ದಬಾಂಗ್ ಡೆಲ್ಲಿಗೆ ಹರಿಯಾಣ ಗುದ್ದು: ಯುಪಿ, ತಮಿಳ್ ಪಂದ್ಯ ರೋಚಕ ಟೈ
Team Udayavani, Aug 24, 2017, 11:31 AM IST
ಲಕ್ನೋ: ಅಂತಿಮ ಕ್ಷಣದಲ್ಲಿ ರೋಚಕತೆ ಪಡೆದ ಪ್ರೊ ಕಬಡ್ಡಿ ಲೀಗ್ ಐದರ ಬುಧವಾರ ನಡೆದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಯುಪಿ ಯೋಧಾ ಮತ್ತು ತಮಿಳ್ ತಲೈವಾಸ್ ನಡುವಣ ಹೋರಾಟವು 33-33 ಅಂಕಗಳಿಂದ ಟೈಯಲ್ಲಿ ಅಂತ್ಯಗೊಂಡಿತು.
ಮೊದಲ ಅವಧಿಯ ಆಟ ಮುಗಿದಾಗ ಯುಪಿ 19-11 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯ ಅವಧಿಯಲ್ಲಿ ತಿರುಗೇಟು ನೀಡಿದ ತಮಿಳ್ ತಂಡ ಅಮೋಘವಾಗಿ ಆಡಿ ಸಮಬಲ ಸಾಧಿಸಿತು. ಕೊನೆಯ ತನಕವೂ ರೋಚಕವಾಗಿ ಸಾಗಿದ ಈ ಹೋರಾಟ ಅಂತಿಮವಾಗಿ ಟೈಯಲ್ಲಿ ಅಂತ್ಯಗೊಂಡಿತು.
ಈ ಮೊದಲು ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ 27-25ರಿಂದ ದಬಾಂಗ್ ಡೆಲ್ಲಿಗೆ ಭರ್ಜರಿ ಆಘಾತ ನೀಡಿದೆ. ಬುಧವಾರ ನಡೆದ ಈ ಪಂದ್ಯದಲ್ಲಿ ಹರಿಯಾಣ ಜಯ ಸಾಧಿಸುವ ಮೂಲಕ ಕೂಟದಲ್ಲಿ 3ನೇ ಗೆಲುವು ಸಾಧಿಸಿತು. ಇಲ್ಲಿನ ಬಾಬು ಬನಾರಸಿದಾಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣ ಭರ್ಜರಿ ಆರಂಭ ಪಡೆಯಿತು. ಇದರ ಫಲವಾಗಿ ಪಂದ್ಯ ಆರಂಭವಾಗಿ 14ನೇ ನಿಮಿಷದಲ್ಲಿ ಹರಿಯಾಣ 15-6 ರಿಂದ ಭಾರೀ ಮುನ್ನಡೆ ಪಡೆಯಿತು. ಅನಂತರ ಕೂಡ ಹರಿಯಾಣ ದಾಳಿಗೆ ಡೆಲ್ಲಿ ಕುಸಿಯತೊಡಗಿತು. ಇದರಿಂದಾಗಿ ಮೊದಲ ಅವಧಿಯ ಅಂತ್ಯದಲ್ಲಿ ಹರಿಯಾಣ 17-9ರಿಂದ ಮುನ್ನಡೆ ಪಡೆಯಿತು.
ಮೊದಲ ಅವಧಿಯಲ್ಲಿ ಭಾರೀ ಹಿನ್ನಡೆಯಲ್ಲಿದ್ದ ಡೆಲ್ಲಿ 2ನೇ ಅವಧಿಯಲ್ಲಿ ತಿರುಗೇಟು ನೀಡಿತು. ಹಂತ ಹಂತವಾಗಿ ತನ್ನ ಅಂಕವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಇದರಿಂದಾಗಿ ಡೆಲ್ಲಿ 19-19 ರಿಂದ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪಂದ್ಯ ಮುಗಿಯಲು 3 ನಿಮಿಷ ಬಾಕಿ ಇರುವಾಗ ಡೆಲ್ಲಿ 25-24ರಿಂದ ಮುನ್ನಡೆ ಪಡೆದಿತ್ತು.
ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?