PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್ ಉತ್ತಪ್ಪ
Team Udayavani, Dec 23, 2024, 6:27 AM IST
ಹೊಸದಿಲ್ಲಿ: ಪಿಎಫ್ ಹಣ ವಂಚಿಸಿದ್ದಾರೆಂಬ ಆರೋಪದಡಿ ಪೊಲೀಸರಿಂದ ನೋಟಿಸ್ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ, ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸ್ಟ್ರಾಬೆರಿ ಲೆನ್ಸೆರಿಯ ಪ್ರೈ.ಲಿ., ಸೆಂಟಾರಸ್ ಲೈಫ್ಸ್ಟೈಲ್ ಬ್ರ್ಯಾಂಡ್ಸ್ ಪ್ರೈ.ಲಿ., ಬೆರಿಜ್ ಫ್ಯಾಶನ್ ಹೌಸ್ ಕಂಪೆನಿಗಳಿಗೆ ನಾನು ಸಾಲ ನೀಡಿದ್ದರಿಂದ ನನ್ನನ್ನು ಗೌರವ ನಿರ್ದೇಶಕನನ್ನಾಗಿ ನೇಮಿಸಿದ್ದವು. ಅದರಲ್ಲಿ ಯಾವುದೇ ಸಕ್ರಿಯ ಪಾತ್ರ ಹೊಂದಿರಲಿಲ್ಲ. ಈಗಂತೂ ಆ ಕಂಪೆನಿಗಳ ಯಾವ ಹುದ್ದೆಗಳಲ್ಲೂ ಇಲ್ಲ. ಮೇಲಾಗಿ ಆ ಕಂಪೆನಿಗಳು ನನ್ನಿಂದ ಪಡೆದ ಸಾಲವನ್ನು ಇನ್ನೂ ಮರಳಿಸಿಲ್ಲ. ಅದರ ವಿರುದ್ಧ ಪ್ರಕರಣ ನಡೆಯುತ್ತಿದೆ. ಹಾಗಿದ್ದರೂ ನನ್ನ ಮೇಲೆ ಪಿಎಫ್ ಹಣವನ್ನು ಉದ್ಯೋಗಿಗಳ ಖಾತೆಗೆ ಹಾಕದ ಪ್ರಕರಣ ದಾಖಲಿಸಲಾಗಿದೆ. ಇದರ ವಿರುದ್ಧ ನನ್ನ ವಕೀಲರ ತಂಡ ಕ್ರಮ ಕೈಗೊಳ್ಳಲಿದೆ ಎಂದು ಉತ್ತಪ್ಪ ಹೇಳಿದ್ದಾರೆ.
2018-19ರಲ್ಲಿ ನಾನು ನಿರ್ದೇಶಕನಾಗಿದ್ದೆ. ಇಂತಹ ಹುದ್ದೆಗಳನ್ನು ನಿಭಾಯಿಸಲು ಬೇಕಾದ ತಜ್ಞತೆಯಾಗಲಿ, ಅಷ್ಟು ಸಮಯವಾಗಲಿ ನನ್ನಲ್ಲಿಲ್ಲ. ಸದ್ಯ ನಾನು ಕ್ರಿಕೆಟ್ ವೀಕ್ಷಕ ವಿವರಣೆಕಾರನಾಗಿ, ಟಿವಿ ನಿರೂಪಕನಾಗಿ, ವೃತ್ತಿಪರ ಕ್ರಿಕೆಟಿಗನಾಗಿ ಕಾರ್ಯಮಗ್ನನಾಗಿದ್ದೇನೆ. ಇವೆನ್ನಲ್ಲ ಪಿಎಫ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇನೆ. ಆದರೂ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.