AusVsAfg; “ಮಾನವ ಹಕ್ಕುಗಳು ಅಥವಾ 2 ಅಂಕಗಳು”: ಚರ್ಚೆಗೆ ಕಾರಣವಾದ ನವೀನ್ ಹಕ್ ಪೋಸ್ಟ್
Team Udayavani, Nov 5, 2023, 10:15 AM IST
ಮುಂಬೈ: ಈ ವಿಶ್ವಕಪ್ ನಲ್ಲಿ ಅನಿರೀಕ್ಷಿತ ಫಲಿತಾಂಶ ನೀಡುತ್ತಿರುವ ಅಫ್ಘಾನಿಸ್ತಾನ ತಂಡವು ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಕಳೆದ ಎರಡು ವಿಶ್ವಕಪ್ ಆವೃತ್ತಿಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದ ಅಫ್ಘಾನ್ ಈ ಬಾರಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು ಸೆಮಿ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ ಅಫ್ಘಾನ್ ಸೆಮಿ ಫೈನಲ್ ತಲುಪುವ ಸಾಧ್ಯತೆಯಿದೆ.
ನವೆಂಬರ್ 7ರಂದು ಅಫ್ಘಾನಿಸ್ತಾನ ತಂಡವು ಆಸ್ಟ್ರೇಲಿಯಾ ವಿರುದ್ಧ ಪಂದ್ಯವಾಡಲಿದೆ. ಉಭಯ ತಂಡಗಳಿಗೂ ಇದು ಪ್ರಮುಖ ಪಂದ್ಯವಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಅಫ್ಘಾನ್ ವೇಗಿ ನವೀನ್ ಉಲ್ ಹಕ್ ಹಾಕಿದ ಇನ್ಸ್ಟಾಗ್ರಾಮ್ ಪೋಸ್ಟ್ ಚರ್ಚೆಗೆ ಕಾರಣವಾಗಿದೆ.
“ದ್ವಿಪಕ್ಷೀಯ ಸರಣಿ ಆಡಲು ನಕಾರ. ಈಗ ವಿಶ್ವಕಪ್‌ನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ನಿಲುವು ನೋಡಲು ಆಸಕ್ತಿದಾಯಕವಾಗಿದೆ. ಸ್ಟಾಂಡರ್ಸ್, ಮಾನವ ಹಕ್ಕುಗಳೇ ಅಥವಾ ಎರಡು ಅಂಕಗಳೇ” ಎಂದು ನವೀನ್ ಉಲ್ ಹಕ್ ಬರೆದುಕೊಂಡಿದ್ದಾರೆ.
ರಾಜಕೀಯ ಉದ್ವಿಗ್ನತೆಯಿಂದಾಗಿ 2021 ರಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕಾಗಿ ಅಫ್ಘಾನಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಸಮಯವನ್ನು ನವೀನ್ ಉಲ್ಲೇಖಿಸಿದ್ದಾರೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದಿತ್ತು. ಮಹಿಳಾ ಮತ್ತು ಮಕ್ಕಳ ಹಕ್ಕುಗಳನ್ನು ಅಫ್ಘಾನ್ ನಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಆಸ್ಟ್ರೇಲಿಯಾವು ಅಫ್ಘಾನ್ ಪ್ರವಾಸವನ್ನು ರದ್ದುಗೊಳಿಸಲು ನಿರ್ಧರಿಸಿತು. ಅಫ್ಘಾನಿಸ್ತಾನದ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ ಆಸ್ಟ್ರೇಲಿಯಾ ಈಗ ಏನು ನಿರ್ಧರಿಸುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ ಎಂದು ನವೀನ್ ಕುಟುಕಿದ್ದಾರೆ.
ಸೆಮಿ ಫೈನಲ್ ಪ್ರವೇಶದ ಸನಿಹಕ್ಕೆ ಬಂದಿರುವ ಆಸ್ಟ್ರೇಲಿಯಾಗೆ ಅಫ್ಗಾನ್ ವಿರುದ್ದದ ಪಂದ್ಯವು ಬಹುಮುಖ್ಯವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.