ಹಾರ್ದಿಕ್, ರಾಹುಲ್ ಪ್ರಕರಣ ವಿಚಾರಣೆಗೆ ತನಿಖಾಧಿಕಾರಿ ನೇಮಕವಿಲ್ಲ
Team Udayavani, Jan 20, 2019, 1:00 AM IST
ಮುಂಬಯಿ: “ಕಾಫಿ ವಿತ್ ಕರಣ್’ ಟೀವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತಂತ್ರಕ್ಕೆ ಸಿಲುಕಿರುವ ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್ ಪ್ರಕರಣದಲ್ಲಿ ಮತ್ತೂಂದು ಪ್ರಮುಖ ಬೆಳವಣಿಗೆ ನಡೆದಿದೆ.
ಈ ಇಬ್ಬರ ವಿಚಾರಣೆಗೆ ತನಿಖಾಧಿಕಾರಿ ನೇಮಿಸಲು ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು, ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾಗೆ ಪತ್ರ ಬರೆದಿವೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವಿಶೇಷ ಸಭೆ ಕರೆದು ತನಿಖಾಧಿಕಾರಿ ಮೇಮಿಸಲು ಸಾಧ್ಯವಿಲ್ಲ ಎಂದು ಖನ್ನಾ ಪ್ರತಿಕ್ರಿಯಿಸಿದ್ದಾರೆ.
ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದಾರೆಂಬ ಹಿನ್ನೆಲೆಯಲ್ಲಿ ಹಾರ್ದಿಕ್ ಮತ್ತು ರಾಹುಲ್ ಸದ್ಯ ನಿಷೇಧದಲ್ಲಿದ್ದಾರೆ. ಅವರಿಬ್ಬರ ಶಿಕ್ಷೆ ಪ್ರಮಾಣ ಇನ್ನೂ ನಿರ್ಧಾರವಾಗಿಲ್ಲ. ಅದು ನಿರ್ಧಾರವಾಗುವ ವರೆಗೆ ಇಬ್ಬರಿಗೂ ಆಡಲು ಅವಕಾಶ ನೀಡಬೇಕೆಂದು ಬಿಸಿಸಿಐನ ಕೆಲವು ಮೂಲಗಳು ಒತ್ತಾಯಿಸಿವೆ. ಅಲ್ಲದೇ ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ (ಸಿಒಎ) ವಿನೋದ್ ರಾಯ್ ಮನಸ್ಸು ಮಾಡಿದ್ದರೆ, ಈ ಪ್ರಕರಣವನ್ನು ಸುಲಭವಾಗಿ ಬಗೆಹರಿಸಬಹುದಿತ್ತು ಎಂದೂ ಮೂಲಗಳು ಹೇಳಿವೆ.
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ನೂತನ
ತರಬೇತುದಾರರನ್ನು ಆಯ್ಕೆ ಮಾಡುವಾಗ ಸಹ ಆಡಳಿತಾಧಿಕಾರಿ ಡಯಾನಾ ಎಡುಲ್ಜಿ ಮಾತನ್ನು ವಿನೋದ್ ರಾಯ್ ಕೇಳಿರಲಿಲ್ಲ. ಅದೇ ರೀತಿ ಇಲ್ಲೂ ಕೂಡ ರಾಯ್ ನಡೆದುಕೊಳ್ಳಲು ಸಾಧ್ಯವಿತ್ತು. ಆಧರೆ ಅವರು ಹಾಗೆ ಮಾಡಿಲ್ಲ ಎನ್ನುವುದು ಮೂಲಗಳ ಅಭಿಪ್ರಾಯ.
ಆಡಳಿತಾಧಿಕಾರಿಗಳಿಗೆ ಖನ್ನಾ ಪತ್ರ
ಈ ಬಗ್ಗೆ ಬಿಸಿಸಿಐ ಆಡಳಿತಾಧಿಕಾರಿಗಳಿಗೆ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಪತ್ರ ಬರೆದಿದ್ದಾರೆ. “ಪ್ರಸ್ತುತ ಸಮಸ್ಯೆಯನ್ನು ಬಗೆಹರಿಸಲು ಬಿಸಿಸಿಐ ಪದಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳ ನಡುವೆ ಸಭೆ ನಡೆಯಬೇಕು. ಹಾರ್ದಿಕ್ ಮತ್ತು ರಾಹುಲ್ ಮಾಡಿದ್ದು ಖಂಡಿತ ತಪ್ಪು. ಆದರೆ ಅವರಿಬ್ಬರನ್ನು ಕಾನೂನು ಉಲ್ಲಂ ಸಿದವರು ಎಂಬ ರೀತಿಯಲ್ಲಿ ನಡೆಸಿಕೊಳ್ಳುವುದು ಕೂಡ ತಪ್ಪು. ಅವರಿಬ್ಬರು ತಪ್ಪು ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಇಬ್ಬರೂ ಕ್ಷಮೆಯಾಚನೆ ಮಾಡಿದ್ದಾರೆ. ಭಾರತೀಯ ಕ್ರಿಕೆಟಿನ ಹಿತದೃಷ್ಟಿಯಿಂದ ಇಬ್ಬರ ಜೀವನವನ್ನು ಅತಂತ್ರದಲ್ಲಿಡಬಾರದು’ ಎಂದು ಆಗ್ರಹಿಸಿದ್ದಾರೆ.
ವಿಚಾರಣೆ ಮುಗಿಯುವವರೆಗೆ ಇಬ್ಬರನ್ನು ಮತ್ತೆ ಕ್ರಿಕೆಟ್ ಆಡಲು ಬಿಡಬೇಕು. ವಿಶ್ವಕಪ್ ಆರಂಭಕ್ಕೂ ಮುನ್ನ ಇಬ್ಬರಿಗೂ ಅಭ್ಯಾಸ ಅಗತ್ಯವಾಗಿದೆ. ಇಬ್ಬರಿಗೂ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಕೊಡಲೇಬೇಕು ಎಂದು ಖನ್ನಾ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.