Asian Games: ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್ ಇಲ್ಲ
Team Udayavani, Jun 15, 2023, 6:35 AM IST
ಭುವನೇಶ್ವರ: ಸ್ಟಾರ್ ಸ್ಪ್ರಿಂಟರ್ ಹಿಮಾ ದಾಸ್ ಮುಂಬರುವ ಏಷ್ಯಾಡ್ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ಭಾರತೀಯ ಆ್ಯತ್ಲೆಟಿಕ್ಸ್ ಕೋಚ್ ರಾಧಾ ಕೃಷ್ಣನ್ ನಾಯರ್ ಹೇಳಿದ್ದಾರೆ.
ಗುರುವಾರ ಆರಂಭವಾಗಲಿರುವ ಗ್ರ್ಯಾನ್ಪ್ರಿ-4 ಕೂಟದಲ್ಲಿ ಹಿಮಾ ದಾಸ್ ಸ್ಪರ್ಧಿಸಬೇಕಿತ್ತು. ಆದರೆ ಒಂದು ದಿನ ಮೊದಲು ಅವರು ಸ್ನಾಯು ಸೆಳೆತಕ್ಕೆ ಒಳಗಾದರು. ಜತೆಗೆ ಬೆನ್ನು ನೋವು ಕೂಡ ಕಾಡುತ್ತಿದೆ. ಚೇತರಿಕೆಗೆ ಬಹಳ ಸಮಯ ಬೇಕಾದ್ದರಿಂದ ಎಎಫ್ಐ ನಿಯ ಮಾವಳಿಯಂತೆ ಅವರಿಗೆ ಏಷ್ಯಾಡ್ನಲ್ಲಿ ಪಾಲ್ಗೊಳ್ಳಲು ಸಾಧ್ಯ ವಾಗದು ಎಂಬುದಾಗಿ ನಾಯರ್ ತಿಳಿಸಿದರು. ಗ್ರ್ಯಾನ್ಪ್ರಿ-4 ಕೂಟ ಏಷ್ಯಾಡ್ ಆಯ್ಕೆಗಿರುವ ಅಂತಿಮ ಅವಕಾಶವಾಗಿದೆ.
ಹಿಮಾ ದಾಸ್ 2018ರ ಜಕಾರ್ತಾ ಏಷ್ಯಾಡ್ನ 400 ಮೀ. ರೇಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ವನಿತೆಯರ 4ಗಿ400 ಮೀ. ರಿಲೇ ಹಾಗೂ 4ಗಿ400 ಮೀ. ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದ ತಂಡದ ಓಟಗಾರ್ತಿಯೂ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.