ತಾನೀಗ ಸಂಪೂರ್ಣ ಫಿಟ್; ಸ್ಪರ್ಧೆಗೂ ತಯಾರಾಗಿದ್ದೇನೆ: ಪಿ.ವಿ. ಸಿಂಧು
Team Udayavani, Nov 6, 2020, 6:29 PM IST
ಹೈದರಾಬಾದ್: ಕಳೆದ ವಾರವಷ್ಟೇ “ನಾನು ನಿವೃತ್ತಿಯಾಗುತ್ತಿದ್ದೇನೆ’ (ಐ ರಿಟೈರ್ಡ್) ಎಂದು ಶಟ್ಲರ್ ಪಿ.ವಿ. ಸಿಂಧು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ದೇಶದ ಕ್ರೀಡಾಪ್ರೇಮಿಗಳನ್ನು ಅಚ್ಚರಿ ಹಾಗೂ ಆಘಾತದಲ್ಲಿ ಕೆಡವಿದ್ದರು. ಇದೀಗ ಶುಕ್ರವಾರ ಹೇಳಿಕೆಯೊಂದನ್ನು ನೀಡಿದ ಸಿಂಧು, ತಾನೀಗ ಸಂಪೂರ್ಣ ಫಿಟ್ ಆಗಿದ್ದೇನೆ. ಆರೋಗ್ಯ ವಿಚಾರದಲ್ಲಷ್ಟೇ ಅಲ್ಲ, ಸ್ಪರ್ಧೆಗೂ ತಯಾರಾಗಿದ್ದೇನೆ ಎಂದಿದ್ದಾರೆ.
“ಕೋವಿಡ್ ಸೋಂಕಿನ ಕಾಲಘಟ್ಟ ನನ್ನ ಕಣ್ಣು ತೆರೆಸಿದೆ. ನಮ್ಮ ದೈನಂದಿನ ದಿನಚರಿಯನ್ನು ಏಕಾಏಕಿ ನಿಲ್ಲಿಸಬೇಕಾದ ಸಂದರ್ಭ ಬಂದಾಗ ತುಂಬ ಕಷ್ಟವಾಗಿತ್ತು. ಎಲ್ಲದಕ್ಕೂ ಬಿಡುವು ನೀಡಿ ನಮ್ಮ ಬಗ್ಗೆ ನಾವು ಜಾಗರೂಕತೆ ವಹಿಸುವುದು ಎಷ್ಟು ಮುಖ್ಯ ಎನ್ನುವುದು ನನಗೆ ಅರ್ಥವಾದದ್ದೇ ಈ ಸಮಯದಲ್ಲಿ. ನಾನೀಗ ಸಂಪೂರ್ಣ ಫಿಟ್ ಆಗಿದ್ದು, ಬ್ಯಾಡ್ಮಿಂಟನ್ ಅಂಕಣಕ್ಕೆ ಮರಳುವ ತವಕದಲ್ಲಿದ್ದೇನೆ. ಜತೆಗೆ ನಿರಂತರ ಅಭ್ಯಾಸ ನಡೆಸುವ ಮೂಲಕ ಮುಂದಿನ ಕೂಟಗಳಿಗೆ ಸಜ್ಜಾಗುತ್ತಿದ್ದೇನೆ. ಏಶ್ಯದ ಟೂರ್ನ್ಮೆಂಟ್‌ಗಳನ್ನು ನಾನೀಗ ಎದುರು ನೋಡುತ್ತಿದ್ದೇನೆ’ ಎಂಬುದಾಗಿ ಸಿಂಧು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.