ಎಲ್ಲ ಬೇಡವೆಂದರೂ ಗ್ರೆಗ್ ಬೇಕೆಂದೆ,ಆಮೇಲೆ ಹೀಗಾಯ್ತು!
Team Udayavani, Feb 26, 2018, 6:50 AM IST
ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯವರ ಆತ್ಮಕಥೆ “ಎ ಸೆಂಚುರಿ ಈಸ್ ನಾಟ್ ಎನಫ್’ ಬಿಡುಗಡೆಗೆ ಸಿದ್ಧವಾಗಿದೆ. ಅದರಲ್ಲಿರುವ ಕೆಲ ಅಧ್ಯಾಯಗಳು ಏನಿರಬಹುದೆಂಬ ಓದುಗರು ಸಹಜವಾಗಿಯೇ ಊಹಿಸಬಹುದು. ಇದೇ ಹಿನ್ನೆಲೆಯಲ್ಲಿ ಇಂಗ್ಲಿಷ್ ವಾಹಿನಿಯೊಂದಕ್ಕೆ ಗಂಗೂಲಿ ನೀಡಿರುವ ಸಂದರ್ಶನದಲ್ಲಿ ಹಲವು ಕುತೂಹಲಕಾರಿ ಮಾಹಿತಿಗಳನ್ನು ಹೊರಹಾಕಿದ್ದಾರೆ.
ಅದರಲ್ಲೂ ಗ್ರೆಗ್ ಚಾಪೆಲ್‌ರನ್ನು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆ ಮಾಡಲು ಕ್ರಿಕೆಟ್ ದಂತಕಥೆ ಸುನೀಲ್ ಗಾವಸ್ಕರ್, ಅಂದಿನ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲಿ¾ಯಾ ವಿರೋಧಿಸಿದ್ದರು. ಅದಾದ ಮೇಲೂ ಹಠ ಹಿಡಿದು ಚಾಪೆಲ್‌ರನ್ನು ಕೋಚ್ ಹುದ್ದೆಗೆ ಗಂಗೂಲಿ ಶಿಫಾರಸು ಮಾಡಿದರು. ಅದರ ಪರಿಣಾಮ ಗಂಗೂಲಿ ಭಾರತ ತಂಡದ ನಾಯಕತ್ವ ಕಳೆದುಕೊಳ್ಳುವುದರ ಜೊತೆಗೆ, ತಂಡದಿಂದಲೂ ಹೊರಬಿದ್ದರು ಎನ್ನುವುದು ಈ ಸಂದರ್ಶನದಲ್ಲಿ ದಾಖಲಾದ ಮಹತ್ವದ ಸಂಗತಿ.
ಗಂಗೂಲಿ ಹೇಳಿದ್ದೇನು?: 2004ರಲ್ಲಿ ವಿದೇಶ ಪ್ರವಾಸ ಮುಗಿಸಿ ಬಂದ ಮೇಲೆ ನನಗೆ ಮುಂದಿನ ಕೋಚ್ ಯಾರಾಗಬೇಕೆಂಬ ಬಗ್ಗೆ ಯೋಚನೆ ಶುರುವಾಗಿತ್ತು (ನ್ಯೂಜಿಲೆಂಡ್‌ನ ಜಾನ್ ರೈಟ್ ಅವಧಿ ಮುಗಿದಿತ್ತು). ನನ್ನ ಆಯ್ಕೆಯನ್ನು ಅಂದಿನ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾಗೆ ತಿಳಿಸಿದೆ. ಈ ವಿಷಯ ತಿಳಿದ ಹಲವರು ನನಗೆ ಸಲಹೆ ಗ್ರೆಗ್ ಚಾಪೆಲ್ ಬೇಡವೆಂದರು. ಅದರಲ್ಲಿ ಸುನೀಲ್ ಗಾವಸ್ಕರ್ ಒಬ್ಬರು. “ಈ ಬಗ್ಗೆ ಯೋಚನೆ ಮಾಡು. ಗ್ರೆಗ್ ಕಟ್ಟಿಕೊಂಡು ತಂಡವನ್ನು ನಡೆಸುವುದು ಬಹಳ ಕಷ್ಟದ ಕೆಲಸ. ತರಬೇತುದಾರನಾಗಿ ಅವರ ಸಾಧನೆ ಚೆನ್ನಾಗಿಲ್ಲ’ ಎಂದು ಗಾವಸ್ಕರ್ ಹೇಳಿದ್ದರು.
ಅಷ್ಟು ಮಾತ್ರವಲ್ಲ ಸ್ವತಃ ದಾಲ್ಮಿಯಾ ಕರೆ ಮಾಡಿ, ತಕ್ಷಣವೇ ಬಂದು ಕಾಣುವಂತೆ ತಿಳಿಸಿದ್ದರು. ದಾಲಿ¾ಯಾರನ್ನು ಭೇಟಿ ಮಾಡಿದಾಗ ಅವರು, ಗ್ರೆಗ್ ಸೋದರ ಇಯಾನ್ ಚಾಪೆಲ್ ಕೂಡ ಭಾರತದ ತರಬೇತುದಾರ ಹುದ್ದೆಗೆ ಗ್ರೆಗ್ ಸೂಕ್ತ ಆಯ್ಕೆಯಲ್ಲ ಎಂದಿದ್ದಾರೆ. ಈಗೇನು ಮಾಡುತ್ತೀಯಾ ಎಂದು ಕೇಳಿದರು. ಇಷ್ಟೆಲ್ಲ ವಿರೋಧವನ್ನು ನಿರ್ಲಕ್ಷಿಸಿ ನಾನು ನನ್ನ ಮನಸ್ಸಿಗೆ ಬಂದಂತೆ ಮಾಡಿದೆ. ಮುಂದೆ ನಡೆದಿದ್ದು ಇತಿಹಾಸ. ಕೆಲವೊಂದು ನಮ್ಮ ಲೆಕ್ಕಾಚಾರಕ್ಕೆ ತಕ್ಕಂತೆ ನಡೆಯುತ್ತದೆ. ಇನ್ನು ಕೆಲವೊಂದು ನಡೆಯಲ್ಲ. ನಾನು ಆಸ್ಟ್ರೇಲಿಯಾವನ್ನು ಗೆದ್ದೆ, ಆದರೆ ಅಲ್ಲಿನ ಒಬ್ಬ ನಾಗರಿಕನನ್ನು ಗೆಲ್ಲಲಾಗಲಿಲ್ಲ.
ಕೆಕೆಆರ್‌ನಿಂದ ಗಂಗೂಲಿ ಹೊರಬಿದ್ದಿದ್ದೇಕೆ?
-88 ರನ್ ಗಳಿಸಿದ ಖುಷಿಯಲ್ಲಿ ಎದೆ ಗುದ್ದಿಕೊಂಡಿದ್ದೇ ಗಂಗೂಲಿ ಹೊರಬೀಳಲು ಕಾರಣವೇ?
2008ರಲ್ಲಿ ಐಪಿಎಲ್ ಆರಂಭವಾದಾಗ ಗಂಗೂಲಿ ಅದರ ಪ್ರಮುಖ ಭಾಗವಾಗಿದ್ದರು. ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದರು. ಆದರೆ ಇಲ್ಲೂ ಅವರ ಹಣೆ ಬರಹ ಚೆನ್ನಾಗಿರಲಿಲ್ಲ. ಐಪಿಎಲ್ 3ನೇ ಆವೃತ್ತಿ ಮುಗಿಯುವ ಹೊತ್ತಿಗೆ ಕೋಲ್ಕತಾ ಗಂಗೂಲಿಯನ್ನು ಸೇರಿಸಿ ಬಹುತೇಕ ಎಲ್ಲ ಆಟಗಾರರನ್ನು ತಂಡದಿಂದ ಕೈಬಿಟ್ಟಿತ್ತು. ತನ್ನನ್ನು ನಾಯಕತ್ವದಿಂದ ತೆಗೆದರೂ ಒಬ್ಬ ಆಟಗಾರನಾಗಿಯಂತೂ ಉಳಿಸಿಕೊಳ್ಳುತ್ತಾರೆನ್ನುವುದು ಅವರ ನಿರೀಕ್ಷೆಯಾಗಿತ್ತು. ಅದು ನಡೆಯಲಿಲ್ಲ. ಆ ಬಗ್ಗೆಯೂ ಗಂಗೂಲಿ ಹೇಳಿಕೊಂಡಿದ್ದಾರೆ.
“ಮೊದಲ ವರ್ಷ ನಾನು ನಾಯಕ, 2ನೇ ವರ್ಷ ಬರೀ ಒಬ್ಬ ಸದಸ್ಯ, 3ನೇ ವರ್ಷ ಮತ್ತೆ ನಾಯಕ! ಇಂತಹ ಬದಲಾವಣೆ ಹೇಗೆ ಸಾಧ್ಯ ಎನ್ನುವುದು ನನಗೆ ಅರ್ಥವಾಗುವುದಿಲ್ಲ. ಐಪಿಎಲ್ 3ನೇ ಆವೃತ್ತಿಯಲ್ಲಿ ನಾನು 493 ರನ್ ಗಳಿಸಿ ತಂಡದ ಪರವಾಗಿ ಗರಿಷ್ಠ ರನ್ ಗಳಿಕೆ ಮಾಡಿದ್ದೆ. ಅಷ್ಟು ಮಾತ್ರವಲ್ಲ. ಆ ಋತುವಿನ ಐಪಿಎಲ್‌ನ ಗರಿಷ್ಠ ರನ್ ಸಾಧಕರಲ್ಲಿ ನಾನು 4ನೇ ಸ್ಥಾನದಲ್ಲಿದ್ದೆ. ಆದ್ದರಿಂದ ಸಹಜವಾಗಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದೆ. 4ನೇ ಆವೃತ್ತಿಯ ಆರಂಭದಲ್ಲಿ ನಡೆದ ಹರಾಜಿನಲ್ಲಿ ಘಟಿಸಿದ್ದೇ ಬೇರೆ. ನನ್ನನ್ನು ತಂಡದಿಂದ ಹೊರ ಹಾಕಿ ಸಂಪೂರ್ಣ ಹೊಸ ತಂಡ ಆಯ್ಕೆ ಮಾಡಲಾಗಿತ್ತು. ಯಾರಾದರೂ ಶಾರುಖ್‌ಗೆ ನನ್ನ ಬಗ್ಗೆ ಚಾಡಿ ಹೇಳಿದ್ದಾರೆಯೇ ಎಂದು ಹಲವರು ಕೇಳಿದ್ದಾರೆ.
ಆದರೆ ನಡೆದಿದ್ದೇ ಬೇರೆ. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳಿರುವಾಗ ನಾನು ಟೀವಿ ನೋಡುವುದು, ಪತ್ರಿಕೆ ಓದುವುದು ಮಾಡಲ್ಲ. ಐಪಿಎಲ್ 3ನೇ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ಪಂದ್ಯ ಇದ್ದ ಮಧ್ಯಾಹ್ನ ನಾನು ಸುಮ್ಮನೆ ಟೀವಿ ಹಾಕಿದೆ. ಅದರಲ್ಲಿ ದೊಡ್ಡ ಅಕ್ಷರಗಳಲ್ಲಿ ಗಂಗೂಲಿ ನಿವೃತ್ತಿ ಹೊಂದುವುದು ಸೂಕ್ತ ಎಂದು ಬರುತ್ತಿತ್ತು. ಕೆಲವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಊಹಿಸಿದರು.
ನಾನು ಅದೇ ಸಿಟ್ಟಿನಲ್ಲಿದ್ದೆ. ಅವತ್ತು ಪಂದ್ಯ ನಡೆದಾಗ ನಾನು 88 ರನ್ ಗಳಿಸಿ ತಂಡದ ಜಯಕ್ಕೆ ಕಾರಣವಾಗಿದ್ದೆ. ಆಗ ಉದ್ವೇಗಗೊಂಡಿದ್ದ ನಾನು ಕೈಯನ್ನು ಎದೆಗೆ ಗುದ್ದಿಕೊಂಡಿದ್ದೆ. ಇದು ಪೂರ್ತಿಯಾಗಿ ದಪ್ಪಕ್ಷರದಲ್ಲಿ ಸುದ್ದಿ ಹಾಕಿದ್ದವನ ವಿರುದ್ಧವಾಗಿತ್ತು. ಅದು ತಂಡದ ಮಾಲಿಕ ಶಾರುಖ್ ಆಗಲೀ, ಇತರೆ ಸದಸ್ಯರ ವಿರುದ್ಧವಾಗಲೀ ಇರಲಿಲ್ಲ. ಇರಲಿ, ನನ್ನನ್ನು ತಂಡದಿಂದ ತೆಗೆದುಹಾಕಿದರೂ ಶಾರುಖ್ ಜೊತೆಗಿನ ನನ್ನ ಸ್ನೇಹಕ್ಕೇನು ಅಡ್ಡಿಯಾಗಿಲ್ಲ’ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.