ಏಕದಿನಕ್ಕೆ ಮರಳುವರೇ ಹಾರ್ದಿಕ್ ಪಾಂಡ್ಯ?
Team Udayavani, Nov 30, 2018, 6:25 AM IST
ಹೊಸದಿಲ್ಲಿ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ತಿಂಗಳಿಂದ ಟೀಮ್ ಇಂಡಿಯಾದಿಂದ ಬೇರ್ಪಟ್ಟಿದ್ದಾರೆ. ಕಳೆದ ಏಶ್ಯ ಕಪ್ ಕ್ರಿಕೆಟ್ ಕೂಟದ ವೇಳೆ ಗಾಯಾಳಾದುದೇ ಇದಕ್ಕೆ ಕಾರಣ. ಇದರಿಂದ ಅವರು ಆಸ್ಟ್ರೇಲಿಯ ಪ್ರವಾಸದ ಮೊದಲ ಹಂತವನ್ನು ತಪ್ಪಿಸಿಕೊಂಡಿದ್ದಾರೆ. ಕೊನೆಯಲ್ಲಿ ನಡೆಯುವ ಏಕದಿನ ಸರಣಿಯ ವೇಳೆ ತಂಡಕ್ಕೆ ಆಯ್ಕೆಯಾಗಬಹುದೇ ಎಂಬುದೊಂದು ನಿರೀಕ್ಷೆ.
ಆದರೆ ಇದಕ್ಕಾಗಿ ಹಾರ್ದಿಕ್ ಪಾಂಡ್ಯ ಪ್ರಸಕ್ತ ಋತುವಿನ ರಣಜಿ ಪಂದ್ಯಾವಳಿಯಲ್ಲಿ ಆಡಿ ಫಿಟ್ನೆಸ್ ಪರೀಕ್ಷಿಸಬೇಕೆಂದು ಬಿಸಿಸಿಐ ಸೂಚಿಸಿದೆ. ಹೀಗಾಗಿ ಅವರು ಬರೋಡ ಪರ ರಣಜಿ ಪಂದ್ಯ ಆಡುವ ಸಾಧ್ಯತೆ ಇದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಿಟ್ನೆಸ್ ಸುಧಾರಣೆಗೊಂಡ ಬಗ್ಗೆ ಹಾರ್ದಿಕ್ ಪಾಂಡ್ಯ ಪೋಸ್ಟ್ ಹಾಕಿದ್ದರು. ಬಳಿಕ ಅವರನ್ನು ನ್ಯೂಜಿಲ್ಯಾಂಡ್ “ಎ’ ವಿರುದ್ಧ ಡಿ. 7ರಿಂದ ನಡೆಯುವ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತ “ಎ’ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಇನ್ನೂ ಸಂಪೂರ್ಣ ಫಿಟ್ನೆಸ್ಗೆ ಮರಳದ ಕಾರಣ ಪಾಂಡ್ಯ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಡಿ. 14ರಿಂದ ಮುಂಬಯಿ ವಿರುದ್ಧ ನಡೆಯುವ ರಣಜಿ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬರೋಡವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅವರು 2016-17ರ ಋತುವಿನಲ್ಲಿ ಕೊನೆಯ ಸಲ ಪ್ರಥಮ ದರ್ಜೆ ಪಂದ್ಯವಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.