HWA; ಇಂದು ನಡೆಯಬೇಕಾಗಿದ್ದ ಕುಸ್ತಿ ಫೆಡರೇಶನ್ ಚುನಾವಣೆಗೆ ತಡೆಯಾಜ್ಞೆ
Team Udayavani, Aug 12, 2023, 6:00 AM IST
ಚಂಡೀಗಢ: ಹರಿಯಾಣ ಕುಸ್ತಿ ಅಸೋಸಿಯೇಶನ್ (ಎಚ್ಡಬ್ಲ್ಯುಎ) ಸಲ್ಲಿಸಿದ ದೂರಿನ ಆಧಾರದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ ನಡೆಯ ಬೇಕಾಗಿದ್ದ ಭಾರತೀಯ ಕುಸ್ತಿ ಫೆಡರೇ ಶನ್ನ ಚುನಾವಣೆಗೆ ಮುಂದಿನ ಅದೇ ಶದ ತನಕ ತಡೆಯಾಜ್ಞೆ ನೀಡಿದೆ.
ಕುಸ್ತಿ ಫೆಡರೇಶನ್ ಚುನಾವಣೆಯಲ್ಲಿ ಹರಿಯಾಣ ಅಮೆಚೂರ್ ಕುಸ್ತಿ ಅಸೋ ಸಿಯೇಶನ್ಗೆ ಮತದಾನಕ್ಕೆ ಅವಕಾಶ ಕಲ್ಪಿಸಿದನ್ನು ಪ್ರಶ್ನಿಸಿ ಹರಿಯಾಣ ಕುಸ್ತಿ ಸಂಸ್ಥೆ ಸಲ್ಲಿಸಿದ ದೂರಿನ ಆಧಾರದಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ.
ಎಚ್ಡಬ್ಲ್ಯುಎ ರಾಜ್ಯದಲ್ಲಿ ನೋಂದಣಿ ಮಾಡಿದ ಸಂಸ್ಥೆಯಾಗಿದ್ದು ಭಾರತೀಯ ಕುಸ್ತಿ ಫೆಡರೇಶನ್ ಜತೆ ನೋಂದಾಯಿ ಸಿಕೊಂಡಿದೆ ಎಂದು ಎಚ್ಡಬ್ಲ್ಯುಎ ಅನ್ನು ಪ್ರತಿನಿಧಿಸಿದ ವಕೀಲ ರವೀಂದರ್ ಮಲಿಕ್ ನ್ಯಾಯಾಲಯದಲ್ಲಿ ತಿಳಿಸಿದರು. ಕುಸ್ತಿ ಫೆಡರೇಶನ್ನ ಸಂವಿಧಾನ ಮತ್ತು ನಿಯಮದಂತೆ ನೋಂದಾಯಿತ ಸಂಸ್ಥೆ ಚುನಾವಣೆ ವೇಳೆ ಮತದಾನ ಮಾಡಲು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಲು ಅವಕಾಶವಿದೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.