Ipl: ರನ್‌ ಪರ್ವತ ಏರಿದ ಹೈದರಾಬಾದ್‌, ಆರ್‌ಸಿಬಿ ದಾಖಲೆ ಪತನ

Team Udayavani, Mar 27, 2024, 10:45 PM IST

ipl: ರನ್‌ ಪರ್ವತ ಏರಿದ ಹೈದರಾಬಾದ್‌, ಆರ್‌ಸಿಬಿ ದಾಖಲೆ ಪತನ

ಹೈದರಾಬಾದ್‌: ಹೈದರಾಬಾದ್‌ ಅಂಗಳದಲ್ಲಿ ಆತಿಥೇಯ ಸನ್‌ರೈಸರ್ ಹೈದರಾಬಾದ್‌ ರನ್‌ ಪರ್ವತವೇರಿ ನಿಂತಿದ್ದು, ಐಪಿಎಲ್‌ ಇತಿಹಾಸದಲ್ಲಿ ನೂತನ ದಾಖಲೆ ಸ್ಥಾಪಿಸಿದೆ. ಬುಧವಾರದ ಮುಖಾಮುಖೀಯಲ್ಲಿ ಹೈದರಾಬಾದ್‌ ತಂಡತವು ಕೇವಲ 3 ವಿಕೆಟಿಗೆ 277 ರನ್‌ ಪೇರಿಸಿದ್ದರೆ, ಇದಕ್ಕುತ್ತರವಾಗಿ ಮುಂಬೈ ಇಂಡಿಯನ್ಸ್‌ ತಂಡವು ಐದು ವಿಕೆಟಿಗೆ 246 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಮುಂಬೈಯ ಆರಂಭ ಉತ್ತಮವಾಗಿತ್ತು. ತಿಲಕ್‌ ವರ್ಮ ಬಿರುಸಿನ ಆಟವಾಡಿ ತಂಡದ ಮೊತ್ತ ಏರಿಸತೊಡಗಿದ್ದರು. ಅವರು ಮತ್ತು ಟಿಮ್‌ ಡೇವಿಡ್‌ ಅವರ ಸ್ಫೋಟಕ ಆಟದಿದಾಗಿ ತಂಡ ಗೆಲುವಿನತ್ತ ಮುನ್ನಡೆಯಿತು. ಅಂತಿಮವಾಗಿ ಬೃಹತ್‌ ಮೊತ್ತದ ಹೊರಾಟದಲ್ಲಿ ಒತ್ತಡಕ್ಕೆ ಸಿಲುಕಿ ಸೋಲನ್ನು ಒಪ್ಪಿಕೊಂಡಿತು. ತಿಲಕ್‌ ವಮರ 64 ರನ್‌ ಗಳಿಸಿದ್ದರೆ ಟಿಮ್‌ ಡೇವಿಡ್‌ 43 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಹೈದರಾಬಾದ್‌ ತಂಡವು 3 ವಿಕೆಟಿಗೆ 277 ರನ್‌ ಪೇರಿಸುವ ಮೂಲಕ 2013ರ ಪುಣೆ ವಾರಿಯರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 5ಕ್ಕೆ 263 ರನ್‌ ಪೇರಿಸಿದ ದಾಖಲೆ ಮುರಿಯಲ್ಪಟ್ಟಿತು.

ಟ್ರ್ಯಾವಿಸ್‌ ಹೆಡ್‌, ಅಭಿಷೇಕ್‌ ಶರ್ಮ ಮತ್ತು ಹೆನ್ರಿಚ್‌ ಕ್ಲಾಸೆನ್‌ ಸೇರಿಕೊಂಡು ಮುಂಬೈ ಎಸೆತಗಳನ್ನು ಲೆಕ್ಕಕ್ಕಿಲ್ಲದಂತೆ ಮಾಡಿದರು. ವಿಶ್ವಕಪ್‌ ಫೈನಲ್‌ ಹೀರೋ ಟ್ರ್ಯಾವಿಸ್‌ ಹೆಡ್‌ ಆರಂಭದಲ್ಲೇ ಮುಂಬೈ ಬೌಲರ್‌ಗಳ ಮೇಲೆರಗಿ ಹೋದರು. ಒಂದೆಡೆ ಮಾಯಾಂಕ್‌ ಅಗರ್ವಾಲ್‌ ನಿಂತು ಆಡಿದರೆ, ಹೆಡ್‌ ಸಿಡಿದು ನಿಂತರು. ಪವರ್‌ ಪ್ಲೇ ಅವಧಿಯಲ್ಲಿ 81 ರನ್‌ ಒಟ್ಟುಗೂಡಿದ್ದು ಹೆಡ್‌ ಪರಾಕ್ರಮಕ್ಕೆ ಸಾಕ್ಷಿ. ಆಗಲೇ ಹೆಡ್‌ 18 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಹೈದರಾಬಾದ್‌ನ ಬೃಹತ್‌ ಮೊತ್ತಕ್ಕೆ ಬುನಾದಿ ಹಾಕಿದರು. ಗೆರಾಲ್ಡ್‌ ಕೋಟಿj, ಕ್ವೆನ ಮಫ‌ಕ ಭಾರೀ ದುಬಾರಿಯಾಗಿ ಪರಿಣಮಿಸಿದರು.

ಹೆಡ್‌ ಐಪಿಎಲ್‌ನಲ್ಲಿ 2ನೇ ಅತೀ ವೇಗದ ಜಂಟಿ ಅರ್ಧ ಶತಕ ಹೊಡೆದರು. ರಿಷಭ್‌ ಪಂತ್‌ ಕೂಡ 18 ಎಸೆತಗಳಲ್ಲಿ ಫಿಫ್ಟಿ ಹೊಡೆದಿದ್ದಾರೆ. ಪ್ಯಾಟ್‌ ಕಮಿನ್ಸ್‌ 14 ಎಸೆತಗಳಲ್ಲಿ 50 ರನ್‌ ಹೊಡೆದದ್ದು ದಾಖಲೆ.

ಭರ್ತಿ 7 ಓವರ್‌ಗಳಲ್ಲಿ ಹೈದರಾಬಾದ್‌ ತಂಡದ 100 ರನ್‌ ಪೂರ್ತಿಗೊಂಡಿತು. 24 ಎಸೆತ ಎದುರಿಸಿದ ಹೆಡ್‌ 9 ಫೋರ್‌, 3 ಸಿಕ್ಸರ್‌ ನೆರವಿನಿಂದ 62 ರನ್‌ ಸಿಡಿಸಿ ಅಬ್ಬರಿಸಿದರು. 8ನೇ ಓವರ್‌ನಲ್ಲಿ ಹೆಡ್‌ ಆಟ ಮುಗಿಯಿತು. ಈ ವಿಕೆಟ್‌ ಕೋಟಿj ಪಾಲಾಯಿತು. ಹೆಡ್‌ ಅವರಿಂದ ಸ್ಫೂರ್ತಿಗೊಂಡ ಅಭಿಷೇಕ್‌ ಶರ್ಮ ಕೂಡ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ಅವರ ಅರ್ಧ ಶತಕ 16 ಎಸೆತಗಳಲ್ಲಿ ಪೂರ್ತಿಗೊಂಡಿತು. ಹೈದರಾಬಾದ್‌ ಪರ ಹೆಡ್‌ ಬಾರಿಸಿದ ಅತೀ ವೇಗದ ಅರ್ಧ ಶತಕವನ್ನು ಕೆಲವೇ ನಿಮಿಷಗಳಲ್ಲಿ ಮುರಿದರು.

ಅಭಿಷೇಕ್‌ 23 ಎಸೆತ ಎದುರಿಸಿ 63 ರನ್‌ ಸಿಡಿಸಿದರು (7 ಸಿಕ್ಸರ್‌, 3 ಬೌಂಡರಿ). ಕೆಕೆಆರ್‌ ವಿರುದ್ಧದ ಬ್ಯಾಟಿಂಗ್‌ ಅಬ್ಬರವನ್ನೇ ಮುಂದುವರಿಸಿದ ಕ್ಲಾಸೆನ್‌ 34 ಎಸೆತಗಳಿಂದ ಅಜೇಯ 80 ರನ್‌ ಬಾರಿಸಿದರು (4 ಬೌಂಡರಿ, 7 ಸಿಕ್ಸರ್‌).

10 ಓವರ್‌, 148 ರನ್‌
ಮೊದಲ 10 ಓವರ್‌ಗಳಲ್ಲಿ ಹೈದರಾಬಾದ್‌ 148 ರನ್‌ ರಾಶಿ ಹಾಕಿತು. ಇದು ಐಪಿಎಲ್‌ ದಾಖಲೆ. 2021ರಲ್ಲಿ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ 3ಕ್ಕೆ 131 ರನ್‌ ಗಳಿಸಿದ್ದು ದಾಖಲೆ ಆಗಿತ್ತು. 2014ರಲ್ಲಿ ಹೈದರಾಬಾದ್‌ ವಿರುದ್ಧ ಪಂಜಾಬ್‌ ಕೂಡ 3ಕ್ಕೆ 131 ರನ್‌ ಬಾರಿಸಿತ್ತು.

ಸನ್‌ರೈಸರ್ ಹೈದರಾಬಾದ್‌
ಅಗರ್ವಾಲ್‌ ಸಿ ಡೇವಿಡ್‌ ಬಿ ಪಾಂಡ್ಯ 11
ಟ್ರ್ಯಾವಿಸ್‌ ಹೆಡ್‌ ಸಿ ಬುಮ್ರಾ ಬಿ ಕೋಟಿj 62
ಅಭಿಷೇಕ್‌ ಶರ್ಮ ಸಿ ಧೀರ್‌ ಬಿ ಚಾವ್ಲಾ 63
ಐಡನ್‌ ಮಾರ್ಕ್‌ರಮ್‌ ಔಟಾಗದೆ 42
ಹೆನ್ರಿಚ್‌ ಕ್ಲಾಸೆನ್‌ ಔಟಾಗದೆ 80
ಇತರ 19
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 277
ವಿಕೆಟ್‌ ಪತನ: 1-45, 2-113, 3-161.
ಬೌಲಿಂಗ್‌: ಕ್ವೆನ ಮಫ‌ಕ 4-0-66-0
ಹಾರ್ದಿಕ್‌ ಪಾಂಡ್ಯ 4-0-45-1
ಜಸ್‌ಪ್ರೀತ್‌ ಬುಮ್ರಾ 4-0-36-0
ಗೆರಾಲ್ಡ್‌ ಕೋಟಿj 4-0-57-1
ಪೀಯೂಷ್‌ ಚಾವ್ಲಾ 2-0-34-1
ಶಮ್ಸ್‌ ಮುಲಾನಿ 2-0-33-0

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಅಭಿಷೇಕ್‌ ಬಿ ಕಮಿನ್ಸ್‌ 26
ಇಶಾನ್‌ ಕಿಶನ್‌ ಸಿ ಮಾರ್ಕ್‌ರಮ್‌ ಬಿ ಶಾಬಾದ್‌ 34
ನಮನ್‌ ಧಿರ್‌ ಸಿ ಕಮಿನ್ಸ್‌ ಬಿ ಉನಾದ್ಕತ್‌ 30
ತಿಲಕ್‌ ವರ್ಮ ಸಿ ಅಗರ್ವಾಲ್‌ ಬಿ ಕಮಿನ್ಸ್‌ 64
ಹಾರ್ದಿಕ್‌ ಪಾಂಡ್ಯ ಸಿ ಕ್ಲಾಸೆನ್‌ ಬಿ ಉನಾದ್ಕತ್‌ 24
ಟಿಮ್‌ ಡೇವಿಡ್‌ ಔಟಾಗದೆ 43
ರೊಮಾರಿಯೊ ಶೆಫ‌ರ್ಡ್‌ ಔಟಾಗದೆ 15
ಇತರ: 11
ಒಟ್ಟು (20 ಓವರ್‌ಗಳಲ್ಲಿ ಐದು ವಿಕೆಟಿಗೆ) 246
ವಿಕೆಟ್‌ ಪತನ: 1-56, 2-66, 3-150, 4-182, 5-224
ಬೌಲಿಂಗ್‌: ಭುವನೇಶ್ವರ ಕುಮಾರ್‌ 4-0-53-0
ಜೈದೇವ್‌ ಉನಾದ್ಕತ್‌ 4-0-547-2
ಶಾಬಾಜ್‌ ಅಹ್ಮದ್‌ 3-0-39-1
ಪ್ಯಾಟ್‌ ಕಮಿನ್ಸ್‌ 4-0-35-2
ಉಮ್ರಾನ್‌ ಮಲಿಕ್‌ 1-0-15-0
ಮಾಯಾಂಕ್‌ ಮಾರ್ಖಂಡೆ 4-0-52-0
ಪಂದ್ಯಶ್ರೇಷ್ಠ: ಅಭಿಷೇಕ್‌ ಶರ್ಮ

ಟಾಪ್ ನ್ಯೂಸ್

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.