ಆತಿಥೇಯರೆದುರು ಎಡವಿದ ಬುಲ್ಸ್
Team Udayavani, Sep 13, 2019, 5:03 AM IST
ಕೋಲ್ಕತಾ: ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವನ್ನು 40-42 ಅಂಕಗಳಿಂದ ಮಣಿಸಿದ ಬೆಂಗಾಲ್ ವಾರಿಯರ್ ತವರಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ ಕೋಲ್ಕತಾ ಚರಣಕ್ಕೆ ಮಂಗಳ ಹಾಡಿತು.
ಪ್ರೊ ಕಬಡ್ಡಿ 7ನೇ ಆವೃತ್ತಿಯ ಗುರುವಾರದ 2ನೇ ಪಂದ್ಯದಲ್ಲಿ ಗೆಲುವು ಅತ್ತಿಂದಿತ್ತ ತೂಗಾಡುತ್ತಲೇ ಇತ್ತು. ಕೊನೆಯಲ್ಲಿ ಅದೃಷ್ಟ ಬೆಂಗಾಲ್ ಕೈ ಹಿಡಿಯಿತು. ಬುಲ್ಸ್ ಪರ ಪವನ್ ಸೆಹ್ರಾವತ್ (19 ರೈಡಿಂಗ್ ಅಂಕ) ಏಕಾಂಗಿ ಯಾಗಿ ಹೋರಾಡಿದರು. ಬೆಂಗಾಲ್ ಜಯದಲ್ಲಿ ಮಣಿಂದರ್ ಸಿಂಗ್ (17 ರೈಡಿಂಗ್ ಅಂಕ) ಮಿಂಚಿದರು.
ಬೆಂಗಾಲ್ ಗರ್ಜನೆ
ಎರಡನೇ ಅವಧಿ ಆರಂಭವಾಗಿ 5 ನಿಮಿಷದಲ್ಲೇ ಆತಿಥೇಯರನ್ನು ಬೆಂಗಳೂರು ಬುಲ್ಸ್ ಆಲೌಟ್ ಮಾಡಿ ಮೇಲುಗೈಯನ್ನು 27-21ಕ್ಕೆ ಹೆಚ್ಚಿಸಿ ಕೊಂಡಿತು. ಈ ಅವಧಿಯಲ್ಲಿ ಪವನ್ ಆಕ್ರಮಣಕಾರಿಯಾಗಿ ಆಡಿದರು. ಅನಂತರ ಬೆಂಗಾಲ್ ಮಿಂಚಿನ ಆಟಕ್ಕೆ ಇಳಿಯಿತು. ಪಂದ್ಯದ ಕೊನೆಯ 5 ನಿಮಿಷದ ಆಟ ಬಾಕಿ ಇರುವಾಗ ಬೆಂಗಾಲ್ ಎದುರಾಳಿಯನ್ನು ಆಲೌಟ್ ಮಾಡಿತು. ಅಂಕ 33-33 ಸಮಬಲಕ್ಕೆ ಬಂತು.
ಮೊದಲ ಅವಧಿಯಲ್ಲಿ ಬುಲ್ಸ್ ನ ತಾರಾ ಆಟಗಾರರಾದ ಪವನ್ ಹಾಗೂ ನಾಯಕ ರೋಹಿತ್ ಕುಮಾರ್ ವೈಫಲ್ಯ ಅನುಭವಿಸಿದರು. ಇದರಿಂದ ಬೆಂಗಳೂರು ವಿರಾಮದ ವೇಳೆ 16-15ರಿಂದ ಹಿನ್ನಡೆ ಅನುಭವಿಸಿತು.
ಪಾಟ್ನಾ ಪೈರೇಟ್ಸ್‌ಗೆ ರೋಚಕ ಗೆಲುವು
ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಪರ್‌ದೀಪ್ ನರ್ವಾಲ್ (14 ರೈಡಿಂಗ್ ಅಂಕ) ಹಾಗೂ ಜಾಂಗ್ ಕುನ್ ಲೀ (8 ರೈಡಿಂಗ್ ಅಂಕ) ನೆರವಿನಿಂದ ಜೈಪುರ ವಿರುದ್ಧದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 36-33 ಅಂಕಗಳ ರೋಚಕ ಗೆಲುವು ಸಾಧಿಸಿತು. ಇದು ಜೈಪುರಕ್ಕೆ ಎದುರಾದ ಸತತ 2ನೇ ಸೋಲು. ಪಂದ್ಯದ ಕೊನೆಯ ರೈಡಿಂಗ್‌ನಲ್ಲಿ ಕುನ್ ಲೀ ಸಮಯ ವ್ಯರ್ಥ ಮಾಡುವ ಮೂಲಕ ಪಾಟ್ನಾ ಜಯ ಗಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.