ಇನ್ನೂ ಆರಂಭವಾಗಿಲ್ಲ ಹಾರ್ದಿಕ್, ರಾಹುಲ್ ವಿಚಾರಣೆ!
Team Udayavani, Mar 7, 2019, 12:45 AM IST
ಮುಂಬಯಿ: ಕಾಫಿ ವಿತ್ ಕರಣ್ ಟೀವಿ ಶೋನಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದಾರೆಂಬ ಹಿನ್ನೆಲೆಯಲ್ಲಿ, ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್‌ಗೆ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳ ನಿಷೇಧ ಹೇರಲಾಗಿತ್ತು.
ಈ ಇಬ್ಬರು ಕ್ಷಮೆ ಕೇಳಿದ್ದರೂ, ವಿಚಾರಣೆ ನಡೆಸಲು ಬಿಸಿಸಿಐನ ಬೇಡಿಕೆಯಂತೆ ಸರ್ವೋಚ್ಚ ನ್ಯಾಯಾಲಯ ವಿಶೇಷ ತನಿಖಾಧಿಕಾರಿಯನ್ನು ನೇಮಿಸಿತ್ತು. ಇದಾಗಿ ಎರಡು ವಾರಗಳು ಕಳೆದಿದ್ದರೂ, ಈ ಪ್ರಕರಣವನ್ನು ಬಿಸಿಸಿಐ ಇನ್ನೂ ವಿಚಾರಣೆಗೆ ಒಪ್ಪಿಸಿಲ್ಲ! ಈ ವಿಷಯವನ್ನು ತನಿಖಾಧಿಕಾರಿ ಡಿ.ಕೆ.ಜೈನ್ ಹೇಳಿಕೊಂಡಿದ್ದಾರೆ.
ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ವಿನೋದ್ ರಾಯ್, ಸಹ ಆಡಳಿತಾಧಿಕಾರಿ ಡಯಾನ ಎಡುಲ್ಜಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಈ ಪ್ರಕರಣಕ್ಕೆ ಶಿಕ್ಷೆ ನೀಡುವುದು ಬಿಸಿಸಿಐ ನೀತಿ ಸಂಹಿತೆಯಲ್ಲಿಲ್ಲ ಎಂದು ಗೊತ್ತಾಗಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಇಬ್ಬರೂ ಕ್ರಿಕೆಟಿಗರು ಬೇಷರತ್ ಈ ಪ್ರಕರಣದ ಕುರಿತು ಕ್ಷಮೆ ಕೇಳಿದ್ದರು. ಇದಾದ ಬಳಿಕ ಕೆಲವು ಪಂದ್ಯಗಳ ನಿಷೇಧ ವಿಧಿಸಿಯೋ, ಎಚ್ಚರಿಕೆ ನೀಡಿಯೋ ಕೈಬಿಡಬೇಕಾಗಿದ್ದ ಪ್ರಕರಣವನ್ನು ಅತಿಯಾಗಿ ಎಳೆದಾಡಿ, ಕಡೆಗೆ ತನಿಖೆ ನಡೆಯಬೇಕು ಎಂಬ ಮಟ್ಟಕ್ಕೆ ಎಳೆದುಕೊಂಡು ಹೋಗಿದ್ದಾರೆ. ಇಷ್ಟಾದ ಮೇಲೆ ಈ ವಿಷಯದ ಕುರಿತು ಒಂದು ತಾರ್ಕಿಕ ಅಂತ್ಯಕ್ಕೆ ಬಿಸಿಸಿಐ ಏಕೆ ಒಯ್ಯುತ್ತಿಲ್ಲ ಎಂದು ಪ್ರಶ್ನೆ ಹಲವರಲ್ಲಿ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.