ರೋಹಿತ್, ಧವನ್ ಯಂತ್ರಿಸಲು ಯೋಜನೆ: ಪೆರೆರ
Team Udayavani, Dec 17, 2017, 6:05 AM IST
ವಿಶಾಖಪಟ್ಟಣ: ಪಂದ್ಯಾವನ್ನು ಯಾವ ಕ್ಷಣದಲ್ಲಾದರೂ ತಿರುಗಿಸಬಲ್ಲ ಸಾಮಾರ್ಥ್ಯವಿರುವ ಭಾತರದ ಬ್ಯಾಟ್ಸ್ಮನ್ಗಳಾದ ನಾಯಕ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಅವರನ್ನು ಕಟ್ಟಿಹಾಲು ನಮ್ಮಲ್ಲಿ ತಂತ್ರಗಳಿವೆ ಎಂದು ಶ್ರೀಲಂಕಾ ತಂಡದ ನಾಯಕ ತಿಸರ ಪೆರೆರ ತಿಳಿಸಿದ್ದಾರೆ.
ಭಾತರ-ಶ್ರೀಲಂಕಾ ನಡುವಣ ಮೂರನೇ ಏಕದಿನ ಪಂದ್ಯದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು, ಶ್ರೀಲಂಕಾ ಮತ್ತು ವಿಶಾಖಪಟ್ಟಣದ ಹವಾಗುಣ ಸಾಧಾರಣ ಒಂದೇರೀಯಿದ್ದು, ನಡೆಯಲಿರುವ ಪಂದ್ಯ ವಿಶೇಷದ್ದೆನಿಸಲಿದೆ. ರೋಹಿತ್ ಶರ್ಮ ಮತ್ತು ಶಿಖರ್ ಧವನ್ರನ್ನು ನಿಯಂತ್ರಿಸಲು ತಂತ್ರಗಳೂ ನಮ್ಮೊಂದಿಗಿದ್ದು, ಬೌಲರ್ಗಳು ಆ ತಂತ್ರಗಳನ್ನು ಹೇಗೆ ಕಾರ್ಯಗತಗೊಳಿಸಲಿದ್ದಾರೆ ಎಂಬುದರ ಮೇಲೆ ಅದು ನಿಂತಿದೆ ಎಂದಿದ್ದಾರೆ.
ಸರಣಿಯ ಅಂತಿಮ ಹಣಾಹಣಿಗೆ ಎಲ್ಲ ರೀತಿಯಲ್ಲಿ ತಂಡ ತಯಾರಾಗಿದೆ. ಮೊಹಾಲಿಯಲ್ಲಿನ ಸೋಲು ಮರುಕಳಿಸಲು ಬಿಡುವುದಿಲ್ಲ. ಪಂದ್ಯ ಗೆಲ್ಲುವ ನಿಟ್ಟಿನಲ್ಲಿ ನಾವು ಮಾನಸಿಕವಾಗಿಯೂ ತಯಾರಾಗಿದ್ದೇವೆ. ಧರ್ಮಶಾಲಾ ಪಂದ್ಯದಂತೆ ನಾವು ಬ್ಯಾಟ್ಸ್ಮನ್ಗಳನ್ನು ಶೀಘ್ರ ಪೆವಿಲಿಯನ್ಗಟ್ಟುವ ತಂತ್ರದ ಮೂಲಕ ಭಾರತ ಆಟಗಾರರನ್ನು ಕಟ್ಟಿಹಾಕಲಿದ್ದೇವೆ ಎಂದು ತಿಳಿಸಿದ್ದಾರೆ.
ಸರಣಿಯ ಅಂತಿಮ ಪಂದ್ಯವೆಂಬ ಒತ್ತಡ ಇದ್ದೇ ಇದೆ. ಆದರೆ ನಾವು ಈ ಪಂದ್ಯವನ್ನು ಮತ್ತೂಂದು ಪಂದ್ಯವಾಗಿ ಆಡುತ್ತಿದ್ದೇವೆ. ಪಂದ್ಯ ಸೋಲಲಿ ಗೆಲ್ಲಲಿ; ಒಟ್ಟಿನಲ್ಲಿ ನಾವು ಇನ್ನೊಂದು ಪಂದ್ಯ ಆಡಲು ಬಯಸಿದ್ದೇವೆ. ಹಿಂದಿನ ಪಂದ್ಯಗಳಲ್ಲಿನ ಪಿಚ್ಗಳಂತೆ ವಿಶಾಖಪಟ್ಟಣದ ಪಿಚ್ ಕೂಡ ಬ್ಯಾಟ್ಸ್ಮನ್ಗಳ ಪರವಾಗುವ ಮೂಲಕ ಪಂದ್ಯ ತಿರುವು ಪಡೆಯಲಿದೆ ಎಂದವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.