ಏಷ್ಯನ್ ಯೂತ್ ವೇಟ್ಲಿಫ್ಟಿಂಗ್: ಹರ್ಷದಾ ಬಂಗಾರದ ಹರ್ಷ
Team Udayavani, Jul 20, 2022, 12:21 AM IST
ಹೆರಾಕ್ಲಿಯೋನ್ (ಗ್ರೀಸ್): ಪ್ರತಿಭಾನ್ವಿತ ಲಿಫ್ಟರ್ ಹರ್ಷದಾ ಗರುಡ್ ಏಷ್ಯನ್ ಯೂತ್ ಆ್ಯಂಡ್ ಜೂನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದು ಮಹೋನ್ನತ ಸಾಧನೆಗೈದಿದ್ದಾರೆ.
ಪುಣೆಯ ಈ ಕ್ರೀಡಾಳು 45 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 157 ಕೆಜಿ ಭಾರವೆತ್ತಿ (69 ಕೆಜಿ ಪ್ಲಸ್ 88 ಕೆಜಿ) ಬಂಗಾರದೊಂದಿಗೆ ಮಿಂಚಿದರು. ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ ಮೊದಲ ಸ್ವರ್ಣ.
ಈ ಸಾಧನೆಯೊಂದಿಗೆ ಹರ್ಷದಾ ಗರುಡ್ ಅವರ ವೈಯಕ್ತಿಕ ಸಾಧನೆಯಲ್ಲಿ 4 ಕೆಜಿಗಳಷ್ಟು ಪ್ರಗತಿಯಾಯಿತು. ಮೇಯಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು 153 ಕೆಜಿ ಲಿಫ್ಟ್ ಮಾಡಿದ್ದರು (70 ಕೆಜಿ ಪ್ಲಸ್ 83 ಕೆಜಿ).
ಟರ್ಕಿಯ ಬೆಕ್ವಾಸ್ ಕ್ಯಾನ್ಸು ಬೆಳ್ಳಿ (150 ಕೆಜಿ) ಹಾಗೂ ಮೊಲ್ಡೋವಾದ ಹಿಂಕು ಟಿಯೋಡೋರ ಲುಮಿನಿಟ್ ಕಂಚು ಗೆದ್ದರು (149 ಕೆಜಿ).
ಪುರುಷರ 49 ಕೆಜಿ ಯೂತ್ ಸ್ಪರ್ಧೆಯಲ್ಲಿ ಎಲ್. ಧನುಷ್ ಕಂಚಿನ ಪದಕ ಗೆದ್ದರು(85 ಕೆಜಿ).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.