ಏಕದಿನ ಕ್ರಿಕೆಟ್ ನಲ್ಲಿ ನೂರು ವಿಕೆಟ್ ಸಾಧನೆ ಮಾಡೆದ ಯುಜುವೇಂದ್ರ ಚಾಹಲ್
Team Udayavani, Feb 6, 2022, 3:27 PM IST
ಅಹಮದಾಬಾದ್: ಭಾರತ ಕ್ರಿಕೆಟ್ ತಂಡದ 1000ನೇ ಪಂದ್ಯದಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಚಾಹಲ್ ಅವರು ಏಕದಿನ ಕ್ರಿಕೆಟ್ ನಲ್ಲಿ ನೂರು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ವಿಂಡೀಸ್ ನ ನಿಕೋಲಸ್ ಪೂರನ್ ಅವರನ್ನು ಎಲ್ ಬಿ ಬಲೆಗೆ ಬೀಳಿಸಿದ ವೇಳೆ ಚಾಹಲ್ ಈ ಸಾಧನೆ ಮಾಡಿದರು. 60ನೇ ಏಕದಿನ ಪಂದ್ಯದಲ್ಲಿ ಚಾಹಲ್ ನೂರು ವಿಕೆಟ್ ಸಾಧನೆ ಮಾಡಿದರು. ಚಾಹಲ್ ಗಿಂತ ವೇಗವಾಗಿ ನೂರು ವಿಕೆಟ್ ಕಿತ್ತ ಸಾಧನೆ ಮಾಡಿದವರೆಂದರೆ ಮೊಹಮ್ಮದ್ ಶಮಿ ( 56 ಪಂದ್ಯ), ಬುಮ್ರಾ ( 57 ಪಂದ್ಯ), ಕುಲದೀಪ್ ಯಾದವ್ (58 ಪಂದ್ಯ), ಇರ್ಫಾನ್ ಪಠಾಣ್ (59 ಪಂದ್ಯ).
ಇದನ್ನೂ ಓದಿ:ವಿಂಡೀಸ್ ವಿರುದ್ಧ ಮೊದಲ ಏಕದಿನ: ಟಾಸ್ ಗೆದ್ದ ರೋಹಿತ್; ದೀಪಕ್ ಹೂಡಾ ಪದಾರ್ಪಣೆ
ವಿಶೇಷವೆಂದರೆ ಪೂರನ್ ವಿಕೆಟ್ ಪಡೆದ ಮುಂದಿನ ಎಸೆತದಲ್ಲಿ ಚಾಹಲ್ ಮತ್ತೊಂದು ವಿಕೆಟ್ ಕಿತ್ತರು. ವಿಂಡೀಸ್ ನಾಯಕ ಕೈರನ್ ಪೊಲಾರ್ಡ್ ಅವರು ಮೊದಲ ಎಸೆತಕ್ಕೆ ಬೌಲ್ಡ್ ಆದರು.
ತಂಡಗಳು:
ಭಾರತ: ರೋಹಿತ್ ಶರ್ಮಾ (ನಾ) ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಶಾಯ್ ಹೋಪ್, ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ನಿಕೋಲಸ್ ಪೂರನ್ (ವಿ.ಕೀ), ಕೈರನ್ ಪೊಲಾರ್ಡ್ (ನಾ), ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಅಲ್ಜಾರಿ ಜೋಸೆಫ್, ಕೆಮಾರ್ ರೋಚ್, ಅಕೇಲ್ ಹೊಸೈನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.