ಭಾರತೀಯ ಒಲಿಂಪಿಕ್ ಸಂಸ್ಥೆಗೂ ನಿಷೇಧ ಭೀತಿ!
Team Udayavani, Jul 22, 2022, 11:26 PM IST
ಹೊಸದಿಲ್ಲಿ: ಭಾರತ ಫುಟ್ ಬಾಲ್ ಸಂಸ್ಥೆ ಮತ್ತು ಹಾಕಿ ಇಂಡಿಯಾ ತಮ್ಮ ಅಂತಾರಾಷ್ಟ್ರೀಯ ಮಂಡಳಿಗಳಿಂದ ನಿಷೇಧದ ಭೀತಿ ಎದುರಿಸುತ್ತಿವೆ. ಈ ನಡುವೆ ಭಾರತ ಒಲಿಂಪಿಕ್ ಸಂಸ್ಥೆಯೂ (ಐಒಎ) ಇಂಥದೇ ಭೀತಿ ಗೊಳ ಗಾಗಿದೆ. ಮುಂದಿನ ವಾರಗಳಲ್ಲಿ ತ್ತೈವಾರ್ಷಿಕ ಚುನಾವಣೆ ನಡೆಸದೇ ಹೋದರೆ, ಐಒಎಯನ್ನು ಅಮಾನತು ಗೊಳಿಸಬೇಕಾಗುತ್ತದೆ ಎಂದು ಐಒಸಿ ಹೇಳಿದೆ.
ಇತ್ತೀಚೆಗೆ ಐಒಎ ಅಧ್ಯಕ್ಷ ಸ್ಥಾನಕ್ಕೆ ನರೀಂದರ್ ಬಾತ್ರಾ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಅವರ ವಿರುದ್ಧ ಹಣ ದುರುಪಯೋಗದ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆ ಕೂಡ ಆರಂಭಿಸಿದೆ. ಮಾಜಿ ಹಾಕಿ ಆಟಗಾರ ಅಸ್ಲಾಮ್ ಶೇರ್ ಖಾನ್, ನರೀಂದರ್ ಬಾತ್ರಾ ಅಕ್ರಮವಾಗಿ ಐಒಸಿ ಅಧ್ಯಕ್ಷರಾಗಿದ್ದಾರೆಂದು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ನ್ಯಾಯಪೀಠ ಬಾತ್ರಾಗೆ ಹೊರಹೋಗುವಂತೆ ಆದೇಶಿಸಿತ್ತು.
ಎಐಎಫ್ಎಫ್ ನಲ್ಲಿ ಚುನಾವಣೆ ನಡೆಸದೆ ದೀರ್ಘಕಾಲದಿಂದ ಅಧ್ಯಕ್ಷರಾಗಿ ಮುಂದುವರಿದ ಪ್ರ ಫುಲ್ ಪಟೇಲ್ ಅವರನ್ನು ಉಚ್ಚಾಟಿಸಲಾಗಿದೆ. ನರೀಂದರ್ ಬಾತ್ರಾಗೆ ನಿಯಮಬಾಹಿರವಾಗಿ ಆಜೀವ ಸದಸ್ಯ ಸ್ಥಾನ ನೀಡಿರುವ ಕಾರಣ ಹಾಕಿ ಇಂಡಿಯಾ ಕೂಡ ಇಕ್ಕಟ್ಟಿಗೆ ಸಿಲುಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.