ಪತ್ನಿ ಇರಿತಕ್ಕೆ ಹಾಕಿ ಪಟು ಬಲಿ
Team Udayavani, Aug 21, 2017, 6:40 AM IST
ಮುಂಬೈ: ಕರ್ನಾಟಕ ಮೂಲದ ಮಾಜಿ ಕಿರಿಯರ ವಿಭಾಗದ ಅಂ.ರಾ ಹಾಕಿ ಆಟಗಾರನನ್ನು ಚಾಕುವಿನಿಂದ ಪತ್ನಿಯೇ ಇರಿದು ಕೊಂದ ಘಟನೆ ಮುಂಬೈನ ಮಲಾಡ್ನಲ್ಲಿ ಶನಿವಾರ ನಡೆದಿದೆ. ಮಡಿಕೇರಿಯ ಅಪ್ಪಯ್ಯ ಚೇನಂಡ ದುರಂತ ಸಾವಿಗೀಡಾದವರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ಪತಿ- ಪತ್ನಿಯರ ನಡುವಿನ ಕೌಟುಂಬಿಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಪತ್ನಿ ಅಮೃತಾ 7 ಬಾರಿ ಚಾಕುವಿನಿಂದ ಅಪ್ಪಯ್ಯ ಅವರಿಗೆ ಇರಿದಿದ್ದಾರೆ. ಅಮೃತಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಪಶ್ಚಿಮ ಮಲಾಡ್ನ ಅಗರ್ವಾಲ್ ಟ್ರಿನಿಟಿ ಟವರ್ ಅಪಾರ್ಟ್ಮೆಂಟ್ನ 27ನೇ ಮಹಡಿಯಲ್ಲಿ ಅಪ್ಪಯ್ಯ ಹಾಗೂ ಅವರ ಪತ್ನಿ ಅಮೃತಾ ಹಲವು ವರ್ಷಗಳಿಂದ ವಾಸವಿದ್ದರು. ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಬ್ಬರ ನಡುವೆ ಕ್ಷುಲಕ ವಿಷಯಕ್ಕೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದಿದೆ. ಇವರಿಬ್ಬರ ಜಗಳ ನೋಡಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದಾರೆ.
ಇವರು ತಲುಪುವುದಕ್ಕೂ ಮೊದಲು ಅಮೃತಾ ಪತಿ ಅಪ್ಪಯ್ಯ ಅವರ ಹೊಟ್ಟೆ, ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಇದ್ದ ಅಪ್ಪಯ್ಯರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಪೊಲೀಸರು, ಸುಮಾರು 7ಕ್ಕೂ ಹೆಚ್ಚು ಬಾರಿ ಅಪ್ಪಯ್ಯಗೆ ಚಾಕುವಿನಿಂದ ಚುಚ್ಚಿದ್ದಾರೆ. ಇಬ್ಬರ ನಡುವಿನ ಜಗಳದ ವೇಳೆ ಅಮೃತಾಗೂ ಗಾಯವಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್ಇ
B Z Zameer ahmed khan ಹೇಳಿಕೆ ಹಿಂದೆ ಎಚ್ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.