ಹಾಕಿ: ಪಾಕಿಸ್ಥಾನಕ್ಕೆ ಒಲಿಂಪಿಕ್ಸ್ ಟಿಕೆಟ್ ಇಲ್ಲ
Team Udayavani, Oct 29, 2019, 5:29 AM IST
ಆ್ಯಮ್‌ಸ್ಟರ್ಡಮ್ (ನೆದರ್ಲೆಂಡ್ಸ್): ಮೂರು ಬಾರಿಯ ಒಲಿಂಪಿಕ್ ಹಾಕಿ ಚಾಂಪಿಯನ್ ಪಾಕಿಸ್ಥಾನ ಈ ಬಾರಿ ವಿಶ್ವದ ಮಹೋನ್ನತ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ವಿಫಲವಾಗಿದೆ. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಗುಳಿಯಲಿದೆ.
ಆತಿಥೇಯ ನೆದರ್ಲೆಂಡ್ಸ್ ಎದುರಿನ ಸೋಮವಾರದ ಅರ್ಹತಾ ಸುತ್ತಿನ ಪಂದ್ಯದಲ್ಲಿ 6-1 ಅಂತರದ ಆಘಾತಕಾರಿ ಸೋಲನುಭವಿಸುವ ಮೂಲಕ ಪಾಕಿಸ್ಥಾನ ಒಲಿಂಪಿಕ್ಸ್ ರೇಸ್‌ನಿಂದ ಹೊರಬಿತ್ತು. ಆತಿಥೇಯರ ನಾಲ್ಕೂ ಗೋಲುಗಳು ಮೊದಲೆರಡು ಕ್ವಾರ್ಟರ್‌ಗಳಲ್ಲೇ ದಾಖಲಾಗಿದ್ದವು. ಪಾಕಿಸ್ಥಾನದ ಏಕೈಕ ಗೋಲನ್ನು 53ನೇ ನಿಮಿಷದಲ್ಲಿ ರಿಜ್ವಾನ್ ಅಲಿ ಹೊಡೆದರು.
ಶನಿವಾರದ ಮೊದಲ ಪಂದ್ಯ 4-4ರಿಂದ ಡ್ರಾ ಆಗಿತ್ತು. ರವಿವಾರದ ಮುಖಾಮುಖೀಯಲ್ಲಿ ಡಚ್ಚರು 10-5ರಿಂದ ಪಾಕಿಗೆ ಆಘಾತವಿಕ್ಕಿದರು.
ಪಾಕಿಸ್ಥಾನ 1960, 1968 ಮತ್ತು 1984ರಲ್ಲಿ ಒಲಿಂಪಿಕ್ ಚಾಂಪಿಯನ್ ಆಗಿತ್ತು. 1992ರಲ್ಲಿ ಕಂಚು ಗೆದ್ದ ಬಳಿಕ ಪಾಕಿಗೆ ಯಾವುದೇ ಒಲಿಂಪಿಕ್ ಪದಕ ಲಭಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.