ಪ್ಯಾರಾಲಿಂಪಿಕ್ಸ್ ಗೆ ಭಾರತದ ದೊಡ್ಡ ತಂಡ
Team Udayavani, Aug 10, 2021, 6:17 AM IST
ಹೊಸದಿಲ್ಲಿ: ರವಿವಾರ ರಾತ್ರಿ ಟೋಕಿಯೊ ಒಲಿಂಪಿಕ್ಸ್ ಜ್ಯೋತಿ ಆರುತ್ತಿ ದ್ದಂತೆಯೇ ಟೋಕಿಯೊ ಇನ್ನೊಂದು ಜಾಗತಿಕ ಕ್ರೀಡಾಕೂಟಕ್ಕೆ ಅಣಿಯಾಗತೊಡಗಿದೆ. ಇದು ಪ್ಯಾರಾಲಿಂಪಿಕ್ಸ್ ಗೇಮ್ಸ್. ಆ. 28ರಿಂದ ಸೆ. 5ರ ತನಕ ನಡೆಯಲಿದೆ. ಈ ಕೂಟದ ಇತಿಹಾಸದಲ್ಲೇ ಭಾರತ 54 ಕ್ರೀಡಾಪಟುಗಳ ಅತೀ ದೊಡ್ಡ ತಂಡವನ್ನು ರವಾನಿಸಲಿದೆ.
ಇಲ್ಲಿನ 21 ಕೇಂದ್ರಗಳಲ್ಲಿ 22 ಕ್ರೀಡೆಗಳ 593 ವಿಭಾಗಗಳ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಭಾರತ 9 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ. 2016ರ ರಿಯೋ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ಹೈಜಂಪರ್ ಮರಿಯಪ್ಪನ್ ತಂಗವೇಲು ಉದ್ಘಾಟನಾ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜಧಾರಿಯಾಗಲಿದ್ದಾರೆ.
ಇಲ್ಲಿನ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ, ದೀಪಾ ಮಲಿಕ್ ಅಧ್ಯಕ್ಷತೆಯ ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ (ಪಿಸಿಐ) ನಡೆಸಿದ ಎರಡು ದಿನಗಳ ಟ್ರಯಲ್ಸ್ ಬಳಿಕ ಈ ಕ್ರೀಡಾಕೂಟಕ್ಕೆ ಭಾರತದ ತಂಡವನ್ನು ಅಂತಿಮಗೊಳಿಸಲಾಯಿತು. ರಿಯೋ ಕೂಟದಲ್ಲಿ ಬೆಳ್ಳಿ ಜಯಿಸಿದ್ದರು. ದೀಪಾ ಮಲಿಕ್ ಪಿಸಿಐ ಅಧ್ಯಕ್ಷರಾಗಿದ್ದಾರೆ.
19 ಸದಸ್ಯರದ್ದೇ ದಾಖಲೆ :
ಕಳೆದ ರಿಯೋ ಒಲಿಂಪಿಕ್ಸ್ ಕೂಟದಲ್ಲಿ 19 ಕ್ರೀಡಾಪಟುಗಳನ್ನು ಕಳುಹಿಸಿದ್ದೇ ಭಾರತದ ಈ ವರೆಗಿನ ದಾಖಲೆಯಾಗಿತ್ತು. ಭಾರತದ ಶ್ರೇಷ್ಠ ಪ್ರದರ್ಶನ ಕೂಡ ಇದೇ ಕೂಟದಲ್ಲಿ ಕಂಡುಬಂದಿತ್ತು. ಭಾರತ ಒಟ್ಟು 4 ಪದಕ ಜಯಿಸಿತ್ತು (2 ಚಿನ್ನ, 1 ಬೆಳ್ಳಿ, 1 ಕಂಚು).
ಭಾಗವಹಿಸುವ ಪ್ರಮುಖರು : ಟೋಕಿಯೊ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಪ್ರಮುಖ ಕ್ರೀಡಾಪಟುಗಳ ಯಾದಿ ಇಲ್ಲಿದೆ.
ಪುರುಷರು: ದೇವೇಂದ್ರ ಜಜಾರಿಯಾ, ಅಜಿತ್ ಸಿಂಗ್, ಸುಂದರ್ ಸಿಂಗ್ ಗುರ್ಜಾರ್ (ಜಾವೆಲಿನ್ ಎಫ್-46); ಸಂದೀಪ್ ಚೌಧರಿ, ಸುಮಿತ್ (ಜಾವೆಲಿನ್ ಎಫ್-64); ಮರಿಯಪ್ಪನ್ ತಂಗವೇಲು, ಶರದ್ ಕುಮಾರ್, ವರುಣ್ ಸಿಂಗ್ ಭಟ್ಟಿ (ಹೈಜಂಪ್ 1ಇ-63); ಅಮಿತ್ ಕುಮಾರ್, ಧರಮ್‌ಬೀರ್ (ಕ್ಲಬ್ ತ್ರೋ ಎಫ್-51); ನಿಶಾದ್ ಕುಮಾರ್, ರಾಮ್ ಪಾಲ್ (ಹೈಜಂಪ್ ಟಿ-47); ಸೋನಮ್ ರಾಣಾ (ಶಾಟ್‌ಪುಟ್ ಎಫ್-57); ನವದೀಪ್ (ಜಾವೆಲಿನ್ ಎಫ್-41); ಪ್ರವೀಣ್ ಕುಮಾರ್ (ಹೈಜಂಪ್ ಟಿ-64); ಯೋಗೇಶ್ ಕಾಥುನಿಯಾ (ಡಿಸ್ಕಸ್ ತ್ರೋ ಎಫ್-56); ವಿನೋದ್ ಕುಮಾರ್ (ಡಿಸ್ಕಸ್ ತ್ರೋ ಎಫ್-56); ರಂಜಿತ್ ಭಟ್ಟಿ (ಜಾವೆಲಿನ್ ಎಫ್-57); ಅರವಿಂದ್ (ಶಾಟ್‌ಪುಟ್ ಎಫ್-35); ಟೇಕ್ ಚಂದ್ (ಜಾವೆಲಿನ್).
ವನಿತೆಯರು: ಏಕ್ತಾ ಭ್ಯಾನ್, ಕಾಶಿಷ್ ಲಾಕ್ರಾ (ಕ್ಲಬ್ ತ್ರೋ ಎಫ್-51); ಭಾಗ್ಯಶ್ರೀ ಜಾಧವ್ (ಶಾಟ್‌ಪುಟ್ ಎಫ್-34); ಸಿಮ್ರಾನ್ (100 ಮೀ. ಟಿ-13).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.