ಧೋನಿ ಆಧಾರ್ ಟ್ವೀಟ್ ಮಾಡಿದ ನೋಂದಣಿ ಸಂಸ್ಥೆ!
Team Udayavani, Mar 31, 2017, 8:22 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಆಧಾರ್ ಸಂಖ್ಯೆಯನ್ನು ರಾಂಚಿಯಲ್ಲಿನ ನೋಂದಣಿ ಸಂಸ್ಥೆಯೊಂದರ ಸಿಬ್ಬಂದಿ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಇದು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದೆ. ಧೋನಿಯನ್ನು ನೋಂದಣಿ ಸಂದರ್ಭದಲ್ಲಿ ನೋಡಿದ ಉತ್ಸಾಹದಲ್ಲಿ ಸಿಬ್ಬಂದಿ ಧೋನಿ ಚಿತ್ರದ ಸಮೇತ ಅವರ ಆಧಾರ್ ಸಂಖ್ಯೆಯನ್ನು ಟ್ವೀಟ್ ಮಾಡಿದ್ದಾರೆ.
ಇದನ್ನು ಧೋನಿ ಪತ್ನಿ ಸಾಕ್ಷಿ ಸಿಂಗ್ ಕಟುವಾಗಿ ಪ್ರಶ್ನಿಸಿದ್ದಾರೆ. ಖಾಸಗಿ ಮಾಹಿತಿಯ ಸುರಕ್ಷತೆ ಸಾಧ್ಯವೇ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್‌ರವರಿಗೇ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರವಿಶಂಕರ್ ಪ್ರಸಾದ್, ರಾಂಚಿಯಲ್ಲಿನ ಸಿಬ್ಬಂದಿ ಧೋನಿಯನ್ನು ನೋಡಿದ ಉತ್ಸಾಹದಲ್ಲಿ ಈ ಕೃತ್ಯ ಮಾಡಿದ್ದಾರೆ. ಆದರೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದಕ್ಕೆ ಕಾರಣವಾದ ಏಜೆನ್ಸಿಯನ್ನು 10 ವರ್ಷಗಳ ಮಟ್ಟಿಗೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಕೋಲಾಹಲ: ಈ ಘಟನೆ ರಾಜ್ಯಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. “ಪ್ರತಿಷ್ಠಿತ ಕ್ರಿಕೆಟಿಗ ಧೋನಿ ಆಧಾರ್ ಸಂಖ್ಯೆಯನ್ನು ಆಧಾರ್ ನೋಂದಣಿ ಏಜೆನ್ಸಿಯೇ ಬಹಿರಂಗ ಪಡಿಸಿದೆ. ಹೀಗಿರುವಾಗ ಸಾರ್ವಜನಿಕರ ಆಧಾರ್ ಮಾಹಿತಿ
ಯನ್ನು ಸರ್ಕಾರ ಕಾಪಾಡುತ್ತದೆ ಎಂದು ನಂಬಲು ಹೇಗೆ ಸಾಧ್ಯ’ ಇದು ವಿತ್ತಸಚಿವ ಅರುಣ್ ಜೇಟ್ಲಿ ಅವರಿಗೆ ಮಾಜಿ ವಿತ್ತ ಸಚಿವ ಚಿದಂಬರಂ ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಸಚಿವ ಅರುಣ್ ಜೇಟ್ಲಿ, “ಜಗತ್ತಿನಲ್ಲಿ ಏನನ್ನೂ ಹ್ಯಾಕ್ ಮಾಡಬಹುದು. ತಂತ್ರಜ್ಞಾನದಿಂದ ಮಾಹಿತಿ ಸುರಕ್ಷಿತವಾಗಿರಿಸಬಹುದು ಎಂಬ ಭ್ರಮೆ ಬೇಡ’ ಎಂದು ತಿರುಗೇಟು ನೀಡಿದರು.
ಆಗಿದ್ದೇನು?
* ರಾಂಚಿಯಲ್ಲಿನ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಿದ್ದ ಧೋನಿ
* ಧೋನಿಯೊಂದಿಗಿನ ಚಿತ್ರ ಮತ್ತು ಆಧಾರ್ ಪುಟ ಟ್ವೀಟ್ ಮಾಡಿದ ಸಿಬ್ಬಂದಿ
* ಘಟನೆಯಿಂದ ಸಿಟ್ಟಾದ ಧೋನಿ ಪತ್ನಿ ಸಾಕ್ಷಿ ಘಟನೆಗೆ ಕಾರಣವಾದ ನೋಂದಣಿ
* ಸಂಸ್ಥೆಗೆ 10 ವರ್ಷ ನಿಷೇಧ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.