ಕೊಹ್ಲಿ ನಕಲಿ ಟ್ವಿಟರ್ ಖಾತೆಗೆ ಸಂದೇಶ ಕಳುಹಿಸಿ ಮೋಸ ಹೋದ ಸ್ಟಾರ್ಕ್
Team Udayavani, Apr 3, 2017, 2:53 PM IST
ಹೊಸದಿಲ್ಲಿ: ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಟ್ವಿಟರ್ ಖಾತೆಯೆಂದು ಭಾವಿಸಿ ನಕಲಿ ಖಾತೆಗೆ ಆಸ್ಟ್ರೇಲಿಯ ಕ್ರಿಕೆಟಿಗ ಮಿಚಲ್ ಸ್ಟಾರ್ಕ್ ಟ್ವೀಟ್ ಮಾಡಿ ಮೋಸ ಹೋದ ಘಟನೆಯೊಂದು ನಡೆದಿದೆ. ಈ ವಿಷಯವನ್ನು ಸ್ವತಃ ನಕಲಿ ಖಾತೆದಾರ ಬಹಿರಂಗಪಡಿಸಿದಾಗ ಎಲ್ಲರಿಗೂ ವಿಷಯ ಗೊತ್ತಾಗಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಇದು ಸುದ್ದಿಯಾಗಿದ್ದು ತತ್‌ಕ್ಷಣ ವಿರಾಟ್ ಕೊಹ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಏನಿದು ನಕಲಿ ಖಾತೆ, ಸ್ಟಾರ್ಕ್ ನನಗೆ ಮೆಸೇಜ್ ಮಾಡಿದ್ದೀರಿ? ಎಂದು ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಆ ಮೇಲೆ ತನ್ನ ತಪ್ಪು ಸ್ಟಾರ್ಕ್‌ಗೆ ಗೊತ್ತಾಗಿದೆ. ತತ್‌ಕ್ಷಣ ಅವರು ತಮ್ಮ ಟ್ವೀಟ್ ಅನ್ನು ಡಿಲಿಟ್ ಮಾಡಿದ್ದಾರೆ.
ನಕಲಿ ಖಾತೆಗೆ ಟ್ವೀಟ್ ಮಾಡಿದ್ದೇನು?: ಮಿಚೆಲ್ ಸ್ಟಾರ್ಕ್ ಆರ್‌ಸಿಬಿ ತಂಡದ ವೇಗದ ಬೌಲರ್. ಪ್ರಸ್ತುತ 10ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಗಾಯದ ಹಿನ್ನೆಲೆಯಲ್ಲಿ ಅವರು ಕೂಟದಿಂದ ಹಿಂದಕ್ಕೆ ಸರಿದಿದ್ದಾರೆ. ಐಪಿಎಲ್ ಆರಂಭದ ದಿನಗಳು ಹತ್ತಿರದಲ್ಲಿವೆ. ಹೀಗಾಗಿ ತಮ್ಮ ಸ್ನೇಹಿತ ವಿರಾಟ್ ಕೊಹ್ಲಿಗೆ ಟ್ವೀಟರ್‌ನಲ್ಲಿ ಶುಭಾಶಯ ಹೇಳಲು ಮುಂದಾಗಿದ್ದಾರೆ. @imVKohli ಖಾತೆಗೆ ಸಂದೇಶವನ್ನು ಕಳುಹಿಸಿದ್ದಾರೆ. ಗೆಲುವಿನ ಸಂಭ್ರಮದಲ್ಲಿರುವ ವಿರಾಟ್ ಮತ್ತು ತಂಡಕ್ಕೆ ಅಭಿನಂದನೆಗಳು. ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ. ನಾನು ಯಾವುದೇ ಹೊಸ ತಂಡವನ್ನು ನೋಡುತ್ತಿಲ್ಲ. ಮಾಧ್ಯಮಗಳಿಗೂ ನನ್ನನ್ನು ಹುಡುಕಲು ಸಾಧ್ಯವಾಗಿಲ್ಲ. ಅದಿರಲಿ ನಿಮ್ಮ ಭುಜದ ನೋವು ಶೀಘ್ರ ಗುಣವಾಗಲಿ. ನೀವು ಐಪಿಎಲ್‌ನಲ್ಲಿ ಶ್ರೇಷ್ಠ ಆಟ ಆಡುವಂತಾಗಲಿ. ಆರ್‌ಸಿಬಿ ಗೆಲ್ಲಲಿ ಎಂದು ಸ್ಟಾರ್ಕ್ ನಕಲಿ ಖಾತೆಗೆ ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
MUST WATCH
ಹೊಸ ಸೇರ್ಪಡೆ
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.