ಯುಎಸ್ ಓಪನ್ ಬ್ಯಾಡ್ಮಿಂಟನ್ ಪ್ರಣಯ್‌ಗೆ ಪ್ರಶಸ್ತಿ
Team Udayavani, Jul 25, 2017, 7:55 AM IST
ಅನಾಹೇಮ್: ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಭಾರತದ ಎಚ್‌ಎಸ್ ಪ್ರಣಯ್ ತನ್ನ ದೇಶದವರೇ ಆದ ಪಾರುಪಳ್ಳಿ ಕಶ್ಯಪ್ ಅವರನ್ನು ಕೆಡಹಿ ಯುಎಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಗಾಯದ ಸಮಸ್ಯೆಯಿಂದ ಹಲವು ಕೂಟಗಳಿಂದ ಹೊರಗುಳಿದಿದ್ದ ಪ್ರಣಯ್ ಅಮೋಘ ಆಟವಾಡಿ ಕಶ್ಯಪ್ ಅವರನ್ನು 21-15, 20-22, 21-12 ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು. ಈ ಹೋರಾಟ ಒಂದು ತಾಸು ಮತ್ತು ಐದು ನಿಮಿಷಗಳವರೆಗೆ ಸಾಗಿತ್ತು.
ಇದೊಂದು ಉತ್ತಮ ಪಂದ್ಯವಾಗಿತ್ತು. ತೀವ್ರ ಪೈಪೋಟಿಯಿಂದ ಸಾಗಿತ್ತು. ನಾವಿಬ್ಬರು ಉನ್ನತ ಗುಣಮಟ್ಟದ ಆಟ ಆಡಿದೆವು. ಸ್ವಲ್ಪದರಲ್ಲಿ ದ್ವಿತೀಯ ಗೇಮ್ ಕಳೆದುಕೊಂಡ ಬಳಿಕ ನಾನು ತಾಳ್ಮೆಯಿಂದ ಆಡಿದ್ದರಿಂದ ಗೆಲುವು ಒಲಿಸಿಕೊಳ್ಳಲು ಸಾಧ್ಯವಾಯಿತು ಎಂದು ಪಂದ್ಯದ ಬಳಿಕ ಪ್ರಣಯ್ ತಿಳಿಸಿದರು. ದ್ವಿತೀಯ ಗೇಮ್‌ನಲ್ಲಿ ಕಶ್ಯಪ್ ಮೊದಲ ಗೇಮ್‌ಗಿಂತ ಉತ್ತಮವಾಗಿ ಆಡಿದ್ದರು. ನೆಟ್ ಬಳಿ ನನಗೆ ಬಹಳಷ್ಟು ಒತ್ತಡವನ್ನು ಹೇರುತ್ತಿದ್ದರು. ನಾನು ಲಿಫ್ಟ್ ಮಾಡಿದ ಎಲ್ಲ ಹೊಡೆತಗಳನ್ನು ಅವರು ಉತ್ತಮ ರೀತಿಯಲ್ಲಿ ಆಡಿ ಅಂಕ ಗಳಿಸಿದ್ದರಿಂದ ಹೋರಾಟ ಕಠಿನವಾಗುತ್ತ ಹೋಯಿತು ಎಂದವರು ಹೇಳಿದರು.
ಆದರೆ ಮೂರನೇ ಗೇಮ್‌ನಲ್ಲಿ ನನ್ನ ತಂತ್ರವನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿಕೊಂಡೆ. ಹಾಗಾಗಿ ಮುನ್ನಡೆ ಸಾಧಿಸಲು ಯಶಸ್ವಿಯಾದೆ. ಸಮಗ್ರವಾಗಿ ಈ ಕೂಟದಲ್ಲಿ ನನ್ನ ನಿರ್ವಹಣೆಯಿಂದ ಖುಷಿಯಾಗಿದೆ. ಮುಂದಿನ ನ್ಯೂಜಿಲ್ಯಾಂಡ್ ಓಪನ್ ಕೂಟವನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಣಯ್ ವಿವರಿಸಿದರು.
ಗಾಯದ ಸಮಸ್ಯೆ
2010ರ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಬಳಿಕ ಪ್ರಣಯ್ ಗಾಯದ ಸಮಸ್ಯೆಯಿಂದ ಆಗಾಗ್ಗೆ ಬ್ಯಾಡ್ಮಿಂಟನ್ ಆಟದಿಂದ ದೂರ ಉಳಿಯುತ್ತಿದ್ದರು. ಇದರಿಂದ ಅವರ ತರಬೇತಿ ಮತ್ತು ಉನ್ನತ ಸಾಧನೆಗೆ ತೊಂದರೆಯಾಗುತ್ತಿತ್ತು. 2011ರಲ್ಲಿ ಮಂಡಿ ಮತ್ತು 2012ರಲ್ಲಿ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ ಪ್ರಣಯ್ 2013ರಲ್ಲಿ ಟಾಟಾ ಓಪನ್‌ನ ಫೈನಲಿಗೇರಿದ್ದರು. ಈ ನಡುವೆ ಅವರು ಬಿಟ್‌ಬರ್ಜರ್, ಸಯ್ಯದ್ ಮೋದಿ ಇಂಟರ್‌ನ್ಯಾಶನಲ್, ಮಕಾವ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಕೂಟಗಳಲ್ಲಿ ಸೆಮಿಫೈನಲ್ ತಲುಪಿದ್ದ ಪ್ರಣಯ್ ವಿಯೆಟ್ನಾಂನಲ್ಲಿ ಫೈನಲ್ ತಲುಪಿದ್ದರು. 2014ರಲ್ಲಿ ಇಂಡೋನೇಶ್ಯದಲ್ಲಿ ತನ್ನ ಚೊಚ್ಚಲ ಗ್ರ್ಯಾನ್ ಪ್ರಿ ಗೋಲ್ಡ್ ಕೂಟದ ಪ್ರಶಸ್ತಿ ಎತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.