Junior Women’s World Cup: ಭಾರತಕ್ಕೆ ಕೆನಡಾ ಮೊದಲ ಎದುರಾಳಿ
ನ. 29-ಡಿ. 10: ಸ್ಯಾಂಟಿಯಾಗೋದಲ್ಲಿ ಪಂದ್ಯಾವಳಿ
Team Udayavani, Jun 25, 2023, 7:52 AM IST
ಹೊಸದಿಲ್ಲಿ: ಚಿಲಿಯ ರಾಜಧಾನಿ ಸ್ಯಾಂಟಿಯಾ ಗೋದಲ್ಲಿ ವರ್ಷಾಂತ್ಯ ನಡೆಯಲಿರುವ ಜೂನಿಯರ್ ವನಿತಾ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ. ಶುಕ್ರವಾರ ಈ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೊಂಡಿತು.
ಭಾರತ “ಸಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿರುವ ಇನ್ನೆರಡು ತಂಡಗಳೆಂದರೆ ಬೆಲ್ಜಿಯಂ ಮತ್ತು ಜರ್ಮನಿ. ಭಾರತ-ಕೆನಡಾ ನ. 29ರಂದು ಮುಖಾಮುಖೀ ಆಗಲಿವೆ. ಜರ್ಮನಿ ಮತ್ತು ಬೆಲ್ಜಿಯಂ ವಿರುದ್ಧ ಡಿ. 1 ಮತ್ತು 2ರಂದು ಆಡಲಿದೆ.
ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಜೂನಿಯರ್ ಏಷ್ಯಾ ಕಪ್ ಗೆದ್ದು ವಿಶ್ವಕಪ್‌ಗೆ ಅರ್ಹತೆ ಸಂಪಾದಿಸಿದ ಭಾರತ ಹೊಸ ಹುರುಪಿನಲ್ಲಿದೆ. ಹೆಚ್ಚಿನ ಆತ್ಮವಿಶ್ವಾಸ ಹೊಂದಿದೆ. ಇದು ಮೊದಲ ಸಲ ವಿಶ್ವಕಪ್ ಎತ್ತಲು ಸ್ಫೂರ್ತಿಯಾಗಬೇಕಿದೆ.
ಭಾರತ ಈವರೆಗೆ ಯಾವುದೇ ವಿಶ್ವಕಪ್ ಪದಕ ಗೆದ್ದಿಲ್ಲ. ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಸಾಧ್ಯತೆ ಇತ್ತಾದರೂ ಇಂಗ್ಲೆಂಡ್ ವಿರುದ್ಧ ಶೂಟೌಟ್‌ನಲ್ಲಿ ಎಡವಿತು. 2-2 ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದ ಭಾರತ, ಶೂಟೌಟ್‌ನಲ್ಲಿ 0-3ರಿಂದ ಮುಗ್ಗರಿಸಿತ್ತು.
“ನಮ್ಮ ವಿಭಾಗ ಅತ್ಯಂತ ಬಲಿಷ್ಠ ತಂಡಗಳನ್ನು ಒಳಗೊಂಡಿದೆ ಎಂಬ ಎಚ್ಚರಿಕೆ ಇದೆ. ಆದರೆ ವಿಶ್ವ ಮಟ್ಟದಲ್ಲಿ ಮಿಂಚಲು ನಮಗೆ ಇದೊಂದು ಉತ್ತಮ ಅವಕಾಶ. ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಹೊಂದಿದ್ದೇವೆ. ಪ್ರತೀ ಪಂದ್ಯದಲ್ಲೂ ಇದನ್ನು ಪ್ರದರ್ಶಿಸುವುದೇ ನಮ್ಮ ಯೋಜನೆ’ ಎಂಬುದಾಗಿ ನಾಯಕಿ ಪ್ರೀತಿ ಹೇಳಿದರು.
ಈ ಸಂದರ್ಭದಲ್ಲಿ ಮಾತಾಡಿದ ವನಿತಾ ತಂಡದ ಪ್ರಧಾನ ಕೋಚ್ ಜಾನೆಕ್ ಸ್ಕೋಪ್‌ಮನ್, “ಏಷ್ಯಾ ಕಪ್ ಗೆದ್ದ ಬಳಿಕ ತಂಡದ ಆತ್ಮವಿಶ್ವಾಸ ಬಹಳಷ್ಟು ಹೆಚ್ಚಿದೆ. ಆದರೆ ವಿಶ್ವಕಪ್ ಪಂದ್ಯಾವಳಿ ಹೆಚ್ಚು ಸವಾಲುಗಳಿಂದ ಕೂಡಿದೆ. ಜಗತ್ತಿನ ಬಲಿಷ್ಠ ತಂಡಗಳೆಲ್ಲ ಇಲ್ಲಿ ಸೆಣಸುತ್ತವೆ. ಪ್ರತಿಯೊಂದು ಪಂದ್ಯವೂ ಕಠಿನವಾಗಿರುತ್ತದೆ. ನಮ್ಮ ಕೌಶಲ, ಸಾಂ ಕ ಆಟಕ್ಕೊಂದು ಸವಾಲು’ ಎಂದರು.
ಜಪಾನ್‌ನಲ್ಲಿ ಸಾಧಿಸಿದ ಚಾರಿತ್ರಿಕ ಗೆಲುವಿನ ಹೊರತಾ ಗಿಯೂ ನಮ್ಮ ತಂಡ ಕೆಲವು ವಿಭಾಗಗಳ ಕೊರತೆಯನ್ನು ಹೋಗಲಾಡಿಸಿಕೊಳ್ಳಬೇಕಿದೆ ಎಂಬುದು ಜೂನಿಯರ್ ತಂಡದ ಕೋಚ್ ಹರ್ವಿಂದರ್ ಸಿಂಗ್ ಅಭಿಪ್ರಾಯ.
ರ್‍ಯಾಂಕಿಂಗ್ ಪ್ರಕಟ
ಪಂದ್ಯಾವಳಿಯ ಕೌತುಕ ಹೆಚ್ಚಿಸುವ ಸಲುವಾಗಿ ಎಫ್ಐಎಚ್ ಇದೇ ಮೊದಲ ಸಲ ಜೂನಿಯರ್ ವನಿತಾ ವಿಶ್ವ ರ್‍ಯಾಂಕಿಂಗ್ ಯಾದಿಯನ್ನೂ ಪ್ರಕಟಿಸಿದೆ. ಇದರಂತೆ ಭಾರತ 6ನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್‌ಗೆ ಆಗ್ರಸ್ಥಾನ ಲಭಿಸಿದೆ. ಆರ್ಜೆಂಟೀನಾ, ಜರ್ಮನಿ, ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ 2ರಿಂದ 5ನೇ ರ್‍ಯಾಂಕಿಂಗ್ ಪಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.