Australian Open Doubles ಗೆದ್ದ ರೋಹನ್ ಬೋಪಣ್ಣ ಗೆದ್ದ ಹಣವೆಷ್ಟು ಗೊತ್ತಾ?
Team Udayavani, Jan 28, 2024, 8:39 AM IST
ಮೆಲ್ಬರ್ನ್: ಭಾರತದ ಟೆನ್ನಿಸ್ ತಾರೆ ರೋಹನ್ ಬೋಪಣ್ಣ ಶನಿವಾರ ತಮ್ಮ ಜತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ಪುರುಷರ ಡಬಲ್ಸ್ ಇತಿಹಾಸದಲ್ಲಿ ಟ್ರೋಪಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂದೆನಿಸಿಕೊಂಡರು. ಮೆಲ್ಬರ್ನ್ ನ ರಾಡ್ ಲೇವರ್ ಅರೆನಾದಲ್ಲಿ ಶ್ರೇಯಾಂಕ ರಹಿತ ಇಟಾಲಿಯನ್ ಜೋಡಿ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೋರಿ ವಿರುದ್ಧ 7-6 (7/0), 7-5 ಅಂತರದಲ್ಲಿ ಜಯ ಸಾಧಿಸಿದರು.
ಇದು ಬೋಪಣ್ಣ ಮತ್ತು ಎಬ್ಡೆನ್ ಅವರು ಜೊತೆಯಾಗಿ ಗೆದ್ದ ಚೊಚ್ಚಲ ಪ್ರಶಸ್ತಿಯಾಗಿದೆ. ಪುರುಷರ ಡಬಲ್ಸ್ ನಲ್ಲಿ ಬೋಪಣ್ಣ ಅವರ ಮೊದಲ ಪ್ರಶಸ್ತಿಯಾಗಿದೆ. ಇದಕ್ಕಾಗಿ ಈ ಹಿಂದೆ ಅವರು 60 ಗ್ರ್ಯಾಂಡ್ ಸ್ಲಾಮ್ ಗಳಲ್ಲಿ ಪ್ರಯತ್ನ ಪಟ್ಟಿದ್ದಾರೆ. ಇದೂ ಒಂದು ದಾಖಲೆಯಾಗಿದೆ. 43 ವರ್ಷದ ಅವರು ಮುಂದಿನ ವಾರ ಬಿಡುಗಡೆಯಾಗುವ ಹೊಸ ಶ್ರೇಯಾಂಕದಲ್ಲಿ ಪುರುಷರ ಡಬಲ್ಸ್ ಇತಿಹಾಸದಲ್ಲಿ ಅತ್ಯಂತ ಹಿರಿಯ ನಂಬರ್ ಒನ್ ಆಗಲಿದ್ದಾರೆ.
ಆಸ್ಟ್ರೇಲಿಯನ್ ಓಪನ್ 2024 ರ ಪುರುಷರ ಡಬಲ್ಸ್ ಫೈನಲ್ ನ ವಿಜೇತರಾದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರು ಒಟ್ಟು 730,000 ಆಸ್ಟ್ರೇಲಿಯನ್ ಡಾಲರ್ ಗಳನ್ನು ಪಡೆದರು. ಅಂದರೆ ಸುಮಾರು 3 ಕೋಟಿ 98 ಲಕ್ಷ ಭಾರತೀಯ ರೂಪಾಯಿಗಳು.
2017 ರಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೊವ್ಸ್ಕಿ ಅವರೊಂದಿಗೆ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಗೆದ್ದ ಬೋಪಣ್ಣ ಅವರಿಗೆ ಇದು ಅವರ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.