IPL 2023: ಪಂದ್ಯ ಗೆದ್ದರೂ ಬ್ಯಾಟರ್ ಗಳ ವಿರುದ್ಧ ಅಸಮಾಧಾನ ತೋರಿದ ಗುಜರಾತ್ ನಾಯಕ ಪಾಂಡ್ಯ
Team Udayavani, Apr 14, 2023, 2:01 PM IST
ಮೊಹಾಲಿ: ಪಂಜಾಬ್ ಕಿಂಗ್ಸ್ ವಿರುದ್ಧ ಗುರುವಾರದ ಐಪಿಎಲ್ ಪಂದ್ಯ ಗೆದ್ದ ಗುಜರಾತ್ ಟೈಟಾನ್ಸ್ ಮತ್ತೆ ಗೆಲುವಿನ ಹಳಿಗೇರಿದೆ. 154 ರನ್ ಗುರಿ ಪಡೆದಿದ್ದ ಗುಜರಾತ್ ಟೈಟಾನ್ಸ್ ತಂಡವು ಕೊನೆಯ ಓವರ್ ನಲ್ಲಿ ಜಯ ಸಾಧಿಸಿತು.
ಗುಜರಾತ್ ಪರ ಶುಭ್ಮನ್ ಗಿಲ್ ಅವರು 67 ರನ್ ಗಳಿಸಿ ಮತ್ತು ವೃದ್ಧಿಮಾನ್ ಸಾಹ ಅವರು 30 ರನ್ ಮಾಡಿ ನೆರವಾದರು. ಕೊನೆಯ ಓವರ್ ನಲ್ಲಿ ರಾಹುಲ್ ತಿವಾಟಿಯಾ ಅವರು ಬೌಂಡರಿ ಮೂಲಕ ತಂಡವನ್ನು ಗೆಲವಿನ ಗಡಿ ದಾಟಿಸಿದರು.
ಕೊನೆಯ ಓವರ್ ನಲ್ಲಿ ಗುಜರಾತ್ ಗೆಲುವಿಗೆ ಏಳು ರನ್ ಅಗತ್ಯವಿತ್ತು. ಆದರೆ ಎರಡನೇ ಎಸೆತದಲ್ಲಿ ಗಿಲ್ ಔಟಾದಾಗ ಗುಜರಾತ್ ಒತ್ತಡಕ್ಕೆ ಸಿಲುಕಿತ್ತು. ಆದರೆ ಐದನೇ ಎಸೆತದಲ್ಲಿ ತಿವಾಟಿಯಾ ಬೌಂಡರಿ ಬಾರಿಸಿ ಗೆಲುವು ತಂದಿತ್ತರು.
ಇದನ್ನೂ ಓದಿ:Operation Savadi ಯಶಸ್ವಿ: ಇಂದು ಸಂಜೆ ಕಾಂಗ್ರೆಸ್ ಪಕ್ಷಕ್ಕೆ ಲಕ್ಷ್ಮಣ ಸವದಿ ಸೇರ್ಪಡೆ
ಆದರೆ ಗೆಲುವಿನ ಬಳಿಕವೂ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಂಡದ ಬ್ಯಾಟರ್ ಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪಂದ್ಯವನ್ನು ಕೊನೆಯ ಓವರ್ ತನಕ ಕೊಂಡೊಯ್ಯಲು ತಾನು ಯಾವತ್ತೂ ಇಚ್ಚಿಸುವುದಿಲ್ಲ ಎಂದಿದ್ದಾರೆ.
“ಇದು ನುಂಗಲು ಕಠಿಣ ಮಾತ್ರೆಯಾಗಿದೆ. ಕೊನೆಯ ಓವರ್ ಗೆ ಆಟವನ್ನು ಕೊಂಡೊಯ್ಯುವ ಬಗ್ಗೆ ನಾನು ದೊಡ್ಡ ಅಭಿಮಾನಿಯಲ್ಲ” ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.
ಗುರುವಾರದ ಗೆಲುವು ಗುಜರಾತ್ ನ ಸೀಸನ್ ಮೂರನೇ ಗೆಲುವು ಮತ್ತು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್ಚಂದ್ ಖೇಲ್ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.