AsianGames: ಒಂದು ಮೊಬೈಲ್‌ಗಾಗಿ ಸಾವಿರಾರು ಕಸದಬ್ಯಾಗ್ ಹುಡುಕಾಡಿದ ಸಿಬ್ಬಂದಿ: ಆಗಿದ್ದೇನು?
Team Udayavani, Sep 26, 2023, 5:23 PM IST
ಹ್ಯಾಂಗ್ ಝೂ: ಇಲ್ಲಿ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟ ನಡೆಯುತ್ತಿದೆ. ಈ ನಡುವೆ ಎಲ್ಲರೂ ಮೆಚ್ಚುವ ಕೆಲಸವೊಂದನ್ನು ಅಲ್ಲಿನ ಸ್ವಯಂಸೇವಕರು ಮಾಡಿದ್ದಾರೆ.
ಹಾಂಗ್ ಕಾಂಗ್ ದೇಶದ 12 ವರ್ಷದ ಚೆಸ್ ಆಟಗಾರ್ತಿ ಆಗಿರುವ ಲಿಯು ಟಿಯಾನ್-ಯಿ ಅವರು ತನ್ನ ಮೊಬೈಲ್ ಕಳೆದುಕೊಂಡಿದ್ದಾರೆ. ಅವರು ಬೇರೊಂದು ಜಾಗದಲ್ಲಿ ಮೊಬೈಲ್ ಇಟ್ಟಿದ್ದರು. ಆದರೆ ಅದು ಅಲ್ಲಿ ಇರದೆ ಇದ್ದಾಗ, ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
10,000-ಆಸನವುಳ್ಳ ಕ್ರೀಡಾಂಗಣದಲ್ಲಿ ಲಿಯು ಟಿಯಾನ್-ಯಿ ಮೊಬೈಲ್ ಕಳೆದುಕೊಂಡಿದ್ದಾರೆ. ಯಾರಾದರೂ ಆದರೆ ಅದನ್ನು ಹುಡಕಲು ಅಸಾಧ್ಯವೆಂದು ಹುಡಕದೆ ಬಿಡುತ್ತಿದ್ದರು ಏನೋ ಆದರೆ ಏಷ್ಯನ್ ಗೇಮ್ಸ್ ಸ್ವಯಂ ಸೇವಕರು ಅಂದರೆ ಅಲ್ಲಿನ ಸಿಬ್ಬಂದಿಗಳು ಕಳೆದು ಹೋದ ಮೊಬೈಲ್ ನ್ನು ಯಾವ ಹರಸಾಹಸಕ್ಕೂ ಕಮ್ಮಿಯಿಲ್ಲದ ಹಾಗೆ ಪತ್ತೆ ಮಾಡಿದ್ದಾರೆ.
523,000 ಚದರ ಮೀಟರ್ ಕ್ರೀಡಾಂಗಣದಲ್ಲಿ ಫೋನ್ ಮೊಬೈಲ್ ಹುಡುಕಲು ಸ್ವಯಂ ಸೇವಕರು ಶುರು ಮಾಡಿದ್ದಾರೆ. ಮೊದಲೇ ಯಾವ ಸುಳಿವು ಇಲ್ಲದೆ ಕಳೆದುಹೋದ ಮೊಬೈಲ್ ಹುಡುವುದು ಕಷ್ಟ ಅಂಥದ್ದರಲ್ಲಿ ಸ್ವಿಚ್ಡ್ ಆಫ್ ಆಗಿರುವ ಮೊಬೈಲ್ ಹುಡುಕುವುದು ಇನ್ನೂ ಸವಾಲಿನ ಕೆಲಸವೇ ಸರಿ.
ಮೊಬೈಲ್ ಹುಡುಕಲು ಸ್ವಯಂ ಸೇವಕರು ಮೈದಾನದೆಲ್ಲೆಡೆ ಹುಡುಕಾಡಿದ್ದಾರೆ. ಇದು ಮಾತ್ರವಲ್ಲದೆ ಕಸದ ಚೀಲದಲ್ಲೂ ಹುಡುಕಾಟ ನಡೆಸಿದ್ದಾರೆ. ರಾತ್ರಿಯಿಡೀ ಸಾವಿರಾರು ಕಸದ ಚೀಲದಲ್ಲಿ ಹುಡುಕಿದ ಪರಿಣಾಮ ಒಂದು ಕಸದ ಚೀಲದ ಬ್ಯಾಗ್ ನಲ್ಲಿ ಮೊಬೈಲ್ ಪತ್ತೆಯಾಗಿದೆ.
ಕಳೆದುಹೋದ 24 ಗಂಟೆಯೊಳಗೆ ಮೊಬೈಲ್ ಫೋನನ್ನು ಸ್ವಯಂ ಸೇವಕರು ಪತ್ತೆ ಹಚ್ಚಿದ್ದಾರೆ. ಈ ಹುಡುಕಾಟದ ಕುರಿತು ಹ್ಯಾಂಗ್ ಝೂ 19ನೇ ಏಷ್ಯನ್ ಗೇಮ್ಸ್ ಕಸದ ರಾಶಿಯಲ್ಲೊ ಮೊಬೈಲ್ ಹುಡುಕಾಟದ ದೃಶ್ಯವನ್ನು ಹಂಚಿಕೊಂಡಿದೆ.
ಸೆ.23 ರಿಂದ 19ನೇ ಏಷ್ಯನ್ ಗೇಮ್ಸ್ ಆರಂಭವಾಗಿದ್ದು, ಇದರಲ್ಲಿ 45 ದೇಶದ ಸುಮಾರು 12 ಅಥ್ಲೀಟ್ ಗಳು ಭಾಗಿಯಾಗಲಿದ್ದಾರೆ. ಅ.8 ರವೆರೆಗೆ ಏಷ್ಯನ್ ಗೇಮ್ಸ್ ಇರಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.