700 ವಿಕೆಟ್ ಅಸಾಧ್ಯವಲ್ಲ: ಆ್ಯಂಡರ್ಸನ್ ವಿಶ್ವಾಸ
Team Udayavani, Aug 26, 2020, 7:55 PM IST
ಸೌತಾಂಪ್ಟನ್: ಇಂಗ್ಲೆಂಡಿನ ವೇಗಿ ಜೇಮ್ಸ್ ಆ್ಯಂಡರ್ಸನ್ ಕೋವಿಡ್-19 ಕಾಲದ ದಾಖಲೆಯ ವೀರನಾಗಿ ಹೊರಹೊಮ್ಮಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ 600 ವಿಕೆಟ್ ಉರುಳಿಸಿದ ವಿಶ್ವದ ಪ್ರಥಮ ವೇಗದ ಬೌಲರ್ ಎಂಬುದು ಅವರ ಮಹತ್ಸಾಧನೆ.
ಮಂಗಳವಾರ ಸೌತಾಂಪ್ಟನ್‌ನಲ್ಲಿ ಪ್ರವಾಸಿ ಪಾಕಿಸ್ಥಾನ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ನಾಯಕ ಅಜರ್ ಅಲಿ ಅವರನ್ನು ಕೀಪರ್ ರೂಟ್‌ಗೆ ಕ್ಯಾಚ್ ಕೊಡಿಸುವ ಮೂಲಕ ಆ್ಯಂಡಿ ಹೊಸ ಇತಿಹಾಸ ಬರೆದರು. ಈ ಸಂದರ್ಭದಲ್ಲಿ 700 ವಿಕೆಟ್‌ಗಳನ್ನು ಬೇಟೆಯಾಡುವ ಆತ್ಮವಿಶ್ವಾಸವನ್ನೂ ಹೊರಗೆಡಹಿದರು.
“600 ವಿಕೆಟ್‌ಗಳ ಗುರಿ ಈಡೇರಿದೆ. 700 ವಿಕೆಟ್ ಬಗ್ಗೆ ನಾನು ಮತ್ತು ನಾಯಕ ರೂಟ್ ಸುಮ್ಮನೆ ಒಂದು ಚಾಟ್ ಮಾಡಿದ್ದೇವೆ. ಇದು ಸಾಧ್ಯವಾಗದೇಕೆ ಎಂಬುದು ನನ್ನ ಪ್ರಶ್ನೆ. ಫಿಟ್‌ನೆಸ್ ಕಾಯ್ದುಕೊಳ್ಳಲು ನಾನು ಕಠಿನ ಶ್ರಮ ಹಾಕುತ್ತಿದ್ದೇನೆ. ಬೇಸಗೆಯುದ್ದಕ್ಕೂ ನನ್ನ ಬೌಲಿಂಗ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ ಈ ಟೆಸ್ಟ್‌ನಲ್ಲಿ ಉತ್ತಮ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಎಲ್ಲಿಯ ತನಕ ಈ ಮಟ್ಟವನ್ನು ಕಾಯ್ದುಕೊಳ್ಳುತ್ತೇನೋ ಅಲ್ಲಿಯ ತನಕ ಮುಂದುವರಿಯುತ್ತೇನೆ. ಇಂಗ್ಲೆಂಡ್ ಪರ ನನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದಾಗಿದೆ ಎಂದು ನನಗನಿಸದು. ನಾನು 700 ವಿಕೆಟ್ ಗಡಿ ತಲುಪಬಲ್ಲೆನೇ? ಏಕೆ ಸಾಧ್ಯವಿಲ್ಲ?’ ಎನ್ನುತ್ತಾರೆ 38 ವರ್ಷದ ಜಿಮ್ಮಿ ಆ್ಯಂಡರ್ಸನ್.
“2003ರ ಟೆಸ್ಟ್ ಪದಾರ್ಪಣೆಯ ದಿನಗಳತ್ತ ತಿರುಗಿ ನೋಡಿದಾಗ 600 ವಿಕೆಟ್‌ಗಳ ಕಲ್ಪನೆಯೇ ನನಗಿರಲಿಲ್ಲ. ನಿಜಕ್ಕೂ ನಾನು ಅದೃಷ್ಟವಂತ. ನನಗೆ ಮತ್ತು ದೇಶದ ಪಾಲಿಗೆ ಇದೊಂದು ಮಹಾನ್ ಗೌರವ’ ಎಂಬುದಾಗಿ ಆ್ಯಂಡಿ ಹೇಳಿದರು. ಬೇಸರವೆಂದರೆ, ಆ್ಯಂಡರ್ಸನ್ ಅವರ ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲು ಸ್ಟೇಡಿಯಂನಲ್ಲಿ ಯಾರೂ ಇಲ್ಲದಿದ್ದುದು!
ಟೆಸ್ಟ್ ಪಂದ್ಯ ಡ್ರಾ
ಸತತ ಮಳೆಯಿಂದಾಗಿ ಇಂಗ್ಲೆಂಡ್-ಪಾಕಿಸ್ಥಾನ ನಡುವಿನ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಇಂಗ್ಲೆಂಡ್ ಸರಿಯಾಗಿ 10 ವರ್ಷಗಳ ಬಳಿಕ ಪಾಕಿಸ್ಥಾನ ವಿರುದ್ಧ ಸರಣಿ ಗೆದ್ದ ಸಾಧನೆ ಮಾಡಿತು. ರೂಟ್ ಪಡೆಯ ಗೆಲುವಿನ ಅಂತರ 1-0. ಫಾಲೋಆನ್ ಪಡೆದಿದ್ದ ಪಾಕಿಸ್ಥಾನವನ್ನು ಮಳೆಯೇ ಕಾಪಾಡಿತು. ಅಂತಿಮ ದಿನ ಆಟ ಆರಂಭವಾದದ್ದೇ ಟೀ ವಿರಾಮದ ಬಳಿಕ. ಆಗ ಪಾಕ್ 2 ವಿಕೆಟಿಗೆ 100 ರನ್ ಮಾಡಿತ್ತು. ಪಂದ್ಯ ಕೊನೆಗೊಳ್ಳುವಾಗ 4 ವಿಕೆಟಿಗೆ 187 ರನ್ ಗಳಿಸಿತ್ತು. ಬಹುಶಃ 599 ವಿಕೆಟ್ ಹಾರಿಸಿ ಕಾಯುತ್ತ ನಿಂತಿದ್ದ ಆ್ಯಂಡರ್ಸನ್ ದಾಖಲೆಗೋಸ್ಕರವೇ ಕೊನೆಯ ದಿನದಾಟ ನಡೆಯಿತೇನೋ!
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-8 ವಿಕೆಟಿಗೆ 583 ಡಿಕ್ಲೇರ್. ಪಾಕಿಸ್ಥಾನ-273 ಮತ್ತು 4 ವಿಕೆಟಿಗೆ 187 (ಬಾಬರ್ ಔಟಾಗದೆ 63, ಅಬಿದ್ ಅಲಿ 42, ಅಜರ್ ಅಲಿ 31, ಆ್ಯಂಡರ್ಸನ್ 45ಕ್ಕೆ 2). ಪಂದ್ಯಶ್ರೇಷ್ಠ: ಜಾಕ್ ಕ್ರಾಲಿ. ಸರಣಿಶ್ರೇಷ್ಠ: ಜಾಸ್ ಬಟ್ಲರ್.
ಎಕ್ಸ್‌ಟ್ರಾ ಇನ್ನಿಂಗ್ಸ್
* ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಇತಿಹಾಸದಲ್ಲಿ 600 ವಿಕೆಟ್ ಕಿತ್ತ ಮೊದಲ ವೇಗಿ. ಈ ಸಾಧನೆಗೈದ ಇಂಗ್ಲೆಂಡಿನ ಪ್ರಥಮ ಬೌಲರ್. ಸಮಕಾಲೀನ ಕ್ರಿಕೆಟ್‌ನಲ್ಲಿ ಇವರ ನಂತರದ ಸ್ಥಾನದಲ್ಲಿರುವ ಬೌಲರ್ ಇಂಗ್ಲೆಂಡಿನವರೇ ಆದ ಸ್ಟುವರ್ಟ್ ಬ್ರಾಡ್ (514 ವಿಕೆಟ್).
* ಆ್ಯಂಡರ್ಸನ್ 29 ಸಲ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತು ಮೆಕ್‌ಗ್ರಾತ್ ಜತೆ ಜಂಟಿ ದ್ವಿತೀಯ ಸ್ಥಾನಿಯಾದರು. ರಿಚರ್ಡ್ ಹ್ಯಾಡ್ಲಿಗೆ ಅಗ್ರಸ್ಥಾನ (36).
* ನಿರ್ದಿಷ್ಟ ಅಂಗಳವೊಂದರಲ್ಲಿ 100 ವಿಕೆಟ್ ಕಿತ್ತ ಏಕೈಕ ಪೇಸ್ ಬೌಲರ್ ಎಂಬುದು ಆ್ಯಂಡಿ ಪಾಲಿನ ಹೆಗ್ಗಳಿಕೆ. ಅವರು ಲಾರ್ಡ್ಸ್ ಅಂಗಳದಲ್ಲಿ 103 ವಿಕೆಟ್ ಉರುಳಿಸಿದ್ದಾರೆ.
* ಆ್ಯಂಡರ್ಸನ್ ಭಾರತದ ವಿರುದ್ಧ ಸರ್ವಾಧಿಕ 110 ವಿಕೆಟ್ ಉರುಳಿಸಿದ್ದಾರೆ. ಭಾರತದೆದುರು ಟೆಸ್ಟ್‌ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆಯೂ ಇವರದ್ದಾಗಿದೆ.
* ಪಂದ್ಯಗಳ ಲೆಕ್ಕಾಚಾರದಲ್ಲಿ ಆ್ಯಂಡರ್ಸನ್ ಅತೀ ನಿಧಾನ ಗತಿಯಲ್ಲಿ 600 ವಿಕೆಟ್ ಬೇಟೆಯಾಡಿದ್ದಾರೆ (156 ಟೆಸ್ಟ್). ಎಸೆತಗಳ ಲೆಕ್ಕಾಚಾರದಲ್ಲಿ 2ನೇ ಅತೀ ವೇಗದ ಸಾಧನೆ (33,717 ಎಸೆತ). ಮುರಳೀಧರನ್ 600 ವಿಕೆಟ್‌ಗಳಿಗೆ 3,711 ಎಸೆತವಿಕ್ಕಿದ್ದು ದಾಖಲೆ.
* ಆ್ಯಂಡರ್ಸನ್ ಅವರ 165 ವಿಕೆಟ್‌ಗಳು ಕೀಪರ್ ಕ್ಯಾಚ್ ಮೂಲಕ ಬಂದಿರುವುದು ಟೆಸ್ಟ್ ಇತಿಹಾಸದಲ್ಲೊಂದು ದಾಖಲೆ.
* ಆ್ಯಂಡರ್ಸನ್ ತವರಿನ ಇಂಗ್ಲೆಂಡ್ ಅಂಗಳಗಳಲ್ಲಿ ಅತ್ಯಧಿಕ 384 ವಿಕೆಟ್ ಉರುಳಿಸಿದ್ದು, ಇದು ಪೇಸ್ ಬೌಲರ್ ಒಬ್ಬನ ಅತ್ಯುತ್ತಮ ಸಾಧನೆಯಾಗಿದೆ. ಮುರಳೀಧರನ್ ಲಂಕಾ ನೆಲದಲ್ಲಿ 493 ವಿಕೆಟ್ ಕೆಡವಿದ್ದು ದಾಖಲೆ.
* ಇಂಗ್ಲೆಂಡ್ 2010ರ ಬಳಿಕ ಪಾಕಿಸ್ಥಾನ ವಿರುದ್ಧ ಟೆಸ್ಟ್ ಸರಣಿ ಜಯಿಸಿತು. ಅಂದಿನ ತವರಿನ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿತ್ತು.
* ಪಾಕಿಸ್ಥಾನ ಕಳೆದ 58 ವರ್ಷಗಳಲ್ಲಿ 2ನೇ ಸಲ ಫಾಲೋಆನ್ ಬಳಿಕವೂ ಪಂದ್ಯವೊಂದನ್ನು ಉಳಿಸಿಕೊಂಡಿತು. ಆಸ್ಟ್ರೇಲಿಯ ಎದುರಿನ 1994ರ ರಾವಲ್ಪಿಂಡಿ ಟೆಸ್ಟ್ ಪಂದ್ಯದ ವೇಳೆಯೂ ಪಾಕ್ ಸೋಲಿನಿಂದ ಪಾರಾಗಿತ್ತು.
* ಅಜರ್ ಅಲಿ ಈ ಪಂದ್ಯದಲ್ಲಿ 172 ರನ್ ಬಾರಿಸಿದರು. ಇದು ಇಂಗ್ಲೆಂಡ್ ನೆಲದಲ್ಲಿ ಪಾಕ್ ಕಪ್ತಾನನೊಬ್ಬನ 2ನೇ ಅತ್ಯುತ್ತಮ ಸಾಧನೆ. 1976ರ ಲಾರ್ಡ್ಸ್ ಟೆಸ್ಟ್‌ನಲ್ಲಿ ಹನೀಫ್ ಮೊಹಮ್ಮದ್ ಮೊದಲ ಇನ್ನಿಂಗ್ಸ್‌ನಲ್ಲಿ 187 ರನ್ ಬಾರಿಸಿದ್ದು ದಾಖಲೆ. ದ್ವಿತೀಯ ಸರದಿಯಲ್ಲಿ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.