Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
Team Udayavani, Nov 21, 2024, 9:47 AM IST
ದುಬಾೖ: ಹಾರ್ದಿಕ್ ಪಾಂಡ್ಯ ಮರಳಿ ನಂ.1 ಟಿ20 ಆಲ್‌ರೌಂಡರ್ ಪಟ್ಟವನ್ನು ಅಲಂಕರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸಾಧಿಸಿದ ಯಶಸ್ಸಿನಿಂದ ಪಾಂಡ್ಯ 2ನೇ ಸಲ ಈ ಎತ್ತರ ತಲುಪಿದರು. ಇದಕ್ಕೂ ಮೊದಲು ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ನಂ.1 ಸ್ಥಾನಕ್ಕೇರಿದ್ದರು.
ಬುಧವಾರ ಐಸಿಸಿ ಪ್ರಕಟಿಸಿದ ನೂತನ ರ್‍ಯಾಂಕಿಂಗ್ ಯಾದಿಯಲ್ಲಿ ಇಂಗ್ಲೆಂಡ್‌ನ ಲಿಯಮ್ ಲಿವಿಂಗ್‌ಸ್ಟೋನ್ ಮತ್ತು ನೇಪಾಲದ ದೀಪೇಂದ್ರ ಸಿಂಗ್ ಐರಿ ಅವರನ್ನು ಪಾಂಡ್ಯ ಹಿಂದಿಕ್ಕಿದರು.
ಹಾರ್ದಿಕ್ ಪಾಂಡ್ಯ 244 ಅಂಕ ಗಳಿಸಿದ್ದಾರೆ. ದೀಪೇಂದ್ರ ಸಿಂಗ್ 2ನೇ (231), ಲಿವಿಂಗ್‌ಸ್ಟೋನ್ 3ನೇ ಸ್ಥಾನದಲ್ಲಿದ್ದಾರೆ (230). ಭಾರತದ ಮತ್ತೋರ್ವ ಆಲ್‌ರೌಂಡರ್ ಅಕ್ಷರ್ ಪಟೇಲ್ 13ನೇ ಸ್ಥಾನದಲ್ಲಿದ್ದಾರೆ (153).
ತಿಲಕ್ ವರ್ಮ ನಂ.3
ಟಿ20 ಬ್ಯಾಟಿಂಗ್ ವಿಭಾಗ ದಲ್ಲಿ ಅವಳಿ ಶತಕವೀರ ತಿಲಕ್ ವರ್ಮ ಒಮ್ಮೆಲೇ 69 ಸ್ಥಾನ ಗಳ ಪ್ರಗತಿ ಸಾಧಿಸಿ 3ನೇ ಸ್ಥಾನಕ್ಕೆ ನೆಗೆ ದಿ ದ್ದಾರೆ (806). ಟ್ರ್ಯಾವಿಸ್ ಹೆಡ್ (855) ಮತ್ತು ಫಿಲ್ ಸಾಲ್ಟ್ (828) ಮೊದಲೆರಡು ಸ್ಥಾನದಲ್ಲಿದ್ದಾರೆ. ಟಾಪ್-10 ಯಾದಿಯಲ್ಲಿರುವ ಸೂರ್ಯ ಕುಮಾರ್ ಯಾದವ್ (4) ಮತ್ತು ಯಶಸ್ವಿ ಜೈಸ್ವಾಲ್ (8) ಒಂದೊಂದು ಸ್ಥಾನ ಕೆಳಗಿಳಿದಿದ್ದಾರೆ.
ಸರಣಿಯಲ್ಲಿ 2 ಶತಕ ಹೊಡೆದ ಮತ್ತೋರ್ವ ಆಟಗಾರ ಸಂಜು ಸ್ಯಾಮ್ಸನ್ ಅವರದು 17 ಸ್ಥಾನಗಳ ಜಿಗಿತ. ಅವರು 22ನೇ ರ್‍ಯಾಂಕ್ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.