ಸೆಮಿ ಸೋಲಿನ ಬಳಿಕ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪಾಕ್ ವೇಗಿ ಹಸನ್ ಅಲಿ
Team Udayavani, Nov 14, 2021, 12:22 PM IST
ದುಬೈ: ಐಸಿಸಿ ಟಿ20 ವಿಶ್ವಕಪ್ ನ ಸೆಮಿ ಫೈನಲ್ ಪಂದ್ಯದ ಸೋಲಿನ ಬಳಿಕ ನಿಂದನೆಗೆ ಒಳಗಾಗಿದ್ದ ಪಾಕಿಸ್ಥಾನದ ವೇಗಿ ಹಸನ್ ಅಲಿ, ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 19ನೇ ಓವರ್ ನಲ್ಲಿ ಹಸನ್ ಅಲಿ ಪ್ರಮುಖ ಕ್ಯಾಚ್ ಚೆಲ್ಲಿದ್ದರು. ಇದರ ಪ್ರಯೋಜನ ಪಡೆದ ಆಸೀಸ್ ಆಟಗಾರ ಮ್ಯಾಥ್ಯೂ ವೇಡ್ ಮುಂದಿನ ಮೂರು ಎಸೆತದಲ್ಲಿ ಮೂರು ಸಿಕ್ಸರ್ ಬಾರಿಸಿ ಆಸೀಸ್ ಗೆ ನೆರವಾಗಿದ್ದರು. ಆಸೀಸ್ ಫೈನಲ್ ತಲುಪಿದರೆ, ಪಾಕ್ ತಂಡ ಕೂಟದಿಂದ ಹೊರಬಿದ್ದಿತ್ತು.
ಈ ಸೋಲಿನ ನಂತರ, ಹಸನ್ ಅಲಿ ಸಾಮಾಜಿಕ ಮಾಧ್ಯಮದಲ್ಲಿ ನಿಂದನೆಗೆ ಒಳಗಾಗಿದ್ದರು. ಶನಿವಾರ ಟ್ವಿಟರ್‌ನಲ್ಲಿ ಹಸನ್ ಅಲಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ:ಭಾರತ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಬದಲಾವಣೆ ಮಾಡಿಕೊಂಡ ನ್ಯೂಜಿಲ್ಯಾಂಡ್
“ನನ್ನ ಪ್ರದರ್ಶನವು ನಿಮ್ಮ ನಿರೀಕ್ಷೆಗಳನ್ನು ಪೂರೈಸದ ಕಾರಣ ನೀವೆಲ್ಲರೂ ಅಸಮಾಧಾನಗೊಂಡಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ ನೀವು ನನಗಿಂತ ಹೆಚ್ಚು ನಿರಾಶೆಗೊಂಡಿಲ್ಲ. ನನ್ನ ಮೇಲಿನ ನಿಮ್ಮ ನಿರೀಕ್ಷೆಗಳನ್ನು ಬದಲಾಯಿಸಬೇಡಿ. ನಾನು ಪಾಕಿಸ್ತಾನ ಕ್ರಿಕೆಟ್‌ಗೆ ಸಾಧ್ಯವಾದಷ್ಟು ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಲು ಬಯಸುತ್ತೇನೆ” ಎಂದು ಅಲಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.
میرا سینہ تیری حُرمت کا ہے سنگین حصار،
میرے محبوب وطن تُجھ پہ اگر جاں ہو نثارمیں یہ سمجھوں گا ٹھکانے لگا سرمایہِ تن،
اے میرے پیارے وطن ??? pic.twitter.com/4xiTS0hAvx— Hassan Ali ?? (@RealHa55an) November 13, 2021
ಪಾಕ್ ಕ್ರಿಕೆಟ್ ದಿಗ್ಗಜರಾದ ವಾಸಿಂ ಅಕ್ರಮ್ ಮತ್ತು ಮಿಸ್ಬಾ-ಉಲ್-ಹಕ್, ವಕಾರ್ ಯೂನಿಸ್, ರಶೀದ್ ಲತೀಫ್ ಮತ್ತು ಇಂಜಮಾಮ್-ಉಲ್-ಹಕ್ ಹಸನ್ ಮುಂತಾದವರು ಹಸನ್ ಅಲಿಗೆ ಬೆಂಬಲ ಸೂಚಿದ್ದರು. ಪಾಕಿಸ್ತಾನದ ಸೋಲಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ಅನ್ಯಾಯ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.