ಹಾರ್ದಿಕ್-ಸ್ಟಾನ್‌ಕೋವಿಕ್ ಜೋಡಿಗೆ ಅಪಹಾಸ್ಯ!
Team Udayavani, Jan 3, 2020, 10:57 PM IST
ಮುಂಬಯಿ: ಇತ್ತೀಚೆಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಇದರ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದರು. ಇದರ ಬೆನ್ನಲ್ಲೇ ಈ ಜೋಡಿ ಅಪಹಾಸ್ಯಕ್ಕೀಡಾಗಿದೆ.
ಕಪ್ಪು ಬಣ್ಣದ ಹಾರ್ದಿಕ್, ಬಿಳಿ ಬಣ್ಣದ ಸ್ಟಾನ್‌ಕೋವಿಕ್ ಅವರನ್ನು ವಿವಾಹ ಆಗುತ್ತಿರುವುದನ್ನು ತಮಾಷೆ ಮಾಡಿದ್ದಾರೆ. ಹಾರ್ದಿಕ್ ಬಣ್ಣವನ್ನು ಹಲವರು ಟೀಕಿಸಿದ್ದಾರೆ. ಇದು ಜನಾಂಗೀಯ ನಿಂದನೆ ಎನಿಸಿಕೊಂಡಿದೆ. ಇದರ ವಿರುದ್ಧ ಹಾರ್ದಿಕ್ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.
“ನೀವು ಅವರ ಸಾಧನೆ ನೋಡಿ. ಬಹಳ ಕಷ್ಟಪಟ್ಟು ಕ್ರಿಕೆಟ್‌ನಲ್ಲಿ ಮೇಲೇರಿದ್ದಾರೆ. ಮದುವೆ ಅವರ ವೈಯಕ್ತಿಕ ವಿಷಯ. ಈ ಬಗ್ಗೆ ಅಪಹಾಸ್ಯ, ಚರ್ಚೆ ಬೇಡ’ ಎಂದು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.