ಗೋಲ್ಕೀಪರ್ ಆಕಾಶ್ ಚಿಕ್ತೆಗೆ 2 ವರ್ಷ ನಿಷೇಧ
Team Udayavani, Oct 20, 2018, 8:44 AM IST
ಹೊಸದಿಲ್ಲಿ: ನಿಷೇಧಿತ ದ್ರವ್ಯ ಸೇವಿಸಿದ ಕಾರಣಕ್ಕಾಗಿ ಹಾಕಿ ಗೋಲ್ಕೀಪರ್ ಆಕಾಶ್ ಚಿಕ್ತೆ ಅವರಿಗೆ ರಾಷ್ಟ್ರೀಯ ದ್ರವ್ಯ ವಿರೋಧಿ ದಳ (ನಾಡಾ) ಎರಡು ವರ್ಷ ನಿಷೇಧ ಹೇರಿದೆ. ಚಿಕ್ತೆ ಅವರನ್ನು ಕಳೆದ ಮಾರ್ಚ್ ನಿಂದ ನಾಡಾ ಅಮಾನತು ಮಾಡಿದೆ ಮತ್ತು ಅಕ್ಟೋಬರ್ 8ರಂದು ದ್ರವ್ಯ ವಿರೋಧಿ ಶಿಸ್ತು ಸಮಿತಿ ಅಂತಿಮ ವಿಚಾರಣೆ ನಡೆಸಿದ ಬಳಿಕ ಎರಡು ವರ್ಷಗಳ ನಿಷೇಧ ಹೇರಿದೆ. ಫೆ. 27ರಂದು ಬೆಂಗಳೂರಿನಲ್ಲಿ ನಡೆದ ಸೀನಿಯರ ಹಾಕಿ ತಂಡದ ಶಿಬಿರದ ವೇಳೆ ನಡೆದ ಪರೀಕ್ಷೆ ವೇಳೆ ಚಿಕ್ತೆ ಅವರು ನಿಷೇಧಿತ ಸ್ಟೀರಾಯ್ಡ (ನೊರಾಂಡ್ರೊಸ್ಟೆರೋನ್) ಸೇವಿಸಿ ರುವುದು ಪತ್ತೆಯಾಗಿತ್ತು. ಚಿಕ್ತೆ ಅವರಲ್ಲದೇ ಇತರ ಕ್ರೀಡೆಗಳ ಐವರು ಆಟಗಾರರಿಗೆ ದ್ರವ್ಯ ಉಲ್ಲಂ ಸಿದ ಕಾರಣಕ್ಕಾಗಿ ನಾಲ್ಕು ವರ್ಷಗಳ ಅಮಾನತು ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.