ವಿಶ್ವ ಹಾಕಿ ಲೀಗ್ ಫೈನಲ್: ಭಾರತ-ಆಸ್ಟ್ರೇಲಿಯಾ ಪಂದ್ಯ ಡ್ರಾ
Team Udayavani, Dec 2, 2017, 6:00 AM IST
ಭುವನೇಶ್ವರ (ಒಡಿಶಾ): ವಿಶ್ವ ಹಾಕಿ ಲೀಗ್ ಫೈನಲ್ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ಬಲಿಷ್ಠ ಆಸ್ಟ್ರೇಲಿಯಾ
ವಿರುದಟಛಿ 1-1 ಗೋಲುಗಳಿಂದ ಡ್ರಾ ಸಾಧಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಹಣಾಹಣಿ ನಡೆಸಿದವು. ಭಾರತ ಆರಂಭದಲ್ಲೇ ಗೋಲು ದಾಖಲಿಸಿ ಗರ್ಜಿಸಿತು. ತಂಡಕ್ಕೆ 20ನೇ ನಿಮಿಷದಲ್ಲಿ ಮನ್ದೀಪ್ ಗೋಲು ಬಾರಿಸುವ ಮೂಲಕ ಭಾರತ 1-1 ಮುನ್ನಡೆ ಸಾಧಿಸಿತು. ಆದರೆ ಆಸ್ಟ್ರೇಲಿಯಾ ವೇಗವಾಗಿ ಆಡುವ ಮೂಲಕ ಭಾರತಕ್ಕೆ ಪ್ರತ್ಯುತ್ತರ ನೀಡಿತು. 21ನೇ ನಿಮಿಷದಲ್ಲಿ ಜೆರ್ಮಿ ಪೆನಾಲ್ಟಿ ಅವಕಾಶದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೋಲು ತಂದುಕೊಟ್ಟರು. ಹೀಗಾಗಿ ಎರಡು ತಂಡಗಳ ನಡುವಿನ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು. ಸರ್ದಾರ್ ಸಿಂಗ್ ಅನುಪಸ್ಥಿತಿಯಲ್ಲಿ ಭಾರತಕ್ಕೆ ಎದುರಾಳಿಯಿಂದ ದೊಡ್ಡ ಸವಾಲು ಎದುರಾಯಿತು. ಯುವಕರ ತಂಡ ಅನುಭವದ ಕೊರತೆಯನ್ನೂ ಅನುಭವಿಸಿತು.
ಎರಡು ತಂಡಗಳು ಮತ್ತೆ ಹೋರಾಟ ಮುಂದುವರಿಸಿದವು. ಭಾರತವು ಗೋಲುಗಳಿಸುವ ಕೆಲವು ಅವಕಾಶ
ಕೈತಪ್ಪಿಸಿಕೊಂಡಿತು. ಆಸ್ಟ್ರೇಲಿಯಾ ಆಟಗಾರರು ಭಾರತೀಯರ ಪ್ರಯತ್ನಕ್ಕೆ ತಣ್ಣೀರು ಎರಚಿದರು.
ಆದರೆ ಭಾರತವೂ ಆಸೀಸ್ಗೆ ಇದೇ ರೀತಿಯಲ್ಲಿ ತಿರುಗೇಟು ನೀಡಿತು. ಆಸೀಸ್ನ ಹಲವು ಪ್ರಯತ್ನವನ್ನು ಭಗ್ನಗೊಳಿಸಿತು. ಕೊನೆಯವರೆಗೂ ಎರಡು ತಂಡಗಳ ನಡುವೆ ಇದೇ ರೀತಿಯಲ್ಲಿ ರೋಚಕ ಹೋರಾಟ ನಡೆಯಿತು. ಆದರೆ ಯಾರಿಗೂ ಗೋಲು ಒಲಿಯಲಿಲ್ಲ. ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿತು. ಶನಿವಾರ ಗುಂಪಿನ 2ನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಡಿಸೆಂಬರ್ 4ರಂದು ಭಾರತ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಬಳಿಕ ಕ್ವಾರ್ಟರ್ಫೈನಲ್ ಪಂದ್ಯಗಳು ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.