ನಾನು ಫಿಕ್ಸಿಂಗ್ ಮಾಡಿಲ್ಲ: ಶ್ರೀಶಾಂತ್
ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡವರು, ಈಗಲೂ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ
Team Udayavani, Sep 30, 2019, 5:13 AM IST
ತಿರುವನಂತಪುರ (ಕೇರಳ): ನನ್ನ ಮಕ್ಕಳ ಮೇಲೆ ಆಣೆ, ನನ್ನ ತಂದೆ ತಾಯಂದಿರ ಮೇಲೆ ಆಣೆ, ನಾನು ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಎಸ್.ಶ್ರೀಶಾಂತ್ ಹೇಳಿದ್ದಾರೆ.
ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿರುವ ಕೆಲವು ಕ್ರಿಕೆಟಿಗರು ಸಕ್ರಿಯರಾಗಿ ಆಡಿಕೊಂಡಿದ್ದಾರೆ. ಅವರ ಮುಖದಲ್ಲಿ ನಗುವಿದೆ, ಕೆಲವರು ನಿವೃತ್ತರಾಗಿದ್ದಾರೆ.
ಆದರೆ ಅದನ್ನೆಲ್ಲ ನಾನು ಈಗ ಹೇಳಲು ಹೋಗುತ್ತಿಲ್ಲ. ತನ್ನ ಮೇಲೆ ಮಾತ್ರ ಫಿಕ್ಸಿಂಗ್ ಆರೋಪ ಹೊರಿಸಿ ನಿಷೇಧಿಸಲಾಗಿದೆ ಎಂದು ಕಿಡಿನುಡಿದಿದ್ದಾರೆ.
ನನ್ನ ಅಪ್ಪ ಅಮ್ಮ ಈಗ ಹಾಸಿಗೆ ಹಿಡಿದಿದ್ದಾರೆ. ಅವರು ಈಗಲೂ ನಾನು ಮತ್ತೆ ಆಡುತ್ತೇನೆ ಎಂದು ನಂಬಿದ್ದಾರೆ. ಅವರ ಮೇಲೆ ಆಣೆಯಿಟ್ಟು ಹೇಳುತ್ತೇನೆ, 100 ಕೋಟಿ ರೂ. ನೀಡಿದರೂ ನಾನು ಫಿಕ್ಸಿಂಗ್ ಮಾಡುವಂತಹ ಕೆಲಸಕ್ಕೆ ಇಳಿಯುವುದಿಲ್ಲ. ಆದರೆ ಕೆಲವರು ಅಂತಹ ಕೆಲಸ ಮಾಡಿರುವುದು ನನಗೆ ಗೊತ್ತಿದೆ. ಬರೀ ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಕ್ರಿಕೆಟ್‌ನಲ್ಲಿಯೂ ಆಡಿಕೊಂಡಿದ್ದಾರೆ. ಅವರ ಹೆಸರನ್ನು ಸುಲಭವಾಗಿ ಹೇಳಿಬಿಡಬಲ್ಲೆ.
ಪೊಲೀಸರೆ ನನಗೆ ಆ ದಾಖಲೆಯನ್ನು ತೋರಿಸಿದ್ದಾರೆ. ಆದರೆ ನಾನು ನಿಮ್ಮಂತಹ ವ್ಯಕ್ತಿಯಲ್ಲ, ಅದನ್ನೆಲ್ಲ ಮಾಡುವ ಆಸಕ್ತಿಯಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.
2013ರಲ್ಲಿ ನಡೆದ ಐಪಿಎಲ್ ಸ್ಪಾಟ್‌ಫಿಕ್ಸಿಂಗ್ ಪ್ರಕರಣದ ನಂತರ ಶ್ರೀಶಾಂತ್ ಆಜೀವನಿಷೇಧಕ್ಕೊಳಗಾಗಿದ್ದರು. ಸತತವಾಗಿ ಕಾನೂನು ಹೋರಾಟ ಮಾಡಿದ ನಂತರ, ಕೆಲ ತಿಂಗಳ ಹಿಂದಷ್ಟೇ ಅದರಿಂದ ಮುಕ್ತರಾಗಿದ್ದಾರೆ. ಮುಂದಿನ ವರ್ಷ ಅವರ ನಿಷೇಧ ಮುಗಿಯಲಿದೆ. ಅಲ್ಲಿಂದ ಅವರು ಮತ್ತೆ ಕ್ರಿಕೆಟ್‌ಗೆ ಮರಳಬಹುದು ಅಥವಾ ಕ್ರಿಕೆಟ್ ಸಂಬಂಧಿ ಚಟುವಟಿಕೆಗಳನ್ನು ನಡೆಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.