‘ಹೃದಯ ಒಡೆದು ಹೋಯಿತು..’; ಡಬ್ಲ್ಯೂಪಿಎಲ್ ಕನಸಿನ ಬಗ್ಗೆ ಇಂಗ್ಲೆಂಡ್ ಆಟಗಾರ್ತಿಯ ಮಾತು
Team Udayavani, Feb 14, 2023, 4:58 PM IST
ಲಂಡನ್: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ ಯಾವುದೇ ತಂಡದ ಪಾಲಾಗದ ಇಂಗ್ಲೆಂಡ್ ಬ್ಯಾಟರ್ ಡೇನಿಯಲ್ ವ್ಯಾಟ್ ಹೃದಯ ಒಡೆದು ಹೋಯಿತೆಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ್ತಿ ವ್ಯಾಟ್ ಅವರು ಡಬ್ಲ್ಯುಪಿಎಲ್ ಹರಾಜಿನಲ್ಲಿ 50 ಲಕ್ಷ ರೂ ಮೂಲ ಬೆಲೆಯೊಂದಿಗೆ ತಮ್ಮನ್ನು ನಮೂದಿಸಿಕೊಂಡಿದ್ದರು. ಆದರೆ ಯಾವದೇ ಫ್ರಾಂಚೈಸಿಯು ಅವರನ್ನು ಖರೀದಿ ಮಾಡಲು ಮುಂದಾಗಲಿಲ್ಲ.
ಇದನ್ನೂ ಓದಿ:ಇಬ್ಬರನ್ನು ಬಲಿ ಪಡೆದು ಕೊಡಗಿನ ಜನರ ನಿದ್ದೆಗೆಡಿಸಿದ್ದ ವ್ಯಾಘ್ರ ಕೊನೆಗೂ ಸೆರೆ
ವ್ಯಾಟ್ 140 ಟಿ20 ಪಂದ್ಯಗಳಲ್ಲಿ ಎರಡು ಶತಕ ಮತ್ತು 10 ಅರ್ಧಶತಕ ಸೇರಿದಂತೆ 2276 ರನ್ ಗಳಿಸಿದ್ದಾರೆ. ಅಲ್ಲದೆ 46 ವಿಕೆಟ್‌ಗಳನ್ನು ಪಡೆದಿದ್ದಾರೆ. 31 ವರ್ಷದ ಅವರು 102 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.
ಬಲಗೈ ಬ್ಯಾಟರ್ ದಿ ಹಂಡ್ರೆಡ್ ಮತ್ತು ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಂತಹ ಟಿ 20 ಪಂದ್ಯಾವಳಿಗಳಲ್ಲಿಯೂ ಆಡಿದ್ದಾರೆ.
Dreamt of playing in the WPL. Heartbroken 💔 Congrats to all who got picked up. India is a wonderful place to play cricket
— Danielle Wyatt (@Danni_Wyatt) February 14, 2023
ಡಬ್ಲ್ಯೂಪಿಎಲ್ 2023 ಹರಾಜಿನಲ್ಲಿ 30 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 87 ಆಟಗಾರರು ಮಾರಾಟವಾದರು. ಸ್ಮೃತಿ ಮಂಧಾನಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 3.4 ಕೋಟಿ ರೂ ನೀಡಿ ಖರೀದಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.