Hockey ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಭಾರತದ ವನಿತೆಯರ ಸವಾಲು ಸುಲಭದ್ದಲ್ಲ
ಇಂದಿನಿಂದ ರಾಂಚಿಯಲ್ಲಿ ಪಂದ್ಯಾವಳಿ
Team Udayavani, Oct 27, 2023, 6:00 AM IST
ರಾಂಚಿ: ಏಷ್ಯನ್ ಗೇಮ್ಸ್ ನಲ್ಲಿ ಸಾಮರ್ಥ್ಯಕ್ಕೂ ಕೆಳ ಮಟ್ಟದ ಪ್ರದರ್ಶನ ನೀಡಿದ ಭಾರತದ ವನಿತಾ ಹಾಕಿ ತಂಡಕ್ಕೆ ಈಗ “ಏಷ್ಯನ್ ಚಾಂಪಿಯನ್ಸ್ ಟ್ರೋಫಿ’ ಸವಾಲು ಎದು ರಾಗಿದೆ. ಇದು ತವರಲ್ಲೇ ನಡೆಯುವ ಪಂದ್ಯಾವಳಿಯಾದ ಕಾರಣ ಒತ್ತಡ ತುಸು ಹೆಚ್ಚೇ ಎನ್ನಬಹುದು.
ಪಂದ್ಯಾವಳಿ ಶುಕ್ರವಾರದಿಂದ ನ. 5ರ ತನಕ ರಾಂಚಿಯಲ್ಲಿ ಸಾಗಲಿದೆ. ಭಾರತ ಮೊದಲ ಬಾರಿಗೆ ಈ ಪಂದ್ಯಾವಳಿಯ ಆತಿಥ್ಯ ವಹಿಸುತ್ತಿರುವುದು ವಿಶೇಷ. ಆತಿಥೇಯ ಭಾರತದೊಂದಿಗೆ ಏಷ್ಯಾ ಡ್‌ನಲ್ಲಿ ಪಾಲ್ಗೊಂಡ ಚೀನ, ಜಪಾನ್, ಮಲೇಷ್ಯಾ, ದಕ್ಷಿಣ ಕೊರಿಯಾ ಮತ್ತು ಥಾಯ್ಲೆಂಡ್ ತಂಡಗಳು ಇಲ್ಲಿ ಸ್ಪರ್ಧಿಸಲಿವೆ. ಇದು ರೌಂಡ್ ರಾಬಿನ್ ಲೀಗ್ ಮಾದರಿಯ ಪಂದ್ಯಾವಳಿ ಆಗಿದ್ದು, ಅಗ್ರ 4 ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿವೆ.
ಶುಕ್ರವಾರ ಸವಿತಾ ಪೂನಿಯಾ ತಂಡ ಥಾಯ್ಲೆಂಡ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಉಳಿದೆರಡು ಪಂದ್ಯಗಳಲ್ಲಿ ಜಪಾನ್-ಮಲೇಷ್ಯಾ, ಚೀನ-ದಕ್ಷಿಣ ಕೊರಿಯಾ ಎದುರಾಗಲಿವೆ.
ಹ್ಯಾಂಗ್‌ಝೂ ಏಷ್ಯಾಡ್ ಸೆಮಿಫೈನಲ್‌ನಲ್ಲಿ ಚೀನಕ್ಕೆ 0-4 ಗೋಲುಗಳಿಂದ ಸೋತ ಭಾರತ, ಬಳಿಕ ಜಪಾನ್‌ಗೆ 2-1 ಅಂತರದ ಸೋಲುಣಿಸಿ ಕಂಚಿನ ಪದಕವೇನೋ ಗೆದ್ದಿತು. ಆದರೆ ಭಾರತದ ವನಿತೆಯರ ಮೇಲೆ ಚಿನ್ನದ ನಿರೀಕ್ಷೆ ಇರಿಸಲಾಗಿತ್ತು. ಇದರಿಂದ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಸಿಗುತ್ತಿತ್ತು.
ಸುಶೀಲಾ ಚಾನು ಗೈರು
ಏಷ್ಯಾಡ್‌ನಲ್ಲಿ ಆಡಿದ್ದ ಅನುಭವಿ ಮಿಡ್‌ಫಿàಲ್ಡರ್ ಸುಶೀಲಾ ಚಾನು ಗಾಯಾಳದ ಕಾರಣ ಈ ಕೂಟದಿಂದ ಹಿಂದೆ ಸರಿದಿದ್ದಾರೆ. ಇವರ ಸ್ಥಾನಕ್ಕೆ ಬಲ್ಜೀತ್ ಕೌರ್ ಬಂದಿದ್ದಾರೆ.
ಭಾರತ 2016ರ ಚಾಂಪಿಯನ್
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಚೀನ, ಹಾಲಿ ಚಾಂಪಿಯನ್ ಜಪಾನ್ ಈ ಕೂಟದ ಬಲಿಷ್ಠ ತಂಡಗಳಾಗಿವೆ. ಥಾಯ್ಲೆಂಡ್ ಬಳಿಕ ಭಾರತ ತಂಡ ಮಲೇಷ್ಯಾ (ಅ. 28), ಚೀನ (ಅ. 30), ಜಪಾನ್ (ಅ. 31) ಮತ್ತು ಕೊರಿಯಾ (ನ. 2) ವಿರುದ್ಧ ಆಡಲಿದೆ. ಭಾರತ 2016ರಲ್ಲಿ ಏಷ್ಯನ್ ಚಾಂಪಿಯನ್ ಆಗಿತ್ತು. 2013 ಮತ್ತು 2018 ರಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು. 2010ರಲ್ಲಿ 3ನೇ ಸ್ಥಾನಕ್ಕೆ ಇಳಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.