ ಮುಂಬರುವ ಸೀಸನ್ ಗೆ ಮುಂಬೈ ತಂಡದ ಕ್ಯಾಪ್ಟನ್ ಎನ್ನುವುದನ್ನು ಘೋಷಿಸಿದ ಬಳಿಕ ಮುಂಬೈ ಇಂಡಿಯನ್ಸ್ ಲಕ್ಷಾಂತರ ಇನ್ಸ್ಟಗ್ರಾಮ್ ಹಿಂಬಾಲಕರನ್ನು ಕಳೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.