ಬೆಂಗಾಲ್ ವಿರುದ್ಧ ಹರ್ಯಾಣಕ್ಕೆ ಜಯ
Team Udayavani, Dec 6, 2018, 6:15 AM IST
ನವದೆಹಲಿ: 6ನೇ ಆವೃತ್ತಿ ಪ್ರೊ ಕಬಡ್ಡಿ ದೆಹಲಿ ಚರಣದಲ್ಲಿ ಬುಧವಾರ ನಡೆದ ಅಂತರ್ವಲಯ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ 35-33 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಸಾಧಿಸಿದೆ.
ಈ ಜಯದ ಮೂಲಕ ಎ ಗುಂಪಿನಲ್ಲಿರುವ ಹರ್ಯಾಣ ಸ್ಥಿತಿ ತುಸು ಸುಧಾರಿಸಿದೆ. ಬಿ ಗುಂಪಿನಲ್ಲಿರುವ ಬೆಂಗಾಲ್ ಯಥಾಸ್ಥಾನ ಕಾಪಾಡಿಕೊಂಡಿದೆ. ಒಟ್ಟಾರೆ ಹೋಲಿಸಿದರೆ ಹರ್ಯಾಣಕ್ಕಿಂತ ಬೆಂಗಾಲ್ ಉತ್ತಮ ಸ್ಥಿತಿಯಲ್ಲಿದೆ.
ಹರ್ಯಾಣ ಪರ ದಾಳಿಯಲ್ಲಿ ಖ್ಯಾತ ಆಟಗಾರ ಮೋನು ಗೋಯತ್ ಮಿಂಚಿದರು. ಆದರೆ ಅವರ ಎಂದಿನ ಸಾಮರ್ಥ್ಯಕ್ಕೆ ಹೋಲಿಸಿದರೆ ಈ ಪ್ರದರ್ಶನ ಅದ್ಭುತವೇನಲ್ಲ ಎಂದು ಖಚಿತವಾಗಿ ಹೇಳಬಹುದು. ಮೋನು 25 ಬಾರಿ ಬೆಂಗಾಲ್ ಕೋಟೆಗೆ ದಾಳಿಯಿಟ್ಟು, 12 ಬಾರಿ ಯಶಸ್ಸು ಸಾಧಿಸಿದರು. 8 ಬಾರಿಎದುರಾಳಿಗಳನ್ನು ಔಟ್ ಮಾಡಿದರೆ,ಇನ್ನು 4 ಬೋನಸ್ ಅಂಕ ಅವರಿಗೆ ಲಭಿಸಿತು. ರಕ್ಷಣಾ ವಿಭಾಗದಲ್ಲಿ ಹರ್ಯಾಣ ಸಾಧನೆ ಪರವಾಗಿಲ್ಲ ಎನ್ನುವ ಮಟ್ಟದಲ್ಲೇ ಇದೆ. ಇದರ ನಡುವೆಯೇ ಆ ತಂಡ ಗೆದ್ದಿದೆ ಅಚ್ಚರಿ ಮೂಡಿಸಿದೆ.
ಸೋತ ಬೆಂಗಾಲ್ ಪರ ಮಣಿಂದರ್ ಸಿಂಗ್ ಹಾಗೂ ರವೀಂದ್ರ ಕುಮಾವತ್ ಮಿಂಚಿದರು. ಮಣಿಂದರ್ ಸಿಂಗ್ 18 ಬಾರಿ ದಾಳಿ ನಡೆಸಿ 11 ಅಂಕ ಗಳಿಸಿದರು. ಇವರ ನೆರವಿಗೆ ನಿಂತ ರವೀಂದ್ರ 7 ಅಂಕ ಗಳಿಸಿದರು. ಬೆಂಗಾಲ್ ಕೂಡ ರಕ್ಷಣೆಯಲ್ಲಿ ವೈಫಲ್ಯ ಅನುಭವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.